ಆನ್ಲೈನ್ ಜೂಜಿನ ಗೀಳು ಹತ್ತಿಸಿಕೊಂಡಿದ್ದ ವ್ಯಕ್ತಿಯೊಬ್ಬ ಒಡವೆಗಾಗಿ ವೃದ್ಧೆಯನ್ನು ಕೊಂದು, ಮನೆಗೆ ಬೆಂಕಿ ಹಚ್ಚಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 35 ವರ್ಷದ ವ್ಯಕ್ತಿಯೊಬ್ಬ 74 ವರ್ಷದ ಮಹಿಳೆಯನ್ನು ಕೊಂದು ಚಿನ್ನಾಭರಣ ಕದಿಯಲು ಯತ್ನಿಸಿದ ಘಟನೆ ನಡೆದಿದೆ.
ಅಪರಾಧ ಮಾಡಿದ ನಂತರ, ಸಾಕ್ಷ್ಯ ನಾಶಪಡಿಸಲು ಮನೆಗೆ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಭಿಮನ್ಯು ಗುಪ್ತಾ ಒಬ್ಬಂಟಿಯಾಗಿರುವ ಸೇವಾಮೇರಿ ಅಗಸ್ಟಿನ್ ನಡಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಗಸ್ಟ್ 14 ರಂದು ಜಟೆವಾಡದಲ್ಲಿ ಈ ಘಟನೆ ನಡೆದಿದೆ ಎಂದು ಭಿವಂಡಿ ತಾಲೂಕು ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಸೇವಾಮೇರಿ ಅಗಸ್ಟಿನ್ ನಾಡಾರ್ ಒಬ್ಬಳೇ ಇದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ. ನಂತರ ಮನೆಯನ್ನು ಲೂಟಿ ಮಾಡಿ ಆಕೆಯ ಚಿನ್ನಾಭರಣಗಳನ್ನು ದೋಚಿದ್ದರು. ಬಳಿಕ ಸಾಕ್ಷ್ಯ ನಾಶಪಡಿಸಲು ಮನೆಗೆ ಬೆಂಕಿ ಹಚ್ಚಿದ್ದರು. ಆದರೆ ಪೊಲೀಸರು ಶನಿವಾರ ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಮತ್ತಷ್ಟು ಓದಿ: ಸಣ್ಣ ವಾಗ್ವಾದ, ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದು ಆರೋಪಿ ಪರಾರಿ
ಆತ ಆನ್ಲೈನ್ ಜೂಜಿನ ಚಟ ಹೊಂದಿದ್ದು, 2 ಲಕ್ಷ ರೂ. ಸಾಲ ಮಾಡಿದ್ದ ಎಂಬುದು ತಿಳಿದುಬಂದಿದೆ. ಹೇಗಾದರೂ ಹಣ ಗಳಿಸಬೇಕೆಂದು ಮನೆಯನ್ನು ಲೂಟಿ ಮಾಡಿದ್ದಾನೆ. ಆರೋಪಿ ಸೇವಾಮೇರಿ ಅಗಸ್ಟಿನ್ ನಾಡರ್ ಅವರ ಪುತ್ರ ನಡೆಸುತ್ತಿದ್ದ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ. ಅವರನ್ನು ಆಗಸ್ಟ್ 28ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಇಂಥದ್ದೇ ಮತ್ತೊಂದು ಘಟನೆ
ಆನ್ಲೈನ್ ಗೇಮಿನ ಚಟಕ್ಕೆ ಬಲಿಯಾಗಿದ್ದ ವ್ಯಕ್ತಿ ಉತ್ತರ ಪ್ರದೇಶದಲ್ಲಿ ತನ್ನ ತಾಯಿಯನ್ನು ಹತ್ಯೆ ಮಾಡಿದ್ದ, ತಾಯಿಯ ವಿಮೆಯನ್ನು ಪಡೆದು ಸಾಲವನ್ನು ತೀರಿಸಲು ಹೊಂಚು ಹಾಕಿದ್ದ ಎನ್ನಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ