ಜಮ್ಮು ಕಾಶ್ಮೀರದಲ್ಲಿ ಕೇವಲ 59 ಪಾಕಿಸ್ತಾನಿ ಉಗ್ರರು, 17 ಸ್ಥಳೀಯ ಭಯೋತ್ಪಾದಕರು ಸಕ್ರಿಯ; ಸರ್ಕಾರಿ ಮಾಹಿತಿ

ಹಿಜ್ಬುಲ್ ಮುಜಾಹಿದ್ದೀನ್ (HM), ಜೈಶ್-ಎ-ಮೊಹಮ್ಮದ್ (JEM), ಮತ್ತು ಲಷ್ಕರ್-ಎ-ತೈಬಾ (LeT) ಸಂಘಟನೆಯ ಒಟ್ಟು 59 ಪಾಕಿಸ್ತಾನಿ ಭಯೋತ್ಪಾದಕರು ಮಾತ್ರ ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ. ಹಾಗೇ, 17 ಸ್ಥಳೀಯ ಉಗ್ರರು ಇನ್ನೂ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಜಮ್ಮು ಕಾಶ್ಮೀರದಲ್ಲಿ ಕೇವಲ 59 ಪಾಕಿಸ್ತಾನಿ ಉಗ್ರರು, 17 ಸ್ಥಳೀಯ ಭಯೋತ್ಪಾದಕರು ಸಕ್ರಿಯ; ಸರ್ಕಾರಿ ಮಾಹಿತಿ
Kashmir Terrorists

Updated on: Mar 13, 2025 | 9:31 PM

ಶ್ರೀನಗರ, (ಮಾರ್ಚ್ 13): ಭಯೋತ್ಪಾದಕರು ಭಾರತದ ಮಣ್ಣನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುವುದನ್ನು ತಡೆಯಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (HM), ಜೈಶ್-ಎ-ಮೊಹಮ್ಮದ್ (JEM), ಮತ್ತು ಲಷ್ಕರ್-ಎ-ತೈಬಾ (LeT) ನಿಂದ ಒಟ್ಟು 59 ಪಾಕಿಸ್ತಾನಿ ಭಯೋತ್ಪಾದಕರು ಮಾತ್ರ ಸಕ್ರಿಯರಾಗಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಸಕ್ರಿಯವಾಗಿರುವ ಸ್ಥಳೀಯ ಭಯೋತ್ಪಾದಕರ ಸಂಖ್ಯೆ 17. ಜಮ್ಮು ಪ್ರದೇಶದಲ್ಲಿ ಕೇವಲ 3 ಸ್ಥಳೀಯ ಭಯೋತ್ಪಾದಕರು ಮತ್ತು ಇಡೀ ಕಣಿವೆಯಲ್ಲಿ 14 ಜನರಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ಸಕ್ರಿಯ ವಿದೇಶಿ ಭಯೋತ್ಪಾದಕರ ಸಂಖ್ಯೆ 59 ಆಗಿದ್ದು, ಅದರಲ್ಲಿ 3 ಹಿಜ್ಬುಲ್ ಮುಜಾಹಿದ್ದೀನ್, 21 ಜೈಶ್-ಎ-ಮೊಹಮ್ಮದ್ ಮತ್ತು 21 ಲಷ್ಕರ್-ಎ-ತೈಬಾದವರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗೇ, ಜಮ್ಮು ಪ್ರದೇಶದಲ್ಲಿ ಸಕ್ರಿಯ ಸ್ಥಳೀಯ ಭಯೋತ್ಪಾದಕರ ಸಂಖ್ಯೆ 3 ಮತ್ತು ಕಣಿವೆಯಲ್ಲಿ ಸಕ್ರಿಯ ಸ್ಥಳೀಯ ಭಯೋತ್ಪಾದಕರ ಸಂಖ್ಯೆ 14.

ಇದನ್ನೂ ಓದಿ: ಕದ್ದ ಭೂಮಿಯನ್ನು ಹಿಂದಿರುಗಿಸಿದರೆ ಕಾಶ್ಮೀರದ ಸಮಸ್ಯೆ ಬಗೆಹರಿಯುತ್ತೆ: ಎಸ್ ಜೈಶಂಕರ್

ಮಣಿಪುರದಲ್ಲಿ ಫೆಬ್ರವರಿ 16 ಮತ್ತು ಮಾರ್ಚ್ 7ರ ನಡುವೆ ಒಟ್ಟು 990 ಶಸ್ತ್ರಾಸ್ತ್ರಗಳನ್ನು ಶರಣಾಗಿಸಲಾಗಿದೆ. 11,526 ಸುತ್ತು ಮದ್ದುಗುಂಡುಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, 366 ಹ್ಯಾಂಡ್ ಗ್ರೆನೇಡ್‌ಗಳು, 230 ಬಾಂಬ್‌ಗಳು ಮತ್ತು 10 ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಳ್ಳಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ