ಉತ್ತರ ಪ್ರದೇಶ: ವರರಿಲ್ಲದೆ ನಡೆಯಿತು ಸುಳ್ಳು ಸಾಮೂಹಿಕ ವಿವಾಹ, ನಟಿಸಿದವರಿಗೆ ಸಿಕ್ಕಿತ್ತು ಹಣ

ಸರ್ಕಾರದ ಯೋಜನೆಯನ್ನು ದುರುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಸುಳ್ಳು ಸಾಮೂಹಿಕ ನಡೆದಿದೆ. ಮದುವೆಯಾದವರೇ ಮತ್ತೆ ಮದುವೆಯಾಗಿದ್ದು, ಇನ್ನೂ ಕೆಲವರು ಕಾರ್ಯಕ್ರಮ ನೋಡಲು ಬಂದವರನ್ನೂ ಅಲ್ಲಿ ಕೂರಿಸಲಾಗಿತ್ತು, ಇನ್ನೂ ಕೆಲವು ಹೆಣ್ಣುಮಕ್ಕಳು ತಮಗೆ ತಾವೇ ಹಾರ ಹಾಕಿಕೊಂಡಿದ್ದರು.

ಉತ್ತರ ಪ್ರದೇಶ: ವರರಿಲ್ಲದೆ ನಡೆಯಿತು ಸುಳ್ಳು ಸಾಮೂಹಿಕ ವಿವಾಹ, ನಟಿಸಿದವರಿಗೆ ಸಿಕ್ಕಿತ್ತು ಹಣ
ಮದುವೆ

Updated on: Feb 04, 2024 | 11:32 AM

ಉತ್ತರ ಪ್ರದೇಶದಲ್ಲಿ ವರನಿಲ್ಲದೆ ಸುಳ್ಳು ಸಾಮೂಹಿಕ ವಿವಾಹ ನಡೆದಿದೆ, ಸರ್ಕಾರದ ಮುಖ್ಯಮಂತ್ರಿ ಗ್ರೂಪ್ ಮ್ಯಾರೇಜ್​ ಸ್ಕೀಮ್​ನ್ನು ದುರುಪಯೋಗಪಡಿಸಿಕೊಳ್ಳಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ವರನಿಲ್ಲದೆ ಕೇವಲ ವಧುಗಳಿಂದಲೇ ಮದುವೆ ನಡೆದಿದೆ. ಎಲ್ಲಾ ಹೆಣ್ಣುಮಕ್ಕಳು ತಮಗೆ ತಾವೇ ಹಾರ ಹಾಕಿಕೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ವಿವಾಹ ವಂಚನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ 15 ಜನರನ್ನು ಬಂಧಿಸಲಾಗಿದೆ.
ಬಾಲಿಯಾ ಜಿಲ್ಲೆಯಲ್ಲಿ ಜನವರಿ 25 ರಂದು ನಡೆದ ಸಮುದಾಯ ವಿವಾಹವು ಆರಂಭದಲ್ಲಿ ಸುಮಾರು 568 ಜೋಡಿಗಳು ಕಂಡು ಬಂದಿತ್ತು.

ತನಿಖೆಯ ಬಳಿಕ ದಂಪತಿಯಾಗಿ ನಟಿಸಲು ಇಬ್ಬರಿಗೂ 500ರಿಂದ 2 ಸಾವಿರ ರೂ. ನೀಡಲಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯಲ್ಲಿ ವಂಚನೆ ಆರೋಪದ ಮೇಲೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಹಾಗೂ ಎಂಟು ಫಲಾನುಭವಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜ.25ರಂದು ಮಣಿಯಾರ್ ಇಂಟರ್ ಕಾಲೇಜಿನಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಈಗಾಗಲೇ ಮದುವೆಯಾಗಿದ್ದ ಅನೇಕರು ಮತ್ತೆ ಮದುವೆಯಾಗಿದ್ದಾರೆ ಎನ್ನಲಾಗಿದೆ.

ಕೆಲವು ಮಹಿಳೆಯರಿಗೆ ಯಾರೂ ಇರಲಿಲ್ಲ. ಅವರೇ ವರಮಾಲಾ (ಮಾಲೆ) ಧರಿಸಿದ್ದರು. ಮದುವೆ ನೋಡಲು ಹೋಗಿದ್ದ 19 ವರ್ಷದ ಯುವಕನಿಗೆ ಹಣ ನೀಡಿ ಇತರ ವಧು-ವರರ ಜೊತೆ ಕೂರಿಸಲಾಗಿತ್ತು.
ಸಮುದಾಯ ವಿವಾಹದಲ್ಲಿ ಬಿಜೆಪಿ ಶಾಸಕ ಕೇತ್ಕಿ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಪಾದಿತ ವಂಚನೆಯಲ್ಲಿ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಿಂಗ್, ಕಾರ್ಯಕ್ರಮ ಕೇವಲ ಎರಡು ದಿನಗಳ ಮೊದಲು ಅವರು ನನಗೆ ಮಾಹಿತಿ ನೀಡಿದ್ದರು. ನನಗೆ ಅವಮಾನವಾಗಿದೆ, ಆದರೆ ಈಗ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಮತ್ತಷ್ಟು ಓದಿ: Telangana: ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿರುವಾಗ ಕುಸಿದು ಬಿದ್ದು ಯುವಕ ಸಾವು

ಯುಪಿ ಸರ್ಕಾರದ ಯೋಜನೆಯು 51,000 ರೂಗಳನ್ನು ನೀಡುತ್ತದೆ, ಹುಡುಗಿಗೆ 35,000ರೂ. ಮದುವೆಯ ಸಾಮಗ್ರಿಗಾಗಿ 10,000 ರೂ. ಮತ್ತು ಕಾರ್ಯಕ್ರಮಕ್ಕಾಗಿ 6,000.ರೂ. ಇದಕ್ಕೂ ಮುನ್ನ ಮಾತನಾಡಿದ ಜಿಲ್ಲಾಧಿಕಾರಿ ರವೀಂದ್ರಕುಮಾರ್, ಮನಿಯಾರ ಅಭಿವೃದ್ಧಿ ಬಡಾವಣೆಯಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಫಲಾನುಭವಿಗಳಿಗೆ ಇನ್ನೂ ಹಣ ವಿತರಣೆಯಾಗಿಲ್ಲ.

ಸಹಾಯಕ ಅಭಿವೃದ್ಧಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆಯಲ್ಲಿ ಎಂಟು ಫಲಾನುಭವಿಗಳು ತಪ್ಪಿತಸ್ಥರೆಂದು ಕಂಡುಬಂದಿದೆ” ಎಂದು ಕುಮಾರ್ ಹೇಳಿದರು. ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಫಲಾನುಭವಿಗಳ ತನಿಖೆಗೆ ಮೂರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ, ಸಮಗ್ರ ತನಿಖೆ ಮುಗಿಯುವವರೆಗೆ ಯಾವುದೇ ಪ್ರಯೋಜನಗಳನ್ನು ವರ್ಗಾಯಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲಾಗಿದೆ.

ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯಡಿಯಲ್ಲಿ ವಂಚನೆಯ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಮಾಜ ಕಲ್ಯಾಣ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಮತ್ತು ಎಂಟು ಫಲಾನುಭವಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಬುಧವಾರ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ