ನಿಮ್ಮ ಜಿಲ್ಲೆ ಯಾವ ಕೆಟಗರಿಯಲ್ಲಿದೆ ಅನ್ನೋದರ ಮೇಲೆ ಲಾಕ್​ಡೌನ್ ಭವಿಷ್ಯ ನಿರ್ಧಾರ!

|

Updated on: Apr 27, 2020 | 1:53 PM

ದೆಹಲಿ: ನೆರೆಯ ಚೀನಾ ಹುಟ್ಟುಹಾಕಿರುವ ಡ್ರ್ಯಾಗನ್ ವೈರಸ್​ ಇಡೀ ಜಗತ್ತಿನಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಭಾರತವೂ ಇದರಿಂದ ಹೊರತಾಗಿಲ್ಲ. ಆದ್ರೆ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಲಾಕ್​ಡೌನ್​​ ಮಾರ್ಗಸೂಚಿಗಳು ಇತರೆ ದೇಶಗಳಿಗೂ ದಾರಿದೀಪವಾಗಿ ಗೋಚರಿಸಿದೆ. ಹಾಗಾಗಿ ಲಾಕ್​ಡೌ​ನ್ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಮಧ್ಯೆ, ಲಾಕ್​ಡೌನ್​ನಿಂದ ತಕ್ಷಣಕ್ಕೆ ಜನಜೀವನ ಏರುಪೇರಾಗಿದೆ. ಜನಕ್ಕೂ ಈ ಲಾಕ್​ಡೌನ್​ ಸಾಕಪ್ಪಾ ಅನಿಸಿದೆ. ಆದ್ರೆ ನಿಮ್ಮ ಜಿಲ್ಲೆ ಯಾವ ಕೆಟಗರಿಯಲ್ಲಿದೆ ಅನ್ನೋದರ ಮೇಲೆ ಲಾಕ್​ಡೌನ್ ಭವಿಷ್ಯ […]

ನಿಮ್ಮ ಜಿಲ್ಲೆ ಯಾವ ಕೆಟಗರಿಯಲ್ಲಿದೆ ಅನ್ನೋದರ ಮೇಲೆ ಲಾಕ್​ಡೌನ್ ಭವಿಷ್ಯ ನಿರ್ಧಾರ!
Follow us on

ದೆಹಲಿ: ನೆರೆಯ ಚೀನಾ ಹುಟ್ಟುಹಾಕಿರುವ ಡ್ರ್ಯಾಗನ್ ವೈರಸ್​ ಇಡೀ ಜಗತ್ತಿನಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಭಾರತವೂ ಇದರಿಂದ ಹೊರತಾಗಿಲ್ಲ. ಆದ್ರೆ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಲಾಕ್​ಡೌನ್​​ ಮಾರ್ಗಸೂಚಿಗಳು ಇತರೆ ದೇಶಗಳಿಗೂ ದಾರಿದೀಪವಾಗಿ ಗೋಚರಿಸಿದೆ.

ಹಾಗಾಗಿ ಲಾಕ್​ಡೌ​ನ್ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಮಧ್ಯೆ, ಲಾಕ್​ಡೌನ್​ನಿಂದ ತಕ್ಷಣಕ್ಕೆ ಜನಜೀವನ ಏರುಪೇರಾಗಿದೆ. ಜನಕ್ಕೂ ಈ ಲಾಕ್​ಡೌನ್​ ಸಾಕಪ್ಪಾ ಅನಿಸಿದೆ. ಆದ್ರೆ ನಿಮ್ಮ ಜಿಲ್ಲೆ ಯಾವ ಕೆಟಗರಿಯಲ್ಲಿದೆ ಅನ್ನೋದರ ಮೇಲೆ ಲಾಕ್​ಡೌನ್ ಭವಿಷ್ಯ ನಿರ್ಧಾರವಾಗಲಿದೆ.

ಈ ಬಗ್ಗೆ ಇಂದು ನಡೆದ ಪ್ರಧಾನಿ ಮೋದಿ ವಿಡಿಯೋ ಸಂವಾದ ಸುಳಿವು ನೀಡಿದೆ. ದೇಶದಲ್ಲಿ 300 ಜಿಲ್ಲೆ ಕೊರೊನಾ ಮುಕ್ತವಾಗಿವೆ‌. ಹಾಗಾಗಿ 300 ಜಿಲ್ಲೆಗಳಿಗೆ ಲಾಕ್​ಡೌನ್​ನಿಂದ ವಿನಾಯಿತಿ ಸಿಗಲಿದೆ. ಇನ್ನು, 127 ಜಿಲ್ಲೆಗಳು ರೆಡ್ ಜೋನ್​ನಲ್ಲಿವೆ‌. 127 ಜಿಲ್ಲೆಗಳಿಗೆ ಲಾಕ್​ಡೌನ್​ನಿಂದ ವಿನಾಯಿತಿ ಸಿಗಲ್ಲ‌. 297 ಜಿಲ್ಲೆಗಳಲ್ಲಿ ಐದಕ್ಕಿಂತ ಹೆಚ್ಚಿನ ಕೊರೊನಾ ಪಾಸಿಟಿವ್ ಪ್ರಕರಣಗಳಿವೆ‌. ಅಲ್ಲಿ ಬಿಲ್ಕುಲ್ ಲಾಕ್​ಡೌನ್​ಗೆ ವಿನಾಯ್ತಿ ಇಲ್ಲವೇ ಇಲ್ಲ.

ಆಯಾ ರಾಜ್ಯಗಳು ತಮ್ಮ ರಾಜ್ಯದಲ್ಲಿನ ಕೊರೊನಾ ಸ್ಥಿತಿಗೆ ಅನುಗುಣವಾಗಿ ಲಾಕ್ ಡೌನ್ ವಿನಾಯಿತಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು . ಹೀಗಾಗಿ ಕೊರೊನಾ ಪಾಸಿಟಿವ್ ಪ್ರಕರಣ ಕಡಿಮೆ ಇರುವ ಜಿಲ್ಲೆಯಲ್ಲಿ ಲಾಕ್ ಡೌನ್ ವಿನಾಯಿತಿ ನೀಡುವುದು ರಾಜ್ಯದ ವಿವೇಚನೆಗೆ ಬಿಟ್ಟ ವಿಚಾರ ಎಂದು ತಿಳಿದುಬಂದಿದೆ.

Published On - 1:45 pm, Mon, 27 April 20