ಅಕೋಲಾ: ನವೆಂಬರ್ 19ರಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನದ ಸಂದರ್ಭದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಮಹಿಳೆಯರು ಮಾತ್ರ ನಡೆಯಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಗುರುವಾರ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆಯು ಮಹಾರಾಷ್ಟ್ರದ ಮೂಲಕ ಹಾದುಹೋಗುತ್ತಿದೆ. ನಾಂದೇಡ್ನಿಂದ ಪಾದಯಾತ್ರೆ ಆರಂಭವಾಗಿ ಹಿಂಗೋಲಿ ಮತ್ತು ವಾಶಿಮ್ ಜಿಲ್ಲೆಗಳಿಗೆ ಆಗಮಿಸಿತ್ತು. ಇದೀಗ ಅಕೋಲಾ ಮತ್ತು ಬುಲ್ಧಾನ ಜಿಲ್ಲೆಗಳಿಗೂ ಬರಲಿದೆ. ನವೆಂಬರ್ 20 ರಂದು ಮಧ್ಯಪ್ರದೇಶಕ್ಕೆ ಬರಲಿದೆ.
ನವೆಂಬರ್ 19ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಅಕೋಲಾ ಜಿಲ್ಲೆಯ ವಡೆಗಾಂವ್ದಿಂದ ಮಹಿಳೆಯರು ಮಾತ್ರ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಸಂವಹನ ಮತ್ತು ಪ್ರಚಾರ ವಿಭಾಗದ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್ ಸುದ್ದಿಗಾರರಿಗೆ ತಿಳಿಸಿದರು.
ಇದನ್ನು ಓದಿ: ಭಾರತ್ ಜೋಡೋ ಯಾತ್ರೆ: 3,570 ಕಿಮೀ ಪ್ರಯಾಣ, ಮುಂದಿನ 150 ದಿನ ಕಂಟೈನರ್‌ನಲ್ಲಿ ರಾಹುಲ್ ಗಾಂಧಿ ವಾಸ್ತವ್ಯ
ಕಾಂಗ್ರೆಸ್ ಮತ್ತು ಅದರ ಅಂಗಸಂಸ್ಥೆಗಳ ಮಹಿಳಾ ಕಾರ್ಯಕರ್ತರು ನವೆಂಬರ್ 19 ರಂದು ಯಾತ್ರೆಯ ಎರಡೂ ಹಂತಗಳಲ್ಲಿ (ಊಟದ ಪೂರ್ವ ಮತ್ತು ಊಟದ ನಂತರ) ಭಾಗವಹಿಸಲಿದ್ದಾರೆ. ಮಹಾರಾಷ್ಟ್ರ ಮತ್ತು ದೇಶದ ಇತರ ಭಾಗಗಳಿಂದ ಪಕ್ಷದ ಮಹಿಳಾ ಸಾರ್ವಜನಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ