ಆಪರೇಷನ್ ಬ್ಲೂ ಸ್ಟಾರ್ ಒಂದು ಮಿಸ್ಟೇಕ್, ಇಂದಿರಾ ಗಾಂಧಿ ತಮ್ಮ ಜೀವವನ್ನೇ ತೆತ್ತರು; ಪಿ. ಚಿದಂಬರಂ

ಪಂಜಾಬ್‌ನ ಸುವರ್ಣ ದೇವಾಲಯವನ್ನು ಮರಳಿ ಪಡೆಯಲು 1984ರ ಆಪರೇಷನ್ ಬ್ಲೂ ಸ್ಟಾರ್ ಆರಂಭಿಸಿದ್ದು ಒಂದು ತಪ್ಪು ಆಯ್ಕೆಯಾಗಿತ್ತು ಎಂದು ಹಿರಿಯ ಕಾಂಗ್ರೆಸ್ ನಾಯಕ ಚಿದಂಬರಂ ಹೇಳಿದ್ದಾರೆ. ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ನಡೆದ ಖುಷ್ವಂತ್ ಸಿಂಗ್ ಸಾಹಿತ್ಯ ಉತ್ಸವದಲ್ಲಿ ಪತ್ರಕರ್ತ ಹರಿಂದರ್ ಬವೇಜಾ ಅವರ 'ದೆ ವಿಲ್ ಶೂಟ್ ಯು, ಮೇಡಂ' ಪುಸ್ತಕದ ಕುರಿತು ನಡೆದ ಚರ್ಚೆಯಲ್ಲಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಈ ಹೇಳಿಕೆ ನೀಡಿದ್ದಾರೆ.

ಆಪರೇಷನ್ ಬ್ಲೂ ಸ್ಟಾರ್ ಒಂದು ಮಿಸ್ಟೇಕ್, ಇಂದಿರಾ ಗಾಂಧಿ ತಮ್ಮ ಜೀವವನ್ನೇ ತೆತ್ತರು; ಪಿ. ಚಿದಂಬರಂ
P Chidambaram

Updated on: Oct 12, 2025 | 3:03 PM

ನವದೆಹಲಿ, ಅಕ್ಟೋಬರ್ 12: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ (Indira Gandhi) ಸೂಚನೆಯ ಮೇರೆಗೆ ಆಪರೇಷನ್ ಬ್ಲೂ ಸ್ಟಾರ್ ಅನ್ನು ನಡೆಸಲಾಯಿತು. ಆದರೆ ಅದು ‘ತಪ್ಪು’ ನಿರ್ಧಾರವಾಗಿತ್ತು. ಪಂಜಾಬ್‌ನ ಅಮೃತಸರದಲ್ಲಿರುವ ಸ್ವರ್ಣ ದೇವಾಲಯದಿಂದ ಭಯೋತ್ಪಾದಕರನ್ನು ಹೊರದಬ್ಬಲು ಆಯ್ದುಕೊಂಡ ‘ತಪ್ಪು ಮಾರ್ಗ’ ಅದಾಗಿತ್ತು. ಆ ನಿರ್ಧಾರದಿಂದಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಪ್ರಾಣವನ್ನೇ ತೆರಬೇಕಾಯಿತು ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ನಡೆದ ಖುಷ್ವಂತ್ ಸಿಂಗ್ ಸಾಹಿತ್ಯ ಉತ್ಸವದಲ್ಲಿ ಪತ್ರಕರ್ತ ಹರಿಂದರ್ ಬವೇಜಾ ಅವರ ‘ದೆ ವಿಲ್ ಶೂಟ್ ಯು, ಮೇಡಂ’ ಪುಸ್ತಕದ ಕುರಿತು ನಡೆದ ಚರ್ಚೆಯಲ್ಲಿ 80 ವರ್ಷದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Watch ಆಪರೇಷನ್ ಬ್ಲೂಸ್ಟಾರ್​​ನ 38ನೇ ವಾರ್ಷಿಕೋತ್ಸವ ವೇಳೆ ಸ್ವರ್ಣ ಮಂದಿರದಲ್ಲಿ ಖಲಿಸ್ತಾನ್ ಪರ ಘೋಷಣೆ

“ಎಲ್ಲಾ ಉಗ್ರಗಾಮಿಗಳನ್ನು ಸೆರೆಹಿಡಿಯಲು ಒಂದು ಮಾರ್ಗವಿತ್ತು. ಆದರೆ ಆಪರೇಷನ್ ಬ್ಲೂ ಸ್ಟಾರ್ ತಪ್ಪು ಮಾರ್ಗವಾಗಿತ್ತು. ಆ ತಪ್ಪಿಗೆ ಇಂದಿರಾ ಗಾಂಧಿಯವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು ಎಂದು ನಾನು ಒಪ್ಪುತ್ತೇನೆ. ಆದರೆ ಆ ತಪ್ಪು ಸೇನೆ, ಪೊಲೀಸ್, ಗುಪ್ತಚರ ಮತ್ತು ನಾಗರಿಕ ಸೇವೆಯ ಒಟ್ಟು ನಿರ್ಧಾರವಾಗಿತ್ತು. ಆ ನಿರ್ಧಾರಕ್ಕೆ ನೀವು ಇಂದಿರಾ ಗಾಂಧಿಯವರನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ” ಎಂದು ಪಿ. ಚಿದಂಬರಂ ಹೇಳಿದ್ದಾರೆ.


“ಹಾಗೆಂದು ನಾನು ಯಾವುದೇ ಮಿಲಿಟರಿ ಅಧಿಕಾರಿಗೆ ಅಗೌರವ ತೋರುವುದಿಲ್ಲ. ಆದರೆ ಆಪರೇಷನ್ ಬ್ಲೂ ಸ್ಟಾರ್ ಗೋಲ್ಡನ್ ಟೆಂಪಲ್ ಅನ್ನು ಹಿಂಪಡೆಯಲು ಸರಿಯಾದ ಮಾರ್ಗವಾಗಿರಲಿಲ್ಲ. ಗೋಲ್ಡನ್ ಟೆಂಪಲ್ ಅನ್ನು ಹಿಂಪಡೆಯಲು ಸೈನ್ಯವನ್ನು ಹೊರಗಿಡಬೇಕಿತ್ತು” ಎಂದು ಮಾಜಿ ಕೇಂದ್ರ ಗೃಹ ಸಚಿವ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪಹಲ್​ಗಾಮ್​ ಉಗ್ರ ಕೃತ್ಯದ ಹಿಂದೆ ಪಾಕಿಸ್ತಾನದ ಕೈವಾಡ; ಹಳೇ ಚಾಳಿ ತೋರಿಸಿದ ಕಾಂಗ್ರೆಸ್,​ ಪುರಾವೆ ಕೇಳಿದ ಚಿದಂಬರಂ

ಏನಿದು ಆಪರೇಷನ್ ಬ್ಲೂ ಸ್ಟಾರ್?:

ಆಪರೇಷನ್ ಬ್ಲೂ ಸ್ಟಾರ್ ಅನ್ನು ಜೂನ್ 1, 1984ರಂದು ಪಂಜಾಬ್​ನ ಗೋಲ್ಡನ್ ಟೆಂಪಲ್ ಒಳಗಿದ್ದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ವಿರುದ್ಧ ಪ್ರಾರಂಭಿಸಲಾಯಿತು. ಜೂನ್ 8ರವರೆಗೆ ನಡೆದ ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ಭದ್ರತಾ ಪಡೆಗಳು ಭಿಂದ್ರಾವಾಲೆಯನ್ನು ಹತ್ಯೆ ಮಾಡಿದರು. ಆದರೆ ಇದು ಅಕಾಲ್ ತಖ್ತ್‌ಗೆ ಹಾನಿಯನ್ನುಂಟುಮಾಡಿತು. ಇದು ಸಿಖ್ ಸಮುದಾಯದಲ್ಲಿ ವ್ಯಾಪಕ ಕೋಪವನ್ನು ಹುಟ್ಟುಹಾಕಿತು. ಈ ಘಟನೆ ನಡೆದ ಕೆಲವು ತಿಂಗಳುಗಳ ನಂತರ ಇಂದಿರಾ ಗಾಂಧಿಯನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ