ಒಡಿಶಾದ ಚಿಲಿಕ ಸರೋವರದಲ್ಲಿ ಅಪರೂಪದ ಸುಂಟರಗಾಳಿ; ಪ್ರವಾಸಿಗರು ಶಾಕ್
ಚಿಲಿಕದ ಪ್ರಧಾನ ದೇವತೆಯಾದ ಕಾಲಿಜೈ ದೇವಾಲಯದ ನೈಋತ್ಯದಲ್ಲಿ ನೂರಾರು ಪ್ರವಾಸಿಗರು ಈ ದೃಶ್ಯವನ್ನು ಆನಂದಿಸುತ್ತಿದ್ದಾರೆ. ನೀರಿನ ಚಿಲುಮೆ ಎಂದೂ ಕರೆಯಲ್ಪಡುವ ಬೃಹತ್ ಸುಂಟರಗಾಳಿ ಕಾಣಿಸಿಕೊಂಡಿತು. ದೇಶಾದ್ಯಂತ ಮಳೆ ಹೆಚ್ಚಾಗಿದ್ದು, ಒಡಿಶಾದಲ್ಲೂ ಜನಜೀವನ ಅಸ್ತವ್ಯಸ್ತವಾಗಿದೆ. ಈ ಸುಂಟರಗಾಳಿಯ ಕ್ಲಿಪ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಖೋರ್ಧಾ, ಅಕ್ಟೋಬರ್ 11: ಒಡಿಶಾದ (Odisha) ಖೋರ್ಧಾ ಜಿಲ್ಲೆಯಲ್ಲಿ ಅಪರೂಪದ ಸುಂಟರಗಾಳಿ ಉಂಟಾಗಿದೆ. ಈ ಅದ್ಭುತ ವಿಡಿಯೋ ಪ್ರವಾಸಿಗರನ್ನು ಅಚ್ಚರಿಗೊಳಿಸಿದೆ. ಇದನ್ನು ನೋಡಿದ ಜನರು ಭಯಭೀತರಾಗಿದ್ದಾರೆ. ಚಿಲಿಕದ ಪ್ರಧಾನ ದೇವತೆಯಾದ ಕಾಲಿಜೈ ದೇವಾಲಯದ ನೈಋತ್ಯದಲ್ಲಿ ನೂರಾರು ಪ್ರವಾಸಿಗರು ಈ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಇಲ್ಲಿ ಅಪರೂಪದ ನೀರಿನ ಚಿಲುಮೆ ಎಂದೂ ಕರೆಯಲ್ಪಡುವ ಬೃಹತ್ ಸುಂಟರಗಾಳಿ ಕಾಣಿಸಿಕೊಂಡಿತು. ಈ ಸುಂಟರಗಾಳಿಯ ಕ್ಲಿಪ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

