AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Operation Kaveri: ಆಪರೇಷನ್​ ಕಾವೇರಿ ಯಶಸ್ವಿ: ಸುಡಾನ್​​ನಿಂದ ತವರಿಗೆ ಬಂದ ಎಲ್ಲ ಭಾರತೀಯರು

ಸುಡಾನ್​​​ನಲ್ಲಿ ನಡೆಯುತ್ತಿರುವ ಯುದ್ಧದಿಂದ ಭಾರತೀಯರನ್ನು ಸುರಕ್ಷಿತವಾಗಿ ಮತ್ತು ಎಲ್ಲ ಭಾರತೀಯರನ್ನು ಕರೆತರಲಾಗಿದೆ.

Operation Kaveri: ಆಪರೇಷನ್​ ಕಾವೇರಿ ಯಶಸ್ವಿ: ಸುಡಾನ್​​ನಿಂದ ತವರಿಗೆ ಬಂದ ಎಲ್ಲ ಭಾರತೀಯರು
Operation Kaveri
Follow us
ಅಕ್ಷಯ್​ ಪಲ್ಲಮಜಲು​​
|

Updated on:May 06, 2023 | 10:41 AM

ದೆಹಲಿ: ಸುಡಾನ್​​​ನಲ್ಲಿ ನಡೆಯುತ್ತಿರುವ ಯುದ್ಧದಿಂದ ಸಿಲುಕಿಕೊಂಡಿರುವ ಎಲ್ಲ  ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಕ್ರಿಯೆ ಸಂಪೂರ್ಣವಾಗಿ ಕೊನೆಗೊಂಡಿದೆ. ಇದೀಗ ಎಲ್ಲ ಭಾರತೀಯರು ಭಾರತಕ್ಕೆ ಬಂದಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.  ಇಂದು (ಮೇ 5) ಖಾರ್ಟೂಮ್‌ನಲ್ಲಿರುವ ಭಾರತೀಯನ್ನು ಸುರಕ್ಷಿತವಾಗಿ ಆಪರೇಷನ್​ ಕಾವೇರಿ (Operation Kaveri) ಮೂಲಕ ಸೌದಿ ಅರೇಬಿಯಾಕ್ಕೆ ಕಳುಹಿಸಿ ಅಲ್ಲಿಂದ ಭಾರತಕ್ಕೆ ಕರೆತರಲಾಗಿದೆ. ಭಾರತವು ಯುದ್ಧ ಪೀಡಿತ ಸುಡಾನ್‌ನಿಂದ ಸುಮಾರು 3,800 ನಾಗರಿಕರನ್ನು ಯಶಸ್ವಿಯಾಗಿ ರಕ್ಷಿಸಿದೆ. ಇಂದು ಮತ್ತೆ ಆಪರೇಷನ್​​ ಕಾವೇರಿ ಮೂಲಕ 47 ಭಾರತೀಯರನ್ನು ಭಾರತೀಯ ವಾಯುಪಡೆಯ C-130J ವಿಮಾನದ ಮೂಲಕ ಜೆಡ್ಡಾದಿಂದ ದೆಹಲಿಗೆ ಹೊರಟಿದೆ.

ಆಪರೇಷನ್ ಕಾವೇರಿ ಅಡಿಯಲ್ಲಿ ಸುಮಾರು 3,800 ಜನರನ್ನು ಈಗ ಸುಡಾನ್‌ನಿಂದ ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ, ಗುರುವಾರ, ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದ 192 ಭಾರತೀಯರು ಅಹಮದಾಬಾದ್‌ಗೆ ಬಂದಿಳಿದರು. ಪೋರ್ಟ್ ಸುಡಾನ್‌ನಿಂದ ಅಹಮದಾಬಾದ್‌ಗೆ ಭಾರತೀಯ ವಾಯುಪಡೆಯ C17 ವಿಮಾನದಲ್ಲಿ ಅವರನ್ನು ಗುಜರಾತ್‌ಗೆ ಕರೆತರಲಾಯಿತು.

ಅದೇ ದಿನ 20 ಭಾರತೀಯರ ಎರಡು ಬ್ಯಾಚ್‌ ಮೂಲಕ 18 ವಿಮಾನಗಳಲ್ಲಿ ಚೆನ್ನೈ ಮತ್ತು ಬೆಂಗಳೂರಿಗೆ ಬಂದಿದ್ದಾರೆ. ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಒಂಬತ್ತು ದಿನಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ಆಪರೇಷನ್ ಕಾವೇರಿ ಅಡಿಯಲ್ಲಿ ಒಟ್ಟು 3,584 ಭಾರತೀಯರನ್ನು ಯುದ್ಧ ಪೀಡಿತ ಸುಡಾನ್‌ನಿಂದ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ:Operation Kaveri: ಲಕ್ನೋ-ಬೌಂಡ್ ವಿಮಾನದ ಮೂಲಕ ಸುಡಾನ್​​​ನಿಂದ ಭಾರತಕ್ಕೆ ಬರುತ್ತಿರುವ 16 ಭಾರತೀಯರು

ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಭಾರತ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಿತ್ತು, ಇದು ಒಂಬತ್ತು ದಿನಗಳ ಕಾರ್ಯಚರಣೆಯ ಪ್ರಮುಖ ಭಾಗವಾಗಿತ್ತು. ಭಾರತೀಯ ನೌಕಾಪಡೆಯ 5 ಹಡಗುಗಳು ಮತ್ತು 16 ಭಾರತೀಯ ವಾಯುಪಡೆಯ ವಿಮಾನಗಳನ್ನು ಬಳಸಿ ಕಾರ್ಯಾಚರಣೆಯನ್ನು ನಡೆಸಲಾಯಿತು, ಇದರಲ್ಲಿ ವಾಡಿ ಸಯ್ಯಿದ್ನಾ ಮಿಲಿಟರಿ ವಾಯುನೆಲೆಯೂ ಸೇರಿದೆ.

ಮಂಗಳವಾರ ದಕ್ಷಿಣ ಸುಡಾನ್‌ನ ವಿದೇಶಾಂಗ ಸಚಿವಾಲಯದ ಹೇಳಿಕೆಯ ಪ್ರಕಾರ, ಸುಡಾನ್‌ನಲ್ಲಿ ಕಾದಾಡುತ್ತಿರುವ ಸಶಸ್ತ್ರ ಪಡೆಗಳು (ಎಸ್‌ಎಎಫ್) ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳು (ಆರ್‌ಎಸ್‌ಎಫ್) ಏಳು ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಸಿಎನ್‌ಎನ್ ವರದಿ ಮಾಡಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:22 pm, Fri, 5 May 23

VIDEO: ಮಂಕಡ್ ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ
VIDEO: ಮಂಕಡ್ ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ
ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್​ನ ರಾಕೆಟ್
ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್​ನ ರಾಕೆಟ್
VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ
VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ
ವಸ್ತ್ರದಾನದ ಮಹತ್ವ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ
ವಸ್ತ್ರದಾನದ ಮಹತ್ವ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ
ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದ್ದು, ಆರ್ಥಿಕವಾಗಿ ಪ್ರಗತಿ ಹೊಂದುವರು
ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದ್ದು, ಆರ್ಥಿಕವಾಗಿ ಪ್ರಗತಿ ಹೊಂದುವರು
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್