
ನವದೆಹಲಿ, ಮೇ 08: ಭಾರತವು ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಪಾಕಿಸ್ತಾನದ ಮೇಲೆ ನಡೆಸಿರುವ ‘ಆಪರೇಷನ್ ಸಿಂಧೂರ್’(Operation Sindoor)ಯಶಸ್ವಿಯಾಗಿದೆ. ಇದೇ ಬೆನ್ನಲ್ಲೇ ಪಾಕ್ನಿಂದ ಬಂದು ಭಾರತದಲ್ಲಿ ನೆಲೆಸಿರುವ ಸೀಮಾ ಹೈದರ್ ದಾಳಿ ಕುರಿತು ಮಾತನಾಡಿದ್ದಾರೆ. ಇನ್ಸ್ಟಾಗ್ರಾಂ ವಿಡಿಯೋ ಮೂಲಕ ಅವರು ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ. ಭಾರತ ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಂಡು 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿತು.
ಇದರಿಂದಾಗಿ ಪಾಕಿಸ್ತಾನ ಭಯಭೀತವಾಗಿದೆ ಮತ್ತು ಕೋಪಗೊಂಡಿದೆ. ಏತನ್ಮಧ್ಯೆ, ಈಗ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಕೂಡ ಆಪರೇಷನ್ ಸಿಂಧೂರ್ ಬಗ್ಗೆ ಅಂತಹ ಹೇಳಿಕೆ ನೀಡಿದ್ದು,ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ಕ್ರಮಕ್ಕಾಗಿ ಸೀಮಾ ಹೈದರ್ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿ ಹಿಂದೂಸ್ತಾನ್ ಜಿಂದಾಬಾದ್, ಜೈ ಹಿಂದ್ ಜೈ ಭಾರತ್ ಎಂದು ಹೇಳಿದ್ದಾರೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಸೀಮಾ ದೇಶಕ್ಕೆ ಮರಳುವ ಬಗ್ಗೆ ನಿರಂತರವಾಗಿ ಪ್ರಶ್ನೆಗಳು ಏಳುತ್ತಿದ್ದವು.
ಭಾರತ ಚಿರಾಯುವಾಗಲಿ, ಜೈ ಹಿಂದ್, ಜೈ ಭಾರತ್. ಇದರೊಂದಿಗೆ, ಸೀಮಾ ಹೈದರ್ ಮತ್ತೊಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಸೀಮಾ ಹೈದರ್ ಅವರ ಪೌರತ್ವಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.
ಮತ್ತಷ್ಟು ಓದಿ: ಪಾಕಿಸ್ತಾನ ದಾಳಿ ಮಾಡಿದರೆ ಪ್ರತಿದಾಳಿಗೆ ಸಿದ್ಧ; ಜಾಗತಿಕ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಅಜಿತ್ ದೋವಲ್ ಮಾಹಿತಿ
ಪಹಲ್ಗಾಮ್ ದಾಳಿಗೆ ದುಃಖ ವ್ಯಕ್ತಪಡಿಸಿದ್ದ ಸೀಮಾ
ಕಾಶ್ಮೀರದ ಪಹಲ್ಗಾಮ್ ದಾಳಿಯ ಬಗ್ಗೆ ಸೀಮಾ ಹೈದರ್ ದುಃಖ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ, ಸೀಮಾ ಹೈದರ್ ಈ ದಾಳಿಯಿಂದ ತುಂಬಾ ದುಃಖಿತರಾಗಿದ್ದಾರೆ ಎಂದು ಅವರ ವಕೀಲ ಎಪಿ ಸಿಂಗ್ ಹೇಳಿದ್ದರು. ಅ
ಭಾರತಕ್ಕೆ ಅಕ್ರಮವಾಗಿ ಬಂದಿದ್ದರು
ಸೀಮಾ ಹೈದರ್ ಅವರ ಪ್ರೇಮಕಥೆಯು ನೋಯ್ಡಾದ ರಬುಪುರ ಗ್ರಾಮದ ನಿವಾಸಿ ಸಚಿನ್ ಮೀನಾ ಅವರೊಂದಿಗಿನ ಆನ್‌ಲೈನ್ ಗೇಮ್ ಮೂಲಕ ಮೂಲಕ ಪ್ರಾರಂಭವಾಯಿತು. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿ ಅವರ ಪ್ರೀತಿ ಎಷ್ಟು ಬೆಳೆಯಿತು ಎಂದರೆ ಅವರು ಮೇ 13, 2023 ರಂದು ನೇಪಾಳದ ಮೂಲಕ ತಮ್ಮ ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದರು.
ಅವರು ಹಿಂದೂ ವಿಧಿವಿಧಾನಗಳ ಪ್ರಕಾರ ದೇವಾಲಯವೊಂದರಲ್ಲಿ ಸಚಿನ್ ಅವರನ್ನು ವಿವಾಹವಾದರು ಎಂದು ವರದಿಯಾಗಿದೆ. ಆಕೆ ಮೂವರು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದಳು. ಇದೀಗ ಮತ್ತೊಂದು ಮಗುವಿಗೆ ತಾಯಿಯಾಗಿದ್ದಾಳೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:49 am, Thu, 8 May 25