ಭಾರತದಲ್ಲಿ ಒಪ್ಪೋ 5ಜಿ ಲ್ಯಾಬ್ ಸ್ಥಾಪನೆ​.. ಚೀನಾ ಕಂಪನಿಯಿಂದ ಮಹತ್ವದ ನಿರ್ಧಾರ!

| Updated By: ಸಾಧು ಶ್ರೀನಾಥ್​

Updated on: Dec 22, 2020 | 5:09 PM

ಚೀನಾ ಬಿಟ್ಟು ಬೇರೆಡೆ ನಾವು ಇದೇ ಮೊದಲ ಬಾರಿಗೆ 5ಜಿ ಲ್ಯಾಬ್​ ಸಿದ್ಧಪಡಿಸಿದ್ದೇವೆ. 5ಜಿ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಇಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಬರಲಿರುವ ಭಾರತದ 5ಜಿ ತಂತ್ರಜ್ಞಾನಕ್ಕೂ ಈ ಲ್ಯಾಬ್​ ಸಹಕಾರಿ ಆಗಲಿದೆ ಎಂದು ಒಪ್ಪೊ ತಿಳಿಸಿದ್ದಾರೆ.

ಭಾರತದಲ್ಲಿ ಒಪ್ಪೋ 5ಜಿ ಲ್ಯಾಬ್ ಸ್ಥಾಪನೆ​.. ಚೀನಾ ಕಂಪನಿಯಿಂದ ಮಹತ್ವದ ನಿರ್ಧಾರ!
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಸ್ಮಾರ್ಟ್​ಫೋನ್​ ತಯಾರಿಕಾ ಸಂಸ್ಥೆ ಒಪ್ಪೋ ಇದೇ ಮೊದಲ ಬಾರಿಗೆ 5ಜಿ ಆವಿಷ್ಕಾರ ಪ್ರಯೋಗಾಲಯವನ್ನು ಭಾರತದಲ್ಲಿ ಸ್ಥಾಪನೆ ಮಾಡಿದೆ. ಚೀನಾ ಬಿಟ್ಟು ಬೇರೆಡೆ ಒಪ್ಪೋ ಲ್ಯಾಬ್​ ನಿರ್ಮಾಣ ಮಾಡಿದ್ದು ಇದೇ ಮೊದಲು ಅನ್ನೋದು ವಿಶೇಷ.

ಈ ಬಗ್ಗೆ ಮಾಹಿತಿ ನೀಡಿರುವ ಒಪ್ಪೋ ಸಂಸ್ಥೆ, ಚೀನಾ ಬಿಟ್ಟು ಬೇರೆಡೆ ನಾವು ಇದೇ ಮೊದಲ ಬಾರಿಗೆ 5ಜಿ ಲ್ಯಾಬ್​ ಸಿದ್ಧಪಡಿಸಿದ್ದೇವೆ. 5ಜಿ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಇಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಬರಲಿರುವ ಭಾರತದ 5ಜಿ ಸೇವೆಗೂ ಈ ಲ್ಯಾಬ್​ ಸಹಕಾರಿ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಲ್ಯಾಬ್​ನಿಂದ ಭಾರತಕ್ಕೂ ಪ್ರಯೋಜನವಿದೆ ಎಂದಿರುವ ಒಪ್ಪೋ ಸಂಸ್ಥೆ, ತಂತ್ರಜ್ಞಾನದಲ್ಲಿ ಭಾರತ ದೊಡ್ಡ ಮಟ್ಟಕ್ಕೆ ಬೆಳೆದು ನಿಲ್ಲುತ್ತಿದೆ. ಇಂಥ ಸಂದರ್ಭದಲ್ಲಿ ಭಾರತದಲ್ಲೇ 5ಜಿ ಲ್ಯಾಬ್​ ಸ್ಥಾಪನೆ ಆಗಿರುವುದರಿಂದ ಸಾಕಷ್ಟು ಪ್ರಯೋಜನ ಆಗಲಿದೆ. ತಂತ್ರಜ್ಞಾನದ ವಿಚಾರದಲ್ಲಿ ಭಾರತವನ್ನು ಆವಿಷ್ಕಾರದ ಹಬ್​ಅನ್ನಾಗಿ ಮಾಡೋದು ನಮ್ಮ ಉದ್ದೇಶ ಎಂದಿದೆ.

ಭಾರತದಲ್ಲಿ ನಿರ್ಮಾಣಗೊಳ್ಳಲಿರುವ ಒಪ್ಪೋ ಲ್ಯಾಬ್​ ಹೊಸ ಹೊಸ ತಂತ್ರಜ್ಞಾನಗಳನ್ನು ಕಂಡು ಹಿಡಿಯಲು ಸಹಕಾರಿಯಾಗಲಿದೆ. ಅಲ್ಲದೆ, ಈ ಲ್ಯಾಬ್​ನಲ್ಲಿ ಯುರೋಪ್​, ಜಪಾನ್​, ಆಫ್ರಿಕಾ ದಕ್ಷಿಣ ಏಷಿಯಾ ಭಾಗಗಳಿಗೂ ಇಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ ನೀಡಲಾಗುತ್ತಿದೆ.

ಸ್ಯಾಮ್​ಸಂಗ್​ ಡಿಸ್​​ಪ್ಲೇ ತಯಾರಿಕಾ ಘಟಕ ಚೀನಾದಿಂದ ಉತ್ತರ ಪ್ರದೇಶಕ್ಕೆ ಶಿಫ್ಟ್​!