ಬಿಜೆಪಿ ವಿರೋಧ ಪಕ್ಷಗಳ ಸಭೆಯಲ್ಲಿ ಕಾಶ್ಮೀರದ ಎರಡು ಪಕ್ಷಗಳಾದ ಪೀಪಲ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಾಯಕರು ಪಾಟ್ನಾಕ್ಕೆ ಬರುತ್ತಿದ್ದಾರೆ ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಹೇಳಿದ್ದಾರೆ. ಜೂನ್ 23 ರಂದು ವಿಪಕ್ಷಗಳ ಸಭೆ ಪಾಟ್ನಾದಲ್ಲಿ ನಡೆಯಲಿದೆ. ಕಾಂಗ್ರೆಸ್‌ನ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಗೆ ಅರವಿಂದ್ ಕೇಜ್ರಿವಾಲ್ (ಎಎಪಿ), ಮಮತಾ ಬ್ಯಾನರ್ಜಿ (ಟಿಎಂಸಿ), ಎಂಕೆ ಸ್ಟಾಲಿನ್ (ಡಿಎಂಕೆ), ಹೇಮಂತ್ ಸೊರೆನ್ (ಜೆಎಂಎಂ), ಶರದ್ ಪವಾರ್ (ಎನ್‌ಸಿಪಿ) ಸಹ ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ ಎಂದು ಲಾಲನ್ ಹೇಳಿದ್ದಾರೆ. , ಅಖಿಲೇಶ್ ಯಾದವ್ (SP) ಮತ್ತು ಉದ್ಧವ್ ಠಾಕ್ರೆ (ಶಿವಸೇನೆ-UBT) ಭಾಗವಹಿಸಲಿದ್ದಾರೆ.
ಮತ್ತಷ್ಟು ಓದಿ: ನನ್ನನ್ನು ಗೃಹ ಬಂಧನದಲ್ಲಿಡಲಾಗಿದೆ: ಮನೆ ಗೇಟ್ಗೆ ಬೀಗ ಹಾಕಿರುವ ಫೋಟೊ ಟ್ವೀಟ್ ಮಾಡಿದ ಮೆಹಬೂಬಾ ಮುಫ್ತಿ
ಸಭೆಯಲ್ಲಿ ಪಾಲ್ಗೊಳ್ಳಲು ಮೆಹಬೂಬಾ ಮುಫ್ತಿ ಮತ್ತು ಫಾರೂಕ್ ಅಬ್ದುಲ್ಲಾ ಆಗಮಿಸುತ್ತಿದ್ದಾರೆ ಎಂದು ಜೆಡಿಯು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಲಾಲನ್ ಸಿಂಗ್ ಹೇಳಿದ್ದಾರೆ. ಫಾರೂಕ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಪಾಟ್ನಾಗೆ ಕರೆಸಿಕೊಳ್ಳುವುದಕ್ಕೆ ಬಿಜೆಪಿ ವಕ್ತಾರ ಅರವಿಂದ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗಾಂಧಿಯವರ ಹಿಂದೂಸ್ಥಾನವನ್ನು ಉಳಿಸಲು ಯಾವುದೇ ವಿರೋಧ ಪಕ್ಷದ ಜೊತೆ ಕೈಜೋಡಿಸಲು ಸಿದ್ಧ ಎಂದು ಮೆಹಬೂಬಾ ಮುಫ್ತಿ ಹೇಳಿದ್ದರು. ಬಿಜೆಪಿಯನ್ನು ಎದುರಿಸಬೇಕಾದರೆ ಪ್ರತಿಪಕ್ಷಗಳು ಒಂದಾಗಬೇಕಾಗುತ್ತದೆ ಎಂದು ಹೇಳಿದ್ದರು. 2024ರ ಚುನಾವಣೆಯ ದೃಷ್ಟಿಯಿಂದ ಈ ಸಭೆಗಳು ಬಹಳ ಮುಖ್ಯ ಎಂದು ಮುಫ್ತಿ ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ