
ದೆಹಲಿ: ಪ್ರತಿಪಕ್ಷ ನಾಯಕರ ನಿಯೋಗ ಇಂದು (ಫೆಬ್ರವರಿ 4) ಗಾಜಿಪುರ ಗಡಿಗೆ ಭೇಟಿ ನೀಡಿ ನೂತನ ಕಾಯ್ದೆ ವಿರುದ್ಧ ಸತತವಾಗಿ ನವೆಂಬರ್ನಿಂದ ಹೋರಾಟ ನಡೆಸುತ್ತಿರುವ ಸಾವಿರಾರು ರೈತರಿಗೆ ತಮ್ಮ ಬೆಂಬಲವನ್ನು ಸೂಚಿಸಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತು.
ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ವಿವಿಧ ರಾಜಕೀಯ ಪಕ್ಷಗಳ 15 ಸಂಸದರು ಗಾಜಿಪುರ ಗಡಿಗೆ ತೆರಳಿ ರೈತರ ಪರವಾಗಿ ನಿಲ್ಲುವ ಜೊತೆಗೆ ಕೃಷಿ ಮೂರು ಕಾಯ್ದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸುತ್ತೇವೆ ಎಂದು ಮಾಜಿ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಟ್ವೀಟ್ ಮಾಡಿದ್ದರು.
ಶಿರೋಮಣಿ ಅಕಾಲಿ ದಳದ (ಎಸ್ಎಡಿ) ನಾಯಕಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಪ್ರತಿಭಟನಾ ಭಾಗದಲ್ಲಿ ಸೌಲಭ್ಯಗಳ ಕೊರತೆಯ ಬಗ್ಗೆ ಮಾತನಾಡುವ ಮೂಲಕ ಸೌಲಭ್ಯಗಳನ್ನು ಹೆಚ್ಚಿಸಲು ಸಂಸತ್ತಿನಲ್ಲಿ ಚರ್ಚಿಸುವ ಪ್ರಯತ್ನವನ್ನು ನಡೆಸುವುದಾಗಿ ತಿಳಿಸಿದ್ದಾರೆ.
More than 100 farmers have died. For 3 months they have been sitting at GoI’s doorstep, literally, waiting to be heard. I am surprised that still a phone call is being awaited! Need of the hour is to listen to them & assure them that no more farmers need to die.#FarmersProtest pic.twitter.com/Sc4Fbf8nUs
— Harsimrat Kaur Badal (@HarsimratBadal_) February 1, 2021