
ಎಟಾ, ಜನವರಿ 16: ಎಚ್ಐವಿ(HIV)ಯಿಂದ ಮೃತಪಟ್ಟ ತಾಯಿಯ ಶವವದೆದುರು ಒಂಟಿಯಾಗಿ ಕುಳಿತು ಬಾಲಕ ಅಳುತ್ತಿದ್ದ ಘಟನೆ ಉತ್ತರ ಪ್ರದೇಶದ ಎಟಾದಲ್ಲಿ ನಡೆದಿದೆ. ತಂದೆ ಕೂಡ ಏಡ್ಸ್ನಿಂದ ಸಾವನ್ನಪ್ಪಿದ್ದರು ಆಗಲೂ ಕೂಡ ನಮ್ಮ ಜತೆ ಯಾರೂ ಇರಲಿಲ್ಲ, ಈಗ ತಾಯಿಯನ್ನೂ ಕಳೆದುಕೊಂಡು ಒಂಟಿಯಾಗಿದ್ದೇನೆಂದು 10 ವರ್ಷದ ಬಾಲಕ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.
ಗುರುವಾರ ಬೆಳಗ್ಗೆ ಆತ ತಾಯಿಯನ್ನು ಕಳೆದುಕೊಂಡಿದ್ದಾನೆ. ಎಟಾ ವೈದ್ಯಕೀಯ ಕಾಲೇಜಿನಲ್ಲಿ ಎಚ್ಐವಿ ಮತ್ತು ಏಡ್ಸ್ ಚಿಕಿತ್ಸೆ ಪಡೆಯುತ್ತಿದ್ದ ಆಕೆ ಕೊನೆಯುಸಿರೆಳೆದಿದ್ದಾರೆ. ಕಳೆದ ವರ್ಷ ಇದೇ ಕಾಯಿಲೆಯಿಂದ ತನ್ನ ತಂದೆಯನ್ನು ಕಳೆದುಕೊಂಡಿದ್ದಾಗಿ ಬಾಲಕ ಹೇಳಿದ್ದಾನೆ.
ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ತಾಯಿಯನ್ನು ಉಳಿಸಿಕೊಳ್ಳಲು ಸಾರ್ಧಯವಾಗಿಲ್ಲ, ಮರಣೋತ್ತರ ಪರೀಕ್ಷೆ ನಡೆಸಿರುವ ಕೋಣೆಯಲ್ಲಿ ತಾಯಿಯ ಶವದ ಪಕ್ಕ ಕುಳಿತು ತನ್ನ ದುಃಖ ತೋಡಿಕೊಂಡಿದ್ದಾನೆ.
ಮತ್ತಷ್ಟು ಓದಿ: ಎಚ್‌ಐವಿ ಏಡ್ಸ್ ಕುರಿತು ಈಗಲೂ ತಿಳಿದುಕೊಳ್ಳಬೇಕಾದ ಅಂಶಗಳಿವು
ಅಪ್ಪನಿಗೆ ಏಡ್ಸ್ ಬಂದಾಗ ನೆಂಟಿರಿಷ್ಟರೆಲ್ಲಾ ನಮ್ಮ ಜತೆ ಮಾತನಾಡುವುದನ್ನೇ ನಿಲ್ಲಿಸಿದ್ದರು, ಅಧಿಕಾರಿಗಳು ಬರುವವರೆಗೂ ಅಲ್ಲಿಂದ ಬಾಲಕ ಹೊರಟಿರಲಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಜೈತ್ರ ಪೊಲೀಸ್ ಠಾಣೆಯ ನಾಗ್ಲಾ ಧೀರಜ್ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ.
ಪತಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದ 45 ವರ್ಷದ ಮಹಿಳೆ ಒಂದು ವರ್ಷದ ಹಿಂದೆ ಎಚ್‌ಐವಿ ಸೋಂಕಿನಿಂದಾಗಿ ತನ್ನ ಗಂಡನನ್ನು ಕಳೆದುಕೊಂಡಿದ್ದರು. ಅಂದಿನಿಂದ, ಆ ಮಹಿಳೆ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರು, ಮತ್ತು ಇದರಿಂದಾಗಿ ಅವರು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
HIV (ಮಾನವ ಇಮ್ಯುನೊ ಡಿಫಿಷಿಯನ್ಸಿ ವೈರಸ್) ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಹಾನಿ ಮಾಡುವ ವೈರಸ್ ಆಗಿದೆ. ಚಿಕಿತ್ಸೆ ನೀಡದೆ ಬಿಟ್ಟರೆ, ಅದು AIDS (ಸ್ವಾಧೀನಪಡಿಸಿಕೊಂಡ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್) ಗೆ ಮುಂದುವರೆಯಬಹುದು.ಯಾವುದೇ ಯಶಸ್ವಿ ಚಿಕಿತ್ಸೆ ಇಲ್ಲ. ವ್ಯಕ್ತಿಗಳು ಎಚ್ಐವಿಗೆ ಒಮ್ಮೆ ತುತ್ತಾದರೆ, ಅದು ಅವರ ಜೊತೆ ಜೀವನದುದ್ದಕ್ಕೂ ಇರುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ