ಸಂಸದರ ಮೇಲೆ ಹಲ್ಲೆ ನಡೆಸಲು ಹೊರಗಿನವರನ್ನು ಕರೆತರಲಾಗಿತ್ತು: ಪ್ರತಿಪಕ್ಷ ನಾಯಕರ ಆರೋಪ

| Updated By: ರಶ್ಮಿ ಕಲ್ಲಕಟ್ಟ

Updated on: Aug 12, 2021 | 7:35 PM

Rahul Gandhi: "ಸಂಸತ್ತಿನ ಒಳಗೆ ಮಾತನಾಡಲು ನಮಗೆ ಅವಕಾಶವಿಲ್ಲದ ಕಾರಣ ಇಂದು ನಾವು ನಿಮ್ಮೊಂದಿಗೆ ಮಾತನಾಡಲು ಇಲ್ಲಿಗೆ ಬರಬೇಕಾಯಿತು. ಇದು ಪ್ರಜಾಪ್ರಭುತ್ವದ ಕೊಲೆ" ಎಂದು ಪ್ರತಿಭಟನಾ ಮೆರವಣಿಗೆಯಲ್ಲಿ ರಾಹುಲ್ ಗಾಂಧಿ ಹೇಳಿದರು.

ಸಂಸದರ ಮೇಲೆ ಹಲ್ಲೆ ನಡೆಸಲು ಹೊರಗಿನವರನ್ನು ಕರೆತರಲಾಗಿತ್ತು: ಪ್ರತಿಪಕ್ಷ ನಾಯಕರ ಆರೋಪ
ರಾಹುಲ್ ಗಾಂಧಿ ಸುದ್ದಿಗೋಷ್ಠಿ
Follow us on

ದೆಹಲಿ:ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಸುಮಾರು ಒಂದು ಡಜನ್ ವಿರೋಧ ಪಕ್ಷದ ನಾಯಕರು ಸಂಸತ್ತಿನ ಹೊರಗೆ ಜಮಾಯಿಸಿದ್ದು, ಮಳೆಗಾಲದ ಅಧಿವೇಶನ ಮತ್ತು ಮಹಿಳಾ ಸಂಸದರ ಮೇಲೆ ಹಲ್ಲೆ ಆರೋಪದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ರಾಜ್ಯಸಭೆಯ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ದೂರು ನೀಡಲು ಪ್ರತಿಪಕ್ಷ ಕರೆ ನೀಡಿದೆ. “ಸಂಸತ್ತಿನ ಭದ್ರತೆಯ ಭಾಗವಾಗಿರದ ಹೊರಗಿನವರನ್ನು ವಿರೋಧ ಪಕ್ಷದ ನಾಯಕರು ಮತ್ತು ಮಹಿಳಾ ಸಂಸದರು ಸೇರಿದಂತೆ ಸದಸ್ಯರನ್ನು ತಡೆಹಿಡಿಯಲು ಕರೆತರಲಾಯಿತು ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ.

ಯಾವುದೇ ಪ್ರಚೋದನೆಯಿಲ್ಲದೆ ಸಂಸತ್ತಿನ ಭದ್ರತೆಯ ಭಾಗವಾಗಿರದ ಹೊರಗಿನವರನ್ನು, ವಿರೋಧ ಪಕ್ಷದ ನಾಯಕರು ಮತ್ತು ಸದಸ್ಯರನ್ನು ತಡೆಹಿಡಿಯಲು ಕರೆತರಲಾಯಿತು. ಸರ್ಕಾರದ ನಡವಳಿಕೆ ಮತ್ತು ದನಿಯನ್ನು ದಮನ ಮಾಡುವ ಬಗ್ಗೆ ಮಹಿಳಾ ಸಂಸದರು ಸೇರಿದಂತೆ ಇತರ ಸಂಸದರು ವಿರೋಧಿಸುತ್ತಿದ್ದರು ಎಂದು ವಿಪಕ್ಷ ಜಂಟಿ ಹೇಳಿಕೆ ನೀಡಿದೆ.

“ಸರ್ವಾಧಿಕಾರಿ ಧೋರಣೆ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮಗಳಿಗಾಗಿ” ಸರ್ಕಾರವನ್ನು ಟೀಕಿಸಿದ ಪ್ರತಿಪಕ್ಷ ಪೆಗಾಸಸ್ ಹಗರಣದಂತಹ ಪ್ರಮುಖ ರಾಷ್ಟ್ರೀಯ ಸಮಸ್ಯೆಗಳನ್ನು ಚರ್ಚಿಸಲು ವಿರೋಧ ಪಕ್ಷಗಳು ಒಮ್ಮತದಿಂದ (ಅಗತ್ಯವನ್ನು) ತಿಳಿಸಿದರೂ ಸಹ, ಮಳೆಗಾಲದ ಅಧಿವೇಶನವನ್ನು “ಉದ್ದೇಶಪೂರ್ವಕವಾಗಿ ಹಳಿ ತಪ್ಪಿಸಿದೆ” ಎಂದು ಆರೋಪಿಸಿದೆ.


ಗಾಂಧಿ ಮತ್ತು ಅವರ ಪಕ್ಷದ ಸಹೋದ್ಯೋಗಿಗಳ ಜತೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಶಿವಸೇನೆಯ ಸಂಜಯ್ ರಾವುತ್ ಹಾಜರಿದ್ದರು. ಡಿಎಂಕೆ, ಸಮಾಜವಾದಿ ಪಕ್ಷ, ಆರ್‌ಜೆಡಿ, ಸಿಪಿಎಂ ಮತ್ತು ಸಿಪಿಐ, ಮುಸ್ಲಿಂ ಲೀಗ್, ಆರ್‌ಎಸ್‌ಪಿ ಮತ್ತು ಕೇರಳ ಕಾಂಗ್ರೆಸ್‌ನ ನಾಯಕರು ಕೂಡ ಇಂದಿನ ಜಂಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

“ಸಂಸತ್ತಿನ ಒಳಗೆ ಮಾತನಾಡಲು ನಮಗೆ ಅವಕಾಶವಿಲ್ಲದ ಕಾರಣ ಇಂದು ನಾವು ನಿಮ್ಮೊಂದಿಗೆ ಮಾತನಾಡಲು ಇಲ್ಲಿಗೆ ಬರಬೇಕಾಯಿತು. ಇದು ಪ್ರಜಾಪ್ರಭುತ್ವದ ಕೊಲೆ” ಎಂದು ಪ್ರತಿಭಟನಾ ಮೆರವಣಿಗೆಯಲ್ಲಿ ರಾಹುಲ್ ಗಾಂಧಿ ಹೇಳಿದರು.

“ರಾಜ್ಯಸಭೆಯಲ್ಲಿ ಮೊದಲ ಬಾರಿಗೆ ಸಂಸದರಿಗೆ ಥಳಿಸಲಾಯಿತು, ಹಿಡಿದು ತಳ್ಳಲಾಯಿತು. ಅಧ್ಯಕ್ಷರು ಅಸಮಾಧಾನಗೊಂಡಿದ್ದಾರೆ ಎಂದು ಹೇಳುತ್ತಾರೆ, ಸ್ಪೀಕರ್ ಕೂಡ. ಆದರೆ ಸದನದ ಕಾರ್ಯಗಳನ್ನು ಖಚಿತಪಡಿಸುವುದು ಅವರ ಜವಾಬ್ದಾರಿ” ಎಂದು ಅವರು ಹೇಳಿದರು.

“ದೇಶದ ಶೇಕಡಾ 60 ರಷ್ಟು ಜನರ ಬಗ್ಗೆ ಹೇಳುವುದಾದರೆ ಸಂಸತ್ ಇಲ್ಲ. ಶೇ 60ರಷ್ಟು ಮಂದಿಯದನಿಯನ್ನು ದಮನಗೊಳಿಸಲಾಗಿದೆ. ನಿನ್ನೆ ರಾಜ್ಯಸಭೆಯಲ್ಲಿ ದೈಹಿಕ ಹಲ್ಲೆ ನಡೆದಿದೆ ಎಂದಿದ್ದಾರೆ ರಾಹುಲ್ ಗಾಂಧಿ. ಈ ದೈಹಿಕ ಕಿರುಕುಳದಿಂದಾಗಿ “ನಾವು ಪಾಕಿಸ್ತಾನದ ಗಡಿಯಲ್ಲಿ ನಿಂತಂತೆ ಭಾಸವಾಗುತ್ತಿದೆ” ಎಂದು ರಾಜ್ಯಸಭೆಯ ಸದಸ್ಯರಾದ ಸಂಜಯ್ ರೌತ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಆದಾಗ್ಯೂ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆರೋಪಗಳನ್ನು “ಸಂಪೂರ್ಣವಾಗಿ ಸುಳ್ಳು” ಎಂದು ಕರೆದಿದ್ದಾರೆ. ಏಳು ಕೇಂದ್ರ ಸಚಿವರು ಸೇರಿ ನಡೆಸಿದ ಸುದೀರ್ಘ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರವು ಪ್ರತಿಪಕ್ಷಗಳ ವಿರುದ್ಧ ಟೀಕಾ ಪ್ರಹಾರ ಮಾಡಿದೆ.

ಇದನ್ನೂ ಓದಿ:  ಯುಪಿಎ ಪ್ರತಿ 4 ನಿಮಿಷಕ್ಕೆ 1 ಮಸೂದೆಯನ್ನು ಅಂಗೀಕರಿಸಿತ್ತು; ‘ಚರ್ಚೆ ಮಾಡಿಲ್ಲ’  ಎಂಬ ವಿಪಕ್ಷಗಳ ಆರೋಪಕ್ಕೆ ಸರ್ಕಾರ ತಿರುಗೇಟು

(Outsiders who were not part of Parliament security were brought in to manhandle opposition leaders says Opposition)