ಇಂಡಿಗೋ ವಿಮಾನದ ಆಸನದಡಿಯಲ್ಲಿ ಸಿಕ್ತು ಒಂದು ಕೆಜಿ ಚಿನ್ನ!
ಸಿಲಿಂಡರ್ ಆಕಾರದಲ್ಲಿರುವ 31 ಚಿನ್ನದ ರಾಡ್ಗಳು ಪತ್ತೆ ಆಗಿವೆ. ಇದರ ತೂಕ 1.138 ಕೆಜಿ ಇತ್ತು. ಇದರ ಬೆಲೆ 48,90,250 ರೂಪಾಯಿನಷ್ಟು ಎಂದು ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.
ದೆಹಲಿ: ದುಬೈನಿಂದ ದೆಹಲಿಗೆ ಆಗಮಿಸಿದ ಇಂಡಿಗೋ ವಿಮಾನದ ಸೀಟ್ನ ಅಡಿಯಲ್ಲಿ ಒಂದು ಕೆಜಿಗೂ ಅಧಿಕ ಚಿನ್ನ ಸಿಕ್ಕಿದೆ. ಸದ್ಯ ಇದನ್ನು ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇಂಡಿಗೋ ವಿಮಾನ ದುಬೈನಿಂದ ದೆಹಲಿಗೆ ಬಂದಿತ್ತು. ಇದನ್ನು ಪರಿಶೀಲನೆ ಮಾಡುವಾಗ ಅನುಮಾನಾಸ್ಪದ ಬ್ಯಾಗ್ ಒಂದು ಸಿಕ್ಕಿದೆ. ಇದರಲ್ಲಿ ಚಿನ್ನ ಇರುವ ವಿಚಾರ ಗೊತ್ತಾದ ನಂತರದಲ್ಲಿ ಸುಂಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ವಿಮಾನದ ಒಳಗೆ ಆಗಮಿಸಿದ ಅಧಿಕಾರಿಗಳು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಸಿಲಿಂಡರ್ ಆಕಾರದಲ್ಲಿರುವ 31 ಚಿನ್ನದ ರಾಡ್ಗಳು ಪತ್ತೆ ಆಗಿವೆ. ಇದರ ತೂಕ 1.138 ಕೆಜಿ ಇತ್ತು. ಇದರ ಬೆಲೆ 48,90,250 ರೂಪಾಯಿನಷ್ಟು ಎಂದು ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.
ದುಬೈನಿಂದ ತರಲಾದ ಈ ಚಿನ್ನದ ಬ್ಯಾಗ್ ಯಾರಿಗೆ ಸೇರಬೇಕಾಗಿದ್ದು ಎನ್ನುವ ಬಗ್ಗೆ ಪರೀಶಿಲನೆ ನಡೆಸಲಾಗುತ್ತಿದೆ. ಅಂದಹಾಗೆ, ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬೀಳುವ ಭಯದಲ್ಲಿ ಇದನ್ನು ಬಿಟ್ಟು ಹೋಗಿರುವ ಸಾಧ್ಯತೆ ಕೂಡ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕಡಲ ತೀರದಲ್ಲಿ ರಾಶಿ ರಾಶಿ ಚಿನ್ನಾಭರಣ! ಮೀನುಗಾರರ ಬದುಕು ಬದಲಾಯಿಸಿದ ಪವಾಡ..