ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಚಿಂತಕ ಎಮ್.ಜಿ. ವೈದ್ಯ ವಿಧಿವಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಚಿಂತಕ ಎಮ್.ಜಿ. ವೈದ್ಯ (97), ಅಲ್ಪಕಾಲದ ಅಸೌಖ್ಯದಿಂದ ನಾಗ್ಪುರದ ಸ್ಪಂದನ ಆಸ್ಪತ್ರೆಯಲ್ಲಿ ಇಂದು ಸಂಜೆ 3.35ರ ಸುಮಾರಿಗೆ ನಿಧನ ಹೊಂದಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಚಿಂತಕ ಎಮ್.ಜಿ. ವೈದ್ಯ ವಿಧಿವಶ
ಎಮ್.ಜಿ. ವೈದ್ಯ
Follow us
TV9 Web
| Updated By: ganapathi bhat

Updated on:Apr 06, 2022 | 11:31 PM

ದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್​ಎಸ್​) ಹಿರಿಯ ಚಿಂತಕ ಎಮ್.ಜಿ. ವೈದ್ಯ (97) ವಿಧಿವಶರಾಗಿದ್ದಾರೆ.  ನಾಗ್ಪುರದ ಸ್ಪಂದನ ಆಸ್ಪತ್ರೆಯಲ್ಲಿ ಇಂದು ಸಂಜೆ 3.35ರ ಸುಮಾರಿಗೆ ನಿಧನ ಹೊಂದಿದ್ದಾರೆ. ಎಮ್​.ಜಿ. ವೈದ್ಯ ಅನಾರೋಗ್ಯ ಕಾರಣ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಎಮ್​.ಜಿ. ವೈದ್ಯ ಅವರ ಪುತ್ರ ಮತ್ತು ಆರ್​ಎಸ್​ಎಸ್​ನ ಪ್ರಧಾನ ಕಾರ್ಯದರ್ಶಿ ಡಾ. ಮನಮೋಹನ್ ವೈದ್ಯ, ನನ್ನ ತಂದೆ ತಮ್ಮ ಅರ್ಥಪೂರ್ಣ, ಕ್ರಿಯಾಶೀಲ ಬದುಕಿಗೆ ಇಂದು ವಿದಾಯ ಹೇಳಿದ್ದಾರೆ. ಅವರು ಪತ್ರಕರ್ತ, ಹಿಂದುತ್ವದ ಭಾಷ್ಯಕಾರ ಮತ್ತು 9 ದಶಕಗಳ ಕಾಲ ಸಂಘದ ಕ್ರಿಯಾಶೀಲ ಸ್ವಯಂಸೇವಕರಾಗಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.

ಎಮ್.ಜಿ. ವೈದ್ಯ ಹಿರಿಯ ಸರಸಂಘಚಾಲಕರೊಂದಿಗೆ ಕೆಲಸ ಮಾಡಿದ್ದರು. ಸಂಸ್ಕೃತ ಉಪನ್ಯಾಸಕರಾಗಿ, ನಾಗ್ಪುರ ‘ತರುಣ ಭಾರತ್’ ಪತ್ರಿಕೆಯ ಸಂಪಾದಕರಾಗಿ, ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಎಮ್.ಜಿ. ವೈದ್ಯ ಅವರ ಅಂತ್ಯಕ್ರಿಯೆ ವಿಧಿವಿಧಾನಗಳು ನಾಗ್ಪುರದ ಅಂಬಝಾರಿ ಘಾಟ್​ನಲ್ಲಿ  ಭಾನುವಾರ ಬೆಳಗ್ಗೆ 9.30ಕ್ಕೆ ನಡೆಯಲಿದೆ.

Published On - 7:26 pm, Sat, 19 December 20