ಗೊಂಡಿಯಾ: ಮಹಾರಾಷ್ಟ್ರದ (Maharashtra) ಗೊಂಡಿಯಾದಲ್ಲಿ ರೈಲಿನ 3 ಬೋಗಿಗಳು ಹಳಿತಪ್ಪಿದ ಪರಿಣಾಮ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದುವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇಂದು ಬೆಳಗಿನ ಜಾವ 2.30ರ ಸುಮಾರಿಗೆ ಈ ರೈಲು ಅಪಘಾತ (Train Accident) ಸಂಭವಿಸಿದೆ. ಈ ಎಲ್ಲಾ 50 ಗಾಯಾಳುಗಳ ಪೈಕಿ 49 ಮಂದಿಯನ್ನು ಪ್ರಥಮ ಚಿಕಿತ್ಸೆಯ ನಂತರ ಡಿಸ್ಚಾರ್ಜ್ ಮಾಡಲಾಗಿದೆ.
ಈ ಅಪಘಾತದಲ್ಲಿ ಒಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗಿದೆ. ಆದರೆ, ಯಾವುದೇ ಪ್ರಯಾಣಿಕರು ಸಾವನ್ನಪ್ಪಿಲ್ಲ. ವರದಿಗಳ ಪ್ರಕಾರ, ರೈಲು ಛತ್ತೀಸ್‌ಗಢದ ಬಿಲಾಸ್‌ಪುರದಿಂದ ರಾಜಸ್ಥಾನದ ಜೋಧಪುರಕ್ಕೆ ಹೋಗುತ್ತಿತ್ತು.
Maharashtra | More than 50 persons were injured after 3 bogies of a train derailed in Gondia around 2.30 am at night. A collision b/w a goods train & passenger train led to this accident. No deaths reported. Train was on its way from Bilaspur, Chhattisgarh to Rajasthan’s Jodhpur pic.twitter.com/Fxzmdbvhw8
— ANI (@ANI) August 17, 2022
ಇದನ್ನೂ ಓದಿ: Bidar Accident: ಬೀದರ್ನಲ್ಲಿ ಭೀಕರ ರಸ್ತೆ ಅಪಘಾತ; ಹೈದರಾಬಾದ್ ಮೂಲದ ಐವರು ಸಾವು, ನಾಲ್ವರಿಗೆ ಗಾಯ
ಗೂಡ್ಸ್ ರೈಲು ಮತ್ತು ಪ್ಯಾಸೆಂಜರ್ ರೈಲಿನ ನಡುವೆ ಡಿಕ್ಕಿಯಾಗಿ ಮತ್ತು ಸಿಗ್ನಲಿಂಗ್ ಸಮಸ್ಯೆಯಿಂದಾಗಿ ಈ ಅಪಘಾತ ಸಂಭವಿಸಿದೆ. ಚಾಲಕ ತುರ್ತು ಬ್ರೇಕ್ ಹಾಕಿದರೂ ಗೂಡ್ಸ್ ರೈಲಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.