ಮೂರೂವರೆ ಕಿಮೀ ಉದ್ದದ ಸೂಪರ್ ವಾಸುಕಿ ಗೂಡ್ಸ್ ಟ್ರೇನ್ ಸಂಚಾರ ಆರಂಭಿಸಿ ಭಾರತೀಯ ರೇಲ್ವೇಸ್ ದಾಖಲೆ ಸ್ಥಾಪಿಸಿದೆ!
ಈ ವಿಡಿಯೋದಲ್ಲಿ ಸೂಪರ್ ವಾಸುಕಿ ಕೊಠಾರಿ ರೋಡ್ ಸ್ಟೇಶನ್ ಮೂಲಕ ಹಾದುಹೋಗುತ್ತಿದೆ. ರೈಲಿನ ವ್ಯಾಗನ್ ಗಳು ಒಂದಾದ ನಂತರ ಮತ್ತೊಂದು ದಾಟಿ ಹೋಗುವುದು ನಮಗೆ ಕಾಣುತ್ತದೆಯೇ ಹೊರತು ಅದರ ಕೊನೆ (ಎಕ್ಸ್) ಕಾಣುವುದೇ ಇಲ್ಲ, ಅಷ್ಟು ಉದ್ದವಾಗಿದೆ ಈ ಟ್ರೈನು!
ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವ ಅಂಗವಾಗಿ ಭಾರತವು ಅತಿ ಉದ್ದ ಮತ್ತು ಅತಿಹೆಚ್ಚು ಭಾರ ಎಳೆಯವ ಗೂಡ್ಸ್ ಟ್ರೈನನ್ನು (freight train) ಲಾಂಚ್ ಮಾಡಿ ಹೊಸ ವಿಕ್ರಮ ಮೆರೆದಿದೆ. ಭಾರತೀಯ ರೇಲ್ವೆಯ ಆಗ್ನೇಯ ಕೇಂದ್ರೀಯ ವಿಭಾಗದಿಂದ ಚಾಲನೆಗೊಂಡಿರುವ ಸೂಪರ್ ವಾಸುಕಿ (Super Vasuki) ಹೆಸರಿನ ಈ ರೈಲು ಮೂರೂವರೆ ಕಿಲೋಮೀಟರ್ ಉದ್ದವಿದ್ದು ಒಟ್ಟಾರೆ 25,962 ತೂಕ ಲೋಡ್ ಆಗಿರುವ 295 ವ್ಯಾಗನ್ ಗಳನ್ನು ಎಳೆದೊಯ್ಯುತ್ತದೆ. ಟ್ರೈನು ಒಟ್ಟು 6 ಲೊಕೊಮೊಟಿವ್ ಗಳನ್ನು ಹೊಂದಿದೆ. ರೇಲ್ವೇ ಖಾತೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಟ್ವೀಟ್ ಮಾಡಿರುವ ಈ ವಿಡಿಯೋದಲ್ಲಿ ಸೂಪರ್ ವಾಸುಕಿ ಕೊಠಾರಿ ರೋಡ್ ಸ್ಟೇಶನ್ ಮೂಲಕ ಹಾದುಹೋಗುತ್ತಿದೆ. ರೈಲಿನ ವ್ಯಾಗನ್ ಗಳು ಒಂದಾದ ನಂತರ ಮತ್ತೊಂದು ದಾಟಿ ಹೋಗುವುದು ನಮಗೆ ಕಾಣುತ್ತದೆಯೇ ಹೊರತು ಅದರ ಕೊನೆ (ಎಕ್ಸ್) ಕಾಣುವುದೇ ಇಲ್ಲ, ಅಷ್ಟು ಉದ್ದವಾಗಿದೆ ಈ ಟ್ರೈನು!
Super Vasuki – India's longest (3.5km) loaded train run with 6 Locos & 295 wagons and of 25,962 tonnes gross weight.#AmritMahotsav pic.twitter.com/3oeTAivToY
— Ashwini Vaishnaw (@AshwiniVaishnaw) August 16, 2022
Published On - 11:40 am, Wed, 17 August 22