ತೆಲಂಗಾಣ ಚುನಾವಣೆ: ಅಕ್ರಮವಾಗಿ ಸಾಗಿಸುತ್ತಿದ್ದ 2 ಕೋಟಿ ರೂ. ನಗದು, 27 ಕೆಜಿ ಚಿನ್ನ ಮುಟ್ಟುಗೋಲು
Telangana elections 2023: ಮುಖ್ಯ ಚುನಾವಣಾ ಅಧಿಕಾರಿ ವಿಕಾಸ್ ರಾಜ್ ಅವರ ಕಚೇರಿಯ ಮಾಹಿತಿ ಪ್ರಕಾರ, ಕಳೆದ ವಾರ ಒಟ್ಟು 20.43 ಕೋಟಿ ರೂ., 31.97 ಕೆಜಿ ಚಿನ್ನ, 350 ಕೆಜಿ ಬೆಳ್ಳಿ ಮತ್ತು 42.203 ಕ್ಯಾರೆಟ್ ವಜ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಹೈದರಾಬಾದ್, ಅಕ್ಟೋಬರ್ 16: ತೆಲಂಗಾಣ ಚುನಾವಣೆ (Telangana elections 2023) ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಇದರ ಬೆನ್ನಲ್ಲೇ ಅಕ್ರಮ ನಗದು ಸಾಗಾಟವೂ ಬೆಳಕಿಗೆ ಬರುತ್ತಿದೆ. ಅಕ್ರಮವಾಗಿ ಸಾಗಿಸುತ್ತಿದ್ದ 2.09 ಕೋಟಿ ರೂಪಾಯಿ ನಗದು (Cash) ಹಾಗೂ ಎರಡು ವಾಹನಗಳನ್ನು ಹೈದರಾಬಾದ್ ಉತ್ತರ ವಲಯ ಕಾರ್ಯಪಡೆ ಸೋಮವಾರ ವಶಪಡಿಸಿಕೊಂಡಿದ್ದು, ದಾಖಲೆಗಳಿಲ್ಲದೆ ನಗದು ಸಾಗಿಸುತ್ತಿದ್ದ ಆರು ಮಂದಿಯನ್ನು ಗಾಂಧಿನಗರ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ನ ಕವಾಡಿಗುಡದಲ್ಲಿರುವ ಎನ್‌ಟಿಪಿಸಿ ಕಟ್ಟಡದ ಬಳಿ ನಗದು ಸಾಗಾಟ ಪತ್ತೆಯಾಗಿದೆ.
ಇದೇ ವೇಳೆ ಮಿಯಾಪುರ ಪೊಲೀಸರು ದಾಖಲೆಗಳಿಲ್ಲದ 27 ಕೆಜಿ ಚಿನ್ನ ಹಾಗೂ 17.5 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ನಲ್ಗೊಂಡ ಜಿಲ್ಲಾ ಪೊಲೀಸರು ವಡಪಲ್ಲಿಯಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 3.04 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದರು.
ಮುಖ್ಯ ಚುನಾವಣಾ ಅಧಿಕಾರಿ ವಿಕಾಸ್ ರಾಜ್ ಅವರ ಕಚೇರಿಯ ಮಾಹಿತಿ ಪ್ರಕಾರ, ಕಳೆದ ವಾರ ಒಟ್ಟು 20.43 ಕೋಟಿ ರೂ., 31.97 ಕೆಜಿ ಚಿನ್ನ, 350 ಕೆಜಿ ಬೆಳ್ಳಿ ಮತ್ತು 42.203 ಕ್ಯಾರೆಟ್ ವಜ್ರಗಳು, 14.65 ಕೋಟಿ ಮೌಲ್ಯದ 86.9 ಲಕ್ಷ ಮೌಲ್ಯದ ಮದ್ಯ, 89 ಲಕ್ಷ ಮೌಲ್ಯದ ಗಾಂಜಾ ಮತ್ತು 22.51 ಲಕ್ಷ ಮೌಲ್ಯದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: 5 ದಿನ ನಡೆದ ಐಟಿ ದಾಳಿ: ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಸಿಕ್ಕಿರುವ ಹಣವೆಷ್ಟು ಗೊತ್ತಾ?
ಅಕ್ಟೋಬರ್ 9 ರಂದು ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ರಾಜ್ಯದಲ್ಲಿ ಒಟ್ಟು 37 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ತೆಲಂಗಾಣ ವಿಧಾನಸಭಾ ಚುನಾವಣೆ ನವೆಂಬರ್ 30 ರಂದು ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ