AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ದಿನ ನಡೆದ ಐಟಿ ದಾಳಿ: ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಸಿಕ್ಕಿರುವ ಹಣವೆಷ್ಟು ಗೊತ್ತಾ?

ಐಟಿ ಟೀಂ ಕರ್ನಾಟಕ ಸೇರಿದಂತೆ 4 ರಾಜ್ಯಗಳಲ್ಲಿ ಐಟಿ ಮೆಗಾ ದಾಳಿ ಮಾಡುವ ಮೂಲಕ ಒಟ್ಟು 8 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ 102 ಕೋಟಿ ರೂ. ಹಣ ಜಪ್ತಿ ಮಾಡಿದ್ದಾರೆ. 5 ದಿನಗಳಿಂದ ನಡೆದ ಐಟಿ ದಾಳಿ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

5 ದಿನ ನಡೆದ ಐಟಿ ದಾಳಿ: ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಸಿಕ್ಕಿರುವ ಹಣವೆಷ್ಟು ಗೊತ್ತಾ?
ಪ್ರಾತಿನಿಧಕ ಚಿತ್ರ
Follow us
Prajwal Kumar NY
| Updated By: ಗಂಗಾಧರ​ ಬ. ಸಾಬೋಜಿ

Updated on: Oct 16, 2023 | 5:58 PM

ಬೆಂಗಳೂರು, ಅಕ್ಟೋಬರ್​​ 16: ಕಳೆದೊಂದು ವಾರದಿಂದ ನಗರದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ವಿಷಯ ಅಂದರೆ ಅದು ಐಟಿ ರೇಡ್‌ (IT raids). ದಿನಕ್ಕೊಂದು ಬೇಟೆ, ದಿನಕ್ಕೊಂದು ಜಪ್ತಿ ಅಂತಾ ಹೊರಟಿರುವ ಐಟಿ ಟೀಂ ಕರ್ನಾಟಕ ಸೇರಿದಂತೆ 4 ರಾಜ್ಯಗಳಲ್ಲಿ ಐಟಿ ಮೆಗಾ ದಾಳಿ ಮಾಡುವ ಮೂಲಕ ಒಟ್ಟು 8 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ 102 ಕೋಟಿ ರೂ. ಹಣ ಜಪ್ತಿ ಮಾಡಿದ್ದಾರೆ. 5 ದಿನಗಳಿಂದ ನಡೆದ ಐಟಿ ದಾಳಿ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿ, ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯದ 55 ಸ್ಥಳಗಳಲ್ಲಿ ದಾಳಿ ನಡೆಸಿ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದೆ. ಸರ್ಕಾರಿ ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಉದ್ಯಮಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ದಾಳಿ ವೇಳೆ 30 ವಿದೇಶಿ ಐಷಾರಾಮಿ ವಾಚ್​ಗಳು, ನಕಲಿ ದಾಖಲಾತಿ, ಮಹತ್ವದ ದಾಖಲೆ, ಡಿಜಿಟಲ್ ಡೆಟಾವನ್ನು ಐಟಿ ವಶಕ್ಕೆ ಪಡೆದುಕೊಂಡಿದೆ.

ಇದನ್ನೂ ಓದಿ: ಐಟಿ ಅಧಿಕಾರಿಗಳ ಭರ್ಜರಿ ಬೇಟೆ; ಬೆಂಗಳೂರಲ್ಲಿ ಒಂದು ವಾರದಲ್ಲಿ 80 ಕೋಟಿಗೂ ಅಧಿಕ ಹಣ ಪತ್ತೆ

ಕೆಲ ಟೆಂಡರ್​ಗಳಲ್ಲಿ ಅಕ್ರಮವಾಗಿ ಹಣ ಸಂಪಾದನೆ ಸೇರಿದಂತೆ ನಕಲಿ ದಾಖಲಾತಿ ಸೃಷ್ಟಿಸಿ ಬಿಲ್ ರಿಲೀಸ್ ಮಾಡಿಸಿಕೊಂಡಿದ್ದು ಬೆಳಕಿಗೆ ಬಂದಿದೆ. ಸಬ್ ಕಾಂಟ್ರಾಕ್ಟರ್​ಗಳ ಮೂಲಕ ಕೋಟ್ಯಂತರ ರೂ. ಅಕ್ರಮ ಹಣ ಗಳಿಕೆ, ಆದಾಯ ತೆರಿಗೆ ಇಲಾಖೆಗೆ ವಂಚಿಸಿ ಕೋಟಿ ಕೋಟಿ ರೂ. ಹಣ ಸಂಗ್ರಹ, ತೆರಿಗೆ ವಂಚನೆಗಾಗಿ ಕೆಲ ನಕಲಿ ರಸೀದಿ, ಕಮರ್ಷಿಯಲ್ ರಸೀದಿಗಳು ಸೃಷ್ಟಿಸಿದ್ದು ಕೂಡ ಬೆಳಕಿಗೆ ಬಂದಿದೆ. ದೊಡ್ಡ ದೊಡ್ಡ ವಹಿವಾಟುಗಳಲ್ಲಿ ಅಕ್ರಮ ಹಣ ಸಂಪಾದನೆ ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ಸದ್ಯ ಎಲ್ಲವನ್ನೂ ವಶಕ್ಕೆ ಪಡೆದು ಐಟಿ ತಂಡ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡನಂತೆ: ಕುಮಾರಸ್ವಾಮಿ ಈ ಮಾತು ಹೇಳಿದ್ಯಾರಿಗೆ?

ಐಟಿ ದಾಳಿಯಲ್ಲಿ ಪತ್ತೆಯಾದ ಹಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಟೆಂಡರ್​ಗಳಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದು ಬೆಳಕಿಗೆ ಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ಬಿಲ್​ ಬಿಡುಗಡೆ ಮಾಡಿಸಿಕೊಂಡು, ಸಬ್ ಕಾಂಟ್ರ್ಯಾಕ್ಟರ್​ಗಳ ಮೂಲಕ ಅಕ್ರಮ ಹಣ ಗಳಿಸಿರೋದು ಪತ್ತೆಯಾಗಿದೆ. ಸದ್ಯ ಎಲ್ಲಾ ದಾಖಲೆ ವಶಕ್ಕೆ ಪಡೆದು ಐಟಿ ತಂಡ ತನಿಖೆ ಮುಂದುವರೆಸಿದೆ.

ಐಟಿ ದಾಳಿಯ ವಿಚಾರ ರಾಜಕೀಯವಾಗಿ ತಿರುವು ಪಡೆದುಕೊಂಡಿದ್ದು, ರಾಜಕೀಯ ನಾಯಕರು ಆರೋಪ ಪ್ರತ್ಯಾರೋಪಗಳು ಮಾಡಿದ್ದಾರೆ. ಬಿಜೆಪಿ ರಾಜಕೀಯ ಮಾಡುತ್ತಿದೆ ಅಂತ ಸಿಎಂ ಸಿದ್ದಾರಾಮಯ್ಯ ವಾಗ್ದಾಳಿ ನಡೆಸಿದ್ದರು. ನಮಗೆ ಹೈಕಮಾಂಡ್​ ನಯಾಪೈಸೆ ಹಣವನ್ನೂ ಕೇಳಿಲ್ಲ. ಬಿಜೆಪಿಯ ಎಲ್ಲಾ ಆರೋಪ ಸುಳ್ಳು, ಎಲ್ಲವೂ ನಿರಾಧಾರ ಅಂತ ಹೇಳಿದ್ದಾರೆ.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.