ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅಪ್ಪ ಕಟ್ಟಡವೊಂದರ 20 ನೇ ಮಹಡಿಯಿಂದ ಬಿದ್ದು ಸಾವು

|

Updated on: Mar 10, 2023 | 8:27 PM

ಗುರುಗ್ರಾಮದ ಸೆಕ್ಟರ್ 54ರ ಡಿಎಲ್‌ಎಫ್ ದಿ ಕ್ರೆಸ್ಟ್‌ನಲ್ಲಿ 20 ನೇ ಮಹಡಿಯಿಂದ ಬಿದ್ದು ರಮೇಶ್ ಅಗರ್ವಾಲ್ ಸಾವನ್ನಪ್ಪಿದ್ದಾರೆ ಎಂದು ಪೂರ್ವ ಡಿಸಿಪಿ ವೀರೇಂದ್ರ ವಿಜ್ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ವಿಜ್ ತಿಳಿಸಿದ್ದಾರೆ.

ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅಪ್ಪ ಕಟ್ಟಡವೊಂದರ 20 ನೇ ಮಹಡಿಯಿಂದ ಬಿದ್ದು ಸಾವು
ಓಯೋ
Follow us on

ಓಯೋ (Oyo) ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್ (Ritesh Agarwal) ಅವರ ತಂದೆ ರಮೇಶ್ ಅಗರ್ವಾಲ್  (Ramesh Agarwal)ಅವರು ಗುರುಗ್ರಾಮ್‌ನಲ್ಲಿನ ಕಟ್ಟಡವೊಂದರ 20 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ರಮೇಶ್ ಅಗರ್ವಾಲ್ ಅವರು ಪತ್ನಿಯೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ರಿತೇಶ್ ಅಗರ್ವಾಲ್ ಅದೇ ಕಟ್ಟಡದಲ್ಲಿ ವಾಸಿಸುತ್ತಿರಲಿಲ್ಲ ಎಂದು ಮಿಂಟ್ ವರದಿ ಮಾಡಿದೆ. ಗುರುಗ್ರಾಮದ ಸೆಕ್ಟರ್ 54ರ ಡಿಎಲ್‌ಎಫ್ ದಿ ಕ್ರೆಸ್ಟ್‌ನ 20 ನೇ ಮಹಡಿಯಿಂದ ಬಿದ್ದು ರಮೇಶ್ ಅಗರ್ವಾಲ್ ಸಾವನ್ನಪ್ಪಿದ್ದಾರೆ ಎಂದು ಪೂರ್ವ ಡಿಸಿಪಿ ವೀರೇಂದ್ರ ವಿಜ್ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ವಿಜ್ ತಿಳಿಸಿದ್ದಾರೆ.

ಅತೀವ ದುಃಖದಿಂದ ನನ್ನ ಕುಟುಂಬ ಮತ್ತು ನಾನು, ನಮ್ಮ ಮಾರ್ಗದರ್ಶಿ ಬೆಳಕು ಮತ್ತು ಶಕ್ತಿ, ನನ್ನ ತಂದೆ ಶ್ರೀ ರಮೇಶ್ ಅಗರ್ವಾಲ್ ಮಾರ್ಚ್ 10 ರಂದು ನಿಧನರಾದರು ಎಂಬ ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇವೆ. ಅವರು ಪೂರ್ಣ ಜೀವನವನ್ನು ನಡೆಸಿದರು. ನನಗೆ ಮತ್ತು ನಮ್ಮಲ್ಲಿ ಅನೇಕರಿಗೆ ಪ್ರತಿದಿನ ಸ್ಫೂರ್ತಿ ನೀಡಿದರು. ಅವರ ನಿಧನ ನಮ್ಮ ಕುಟುಂಬಕ್ಕೆ ಅಪಾರ ನಷ್ಟವಾಗಿದೆ. ನನ್ನ ತಂದೆಯ ಸಹಾನುಭೂತಿ ಮತ್ತು ಪ್ರೀತಿ ನಮ್ಮ ಕಷ್ಟದ ಸಮಯದಲ್ಲಿ ನಮ್ಮ ಕೈ ಹಿಡಿದು ನಮ್ಮನ್ನು ಮುನ್ನಡೆಸಿತು. ಅವರ ಮಾತುಗಳು ನಮ್ಮ ಹೃದಯದಲ್ಲಿ ಆಳವಾಗಿ ಅನುರಣಿಸುತ್ತವೆ. ಈ ದುಃಖದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸುವಂತೆ ನಾವು ಪ್ರತಿಯೊಬ್ಬರಲ್ಲಿ ವಿನಂತಿಸುತ್ತೇವೆ ಎಂದು ರಿತೇಶ್ ಅಗರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಭಾರೀ ಬಿಸಿಲು: ಕಾರ್ಮಿಕರ ಕೆಲಸದ ಅವಧಿ ಬದಲಾವಣೆ; ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕರೆ

ಕುಟುಂಬವು ರಿತೇಶ್ ಅಗರ್ವಾಲ್ ಅವರ ವಿವಾಹ ಸಂಭ್ರಮಾಚರಣೆ ಮಾಡಿದಕೆಲವು ದಿನಗಳ ನಂತರ ಈ ಘಟನೆ ಸಂಭವಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಸಾಫ್ಟ್‌ಬ್ಯಾಂಕ್‌ನ ಮಸಯೋಶಿ ಸನ್ ಸೇರಿದಂತೆ ಪ್ರಮುಖ ಸ್ಟಾರ್ಟಪ್ ಸಂಸ್ಥಾಪಕರು ಮತ್ತು ಹೂಡಿಕೆದಾರರು ಇದರಲ್ಲಿ ಭಾಗವಹಿಸಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರು ರಿತೇಶ್ ಅಗರ್ವಾಲ್ ಮತ್ತು ಅವರ ಪತ್ನಿ ಗೀತಾಂಶ ಸೂದ್ ಅವರೊಂದಿಗೆ ಇರುವವರ ಫೋಟೋಗಳನ್ನು ಹಂಚಿಕೊಂಡು ದಂಪತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Fri, 10 March 23