Pakhala Divas: ಪಖಾಲ ಕೇವಲ ಆಹಾರವಲ್ಲ, ಒಡಿಶಾದ ಸಂಸ್ಕೃತಿಯ ಗುರುತು: ಧರ್ಮೇಂದ್ರ ಪ್ರಧಾನ್

|

Updated on: Mar 21, 2024 | 11:08 AM

ಪಖಾಲ ಕೇವಲ ಆಹಾರ ಪದಾರ್ಥವಲ್ಲ, ಇದು ಒಡಿಶಾದ ಸಂಸ್ಕೃತಿಯ ಗುರುತು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಪಖಾಲ ದಿವಸ್​ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ಪಖಾಲವನ್ನು ತಿನ್ನುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಪಖಾಲವನ್ನು ಸವಿಯುವುದು ಸಂತೋಷವನ್ನು ದ್ವಿಗುಣಗೊಳಿಸುತ್ತದೆ ಎಂದು ಬರೆದಿದ್ದಾರೆ. ಪಖಾಲ ಎನ್ನುವ ಖಾದ್ಯವನ್ನು ಸಸ್ಯಾಹಾರಿ, ಮಾಂಸಾಹಾರಿ ಭಕ್ಷ್ಯಗಳೊಂದಿಗೆ ಸವಿಯಲಾಗುತ್ತದೆ. ಮಾರ್ಚ್​ 20ರಂದು ಪಖಾಲ ದಿವಸ್ ಆಗಿ ಆಚರಿಸಲಾಗುತ್ತದೆ, 2015ರಿಂದ ಈ ವಾಡಿಕೆ ಶುರುವಾಗಿದೆ.

Pakhala Divas: ಪಖಾಲ ಕೇವಲ ಆಹಾರವಲ್ಲ, ಒಡಿಶಾದ ಸಂಸ್ಕೃತಿಯ ಗುರುತು: ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್
Follow us on

ಪಖಾಲ(Pakhala) ಕೇವಲ ಆಹಾರ ಪದಾರ್ಥವಲ್ಲ, ಇದು ಒಡಿಶಾದ ಸಂಸ್ಕೃತಿಯ ಗುರುತು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಹೇಳಿದ್ದಾರೆ. ಪಖಾಲ ದಿವಸ್​ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ಪಖಾಲವನ್ನು ತಿನ್ನುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಪಖಾಲವನ್ನು ಸವಿಯುವುದು ಸಂತೋಷವನ್ನು ದ್ವಿಗುಣಗೊಳಿಸುತ್ತದೆ ಎಂದು ಬರೆದಿದ್ದಾರೆ. ಪಖಾಲ ಎನ್ನುವ ಖಾದ್ಯವನ್ನು ಸಸ್ಯಾಹಾರಿ, ಮಾಂಸಾಹಾರಿ ಭಕ್ಷ್ಯಗಳೊಂದಿಗೆ ಸವಿಯಲಾಗುತ್ತದೆ. ಮಾರ್ಚ್​ 20ರಂದು ಪಖಾಲ ದಿವಸ್ ಆಗಿ ಆಚರಿಸಲಾಗುತ್ತದೆ, 2015ರಿಂದ ಈ ವಾಡಿಕೆ ಶುರುವಾಗಿದೆ.

ಅಂತಾರಾಷ್ಟ್ರೀಯ ಖ್ಯಾತಿಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಮರಳಿನ ಮೇಲೆ ಪಖಾಲದ ತಟ್ಟೆಯನ್ನು ರಚಿಸುವ ಮೂಲಕ ತಮ್ಮ ಕಲೆಯ ಮಾಂತ್ರಿಕತೆಯನ್ನು ಪ್ರದರ್ಶಿಸಿದ್ದಾರೆ. ಹಲವಾರು ಸಂಸ್ಥೆಗಳು ಪಖಾಲ ಔತಣಕೂಟವನ್ನು ಆಯೋಜಿಸಿದ್ದವು. ಪಾಕಪದ್ಧತಿಯ ಸೈಡ್ ಡಿಶ್​ಗಳಾದ ರಾಯ್ತಾ, ಹಪ್ಪಳ, ಉಪ್ಪಿನಕಾಯಿ,ಚಟ್ನಿ, ತರಕಾರಿಗಳ ಫ್ರೈ, ದಾಲ್ ಊಟದ ಸ್ವಾದವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಒಡಿಶಾ ಎನ್ನುವ ಹೆಸರು ಕೇಳುತ್ತಿದ್ದಂತೆ ನಮಗೆ ನೆನಪಾಗುವುದು ಪುರಿಯ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಪ್ರಸಾದವಾಗಿ ತಯಾರಿಸಲಾದ ಛಪ್ಪನ್ ಭೋಗ್. ಈ ಐತಿಹಾಸಿಕ ಪ್ರದೇಶದ ಆಹಾರದ ವೈವಿಧ್ಯತೆಯ ಬಗ್ಗೆ ಕೆಲವೇ ಜನರಿಗೆ ತಿಳಿದಿರುತ್ತದೆ.
ರಾತ್ರಿ ಅಕ್ಕಿ ನೆನೆ ಹಾಕಿ ಬೆಳಗ್ಗೆ ಆ ಅಕ್ಕಿಯಿಂದ ಪಖಾಲವನ್ನು ತಯಾರಿಸಲಾಗುತ್ತದೆ. ಪಖಾಲ ಭಾತ್ ಅನ್ನು ಹುರಿದ ಈರುಳ್ಳಿ, ಜೀರಿಗೆ ಮತ್ತು ಪುದೀನ ಸೇರಿಸಿ ತಯಾರಿಸಲಾಗುತ್ತದೆ.

ಬಂಗಾಳ ಮತ್ತು ಜಾರ್ಖಂಡ್‌ನಲ್ಲೂ ಇದನ್ನು ರುಚಿಯಾಗಿ ಮಾಡುತ್ತಾರೆ. ಬಂಗಾಳದಲ್ಲಿ ಇದನ್ನು ಪಂಥಾ ಭಾತ್ ಎಂದು ಕರೆಯಲಾಗುತ್ತದೆ. ಪಖಾಲ ಭೋಜ್ ಆಲೂಗಡ್ಡೆ, ಬದನೆ ಅಥವಾ ಹುರಿದ ಮೀನು, ಹುರಿದ ತರಕಾರಿಗಳನ್ನು ಬಳಸಿ ಸಿದ್ಧಪಡಿಸಲಾಗುತ್ತದೆ.

ಪಖಾಲ ಮಾಡುವ ವಿಧಾನ
-ಪಖಾಲ ಭಾತ್ ಮಾಡಲು, ಮೊದಲು ಅಕ್ಕಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮತ್ತು ಒಂದರಿಂದ ಎರಡು ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಿ. ಕುಕ್ಕರ್‌ನಲ್ಲಿ ಸೀಟಿಯನ್ನೂ ಹಾಕಬಹುದು. ಒಂದಕ್ಕಿಂತ ಹೆಚ್ಚು ಬೇಡ. ಬಹಳಷ್ಟು ಮಂದಿ ಒಂದು ದಿನ ಮುಂಚಿತವಾಗಿ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡುತ್ತಾರೆ.

ಅಕ್ಕಿಯನ್ನು ಕುದಿಸಿದ ನಂತರ, ಅದನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ ಮೊಸರು ಜೊತೆಗೆ ಹಾಲು ಸೇರಿಸಿ ಮತ್ತು ಸುಮಾರು 4 ರಿಂದ 5 ನಿಮಿಷಗಳ ಕಾಲ ಬಿಡಿ. ಮತ್ತೊಂದು ಕಡೆ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.

-ಎಣ್ಣೆ ಬಿಸಿಯಾದ ನಂತರ ಅದಕ್ಕೆ ಜೀರಿಗೆ, ಕೆಂಪು ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಶುಂಠಿ ಸೇರಿಸಿ ಹದ ಮಾಡಿಕೊಳ್ಳಿ ಅದನ್ನು ಮೊಸರು ಅಕ್ಕಿ ಮಿಶ್ರಣಕ್ಕೆ ಹಾಕಿ.
-ನೀವು ಮೇಲೆ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಬಡಿಸಬಹುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:08 am, Thu, 21 March 24