ಇಬ್ಬರು ಅಮಾಯಕ ಮಕ್ಕಳನ್ನು ಹತ್ಯೆಗೈದು ಪರಾರಿಯಾಗಿದ್ದ ಮತ್ತೊಬ್ಬ ಆರೋಪಿ ಜಾವೇದ್ ಬಂಧನ
ಪಕ್ಕದ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಕತ್ತು ಸೀಳಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಜಾವೇದ್ನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಹುಡುಕಿಕೊಟ್ಟವರಿಗೆ ಪೊಲೀಸರು 25 ಸಾವಿರ ಬಹುಮಾನವನ್ನು ಘೋಷಿಸಿದ್ದರು. ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಾಜಿದ್ ನನ್ನು ಅದೇ ದಿನ ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿತ್ತು.
ಯಾವುದೇ ಬಲವಾದ ಕಾರಣವಿಲ್ಲದಲ್ಲೆ ಪಕ್ಕದ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಕತ್ತು ಸೀಳಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಜಾವೇದ್ನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಹುಡುಕಿಕೊಟ್ಟವರಿಗೆ ಪೊಲೀಸರು 25 ಸಾವಿರ ಬಹುಮಾನವನ್ನು ಘೋಷಿಸಿದ್ದರು. ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಾಜಿದ್ ನನ್ನು ಅದೇ ದಿನ ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿತ್ತು.
ಸಾಜಿದ್ 12 ವರ್ಷದ ಆಯುಷ್ ಮತ್ತು 6 ವರ್ಷದ ಅಹಾನ್‌ಗೆ ಚಾಕುವಿನಿಂದ 23 ಬಾರಿ ಇರಿದಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಪಡಿಸಿದೆ. ಅಹಾನ್ ದೇಹದಲ್ಲಿ 9 ಗಾಯಗಳು ಕಂಡುಬಂದಿವೆ. ಏಕಾಏಕಿ ಮನೆಗೆ ಬಂದವರೇ ಮಕ್ಕಳ ಕತ್ತು ಸೀಳಿದ್ದರು, ರಕ್ತದ ಕೋಡಿಯೇ ಹರಿಯುತ್ತಿದ್ದರೂ ಅಷ್ಟಕ್ಕೆ ನಿಲ್ಲಿಸಿದ ಆರೋಪಿಗಳು ಎದೆ, ಬೆನ್ನು, ಕೈಗಳ ಮೇಲೂ ಹಲ್ಲೆ ನಡೆಸಿದ್ದರು.
ಅದೇ ದಿನ ಎನ್‌ಕೌಂಟರ್‌ನಲ್ಲಿ ಸಾಜಿದ್‌ನನ್ನು ಪೊಲೀಸರು ಕೊಂದಿದ್ದರು. ಮಕ್ಕಳಿಬ್ಬರ ಸಾವಿನಿಂದ ನಮಗೂ ನೋವಾಗಿದೆ ಎಂದರು. ಸಾಜಿದ್‌ನನ್ನು ಎನ್‌ಕೌಂಟರ್ ಮಾಡುವ ಮೂಲಕ ಪೊಲೀಸರು ಸರಿಯಾದ ಕೆಲಸ ಮಾಡಿದ್ದಾರೆ ನನ್ನ ಮಗ ಸತ್ತಿದ್ದಕ್ಕಿಂತ ಆ ಮುಗ್ಧ ಮಕ್ಕಳ ಸಾವು ಹೆಚ್ಚು ದುಃಖವನ್ನು ತಂದಿದೆ ಎಂದು ಸಾಜಿದ್ ತಾಯಿ ಹೇಳಿದ್ದರು.
ಮತ್ತಷ್ಟು ಓದಿ: ಉತ್ತರ ಪ್ರದೇಶ: ಪಕ್ಕದ ಮನೆಯ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದ ಕ್ಷೌರಿಕ ಎನ್‌ಕೌಂಟರ್‌ನಲ್ಲಿ ಸಾವು
ಪಕ್ಕದ ಮನೆಯ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದ ಕ್ಷೌರಿಕ ಎನ್‌ಕೌಂಟರ್‌ನಲ್ಲಿ ಸಾವು
ಪಕ್ಕದ ಮನೆಯ ಇಬ್ಬರು ಮಕ್ಕಳನ್ನು ಕತ್ತು ಸೀಳಿ ಹತ್ಯೆ ಮಾಡಿದ್ದ ಕ್ಷೌರಿಕನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ಉತ್ತರ ಪ್ರದೇಶದ ಬದೌನ್ನಲ್ಲಿ ಕ್ಷೌರಿಕನೊಬ್ಬ ಪಕ್ಕದ ಮನೆಯಲ್ಲಿದ್ದ 11 ಹಾಗೂ 6 ವರ್ಷದ ಮಕ್ಕಳನ್ನು ಹತ್ಯೆ ಮಾಡಿ, ಮತ್ತೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದ್ದ. ಮಂಡಿ ಸಮಿತಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ಆರೋಪಿಯನ್ನು ಸಾಜಿದ್ (22) ಎಂದು ಗುರುತಿಸಲಾಗಿದ್ದು, ಇಬ್ಬರು ಮಕ್ಕಳನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದ. ಪೊಲೀಸರು ತಮ್ಮ ಕಾರ್ಯಾಚರಣೆ ತಕ್ಷಣವೇ ಆರಂಭಿಸಿದ್ದರು, ಬಳಿಕ ಎನ್‌ಕೌಂಟರ್ ಮಾಡಿ ಆತನನ್ನು ಹತ್ಯೆ ಮಾಡಿದ್ದಾರೆ. ಸ್ಥಳೀಯರ ಪ್ರಕಾರ, ಆರೋಪಿಯು ತನ್ನ ನೆರೆಯ ವಿನೋದ್ ಕುಮಾರ್ ಕುಟುಂಬದೊಂದಿಗೆ ಆಗಾಗ ಜಗಳವಾಡುತ್ತಿದ್ದು, ಆತ ಸಲೂನ್ ಒಂದನ್ನು ನಡೆಸುತ್ತಿದ್ದ ಎಂಬುದು ತಿಳಿದುಬಂದಿದೆ.
ವಿನೋದ್ ಕೂಡ ಪಾರ್ಲರ್ ನಡೆಸುತ್ತಿದ್ದಾರೆ, ಸಾಜಿದ್ ಮನೆ ಪ್ರವೇಶಿಸಿದಾಗ ಪಾರ್ಲರ್ ನಡೆಸುತ್ತಿರುವ ವಿನೋದ್ ಕುಮಾರ್ ಅವರ ಪತ್ನಿ ಮೂವರು ಮಕ್ಕಳೊಂದಿಗೆ ಮನೆಯಲ್ಲಿ ಒಬ್ಬರೇ ಇದ್ದರು. ಆರೋಪಿಯು ವಿನೋದ್ ಮನೆಗೆ ಬಂದು ಅವರ ಮಕ್ಕಳಾದ ಆಯುಷ್, ಪಿಯೂಷ್ ಮತ್ತು ಹನಿ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದ.