ದೆಹಲಿ: ತಮಿಳುನಾಡಿನಲ್ಲಿ ಗುರುವಾರ ಆರಂಭವಾಗಿರುವ 44ನೇ ಚೆಸ್ ಒಲಿಂಪಿಯಾಡ್ನಿಂದ (44th Chess Olympiad )ಪಾಕಿಸ್ತಾನ (Pakistan) ತಮ್ಮ ತಂಡವನ್ನು ಹಿಂತೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಭಾರತ ಪಾಕಿಸ್ತಾನ ಇಂಥಾ ಪ್ರತಿಷ್ಠಿತ ಕಾರ್ಯಕ್ರಮವನ್ನು ರಾಜಕೀಯಗೊಳಿಸಿದ್ದು ತುಂಬಾ ದುರದೃಷ್ಟಕರ ಎಂದಿದ್ದಾರೆ. ಪಾಕಿಸ್ತಾನದ ನಿರ್ಧಾರ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi) ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಪಾಕಿಸ್ತಾನ ದಿಢೀರ್ ನಿರ್ಧಾರ ತೆಗೆದುಕೊಂಡಿದೆ ಎಂದಿದ್ದಾರೆ. ಭಾರತಕ್ಕೆ ಪಾಕಿಸ್ತಾನ ತಂಡ ತಲುಪಿತ್ತು. ಅಷ್ಟೊತ್ತಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಕಾರ್ಯಕ್ರಮದ ಬಗ್ಗೆ ಹೇಳಿಕೆ ನೀಡಿ ಅದನ್ನು ರಾಜಕೀಯಗೊಳಿಸಿ ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿರುವುದು ದುರದೃಷ್ಟಕರ ಎಂದಿದ್ದಾರೆ.
It is surprising that Pakistan has taken a decision not to participate in Chess Olympiad even after their team reached India: MEA spokesperson Arindam Bagchi
— ANI (@ANI) July 28, 2022
ಒಲಿಂಪಿಯಾಡ್ ಟಾರ್ಚ್ ರಿಲೇ ಜಮ್ಮು ಮತ್ತು ಕಾಶ್ಮೀರವನ್ನು ಹಾದು ಹೋಗುತ್ತಿದೆ ಎಂದು ಹೇಳಿ ಪಾಕಿಸ್ತಾನ ಚೆಸ್ ಒಲಿಂಪಿಯಾಡ್ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬಾಗ್ಚಿ, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಭಾರತದ ಭಾಗವಾಗಿತ್ತು, ಆಗಿದೆ ಮತ್ತು ಅದು ಅವಿಭಾಜ್ಯ ಅಂಗವಾಗಿಯೇ ಇರಲಿದೆ ಎಂದು ಹೇಳಿದ್ದಾರೆ.
Published On - 5:37 pm, Thu, 28 July 22