Breaking ಜಾರ್ಖಂಡ್ ನ್ಯಾಯಾಧೀಶರ ಹತ್ಯೆ ಪ್ರಕರಣ: ಇಬ್ಬರನ್ನು ದೋಷಿ ಎಂದು ಘೋಷಿಸಿದ ರಾಂಚಿ ನ್ಯಾಯಾಲಯ

ಅಪಘಾತವೆಂದು ಬಿಂಬಿಸಲು ಆಟೋದಲ್ಲಿ ಗುದ್ದಿ ನ್ಯಾಯಾಧೀಶರನ್ನು ಹತ್ಯೆ ಮಾಡಲಾಗಿತ್ತು.  ಶಿಕ್ಷೆಯ ಪ್ರಮಾಣ ಮುಂದಿನ ವಾರ ಪ್ರಕಟವಾಗಲಿದೆ.

Breaking ಜಾರ್ಖಂಡ್ ನ್ಯಾಯಾಧೀಶರ ಹತ್ಯೆ ಪ್ರಕರಣ: ಇಬ್ಬರನ್ನು ದೋಷಿ ಎಂದು ಘೋಷಿಸಿದ ರಾಂಚಿ ನ್ಯಾಯಾಲಯ
TV9kannada Web Team

| Edited By: Rashmi Kallakatta

Jul 28, 2022 | 6:40 PM

ಜಾರ್ಖಂಡ್ (Jharkhand) ಧನ್ಬಾದ್ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ ಅವರಿಗೆ ಆಟೋ ಡಿಕ್ಕಿ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ದೋಷಿ  ಎಂದು ರಾಂಚಿಯಲ್ಲಿರುವ (Ranchi)ವಿಶೇಷ ಸಿಬಿಐ  ಕೋರ್ಟ್ ಘೋಷಿಸಿದೆ. ಒಂದು ವರ್ಷದ ಹಿಂದೆ ಈ  ಕೊಲೆ ನಡೆದಿತ್ತು. ಅಪಘಾತವೆಂದು ಬಿಂಬಿಸಲು ಆಟೋದಲ್ಲಿ ಗುದ್ದಿ ನ್ಯಾಯಾಧೀಶರನ್ನು ಹತ್ಯೆ ಮಾಡಲಾಗಿತ್ತು.  ಶಿಕ್ಷೆಯ ಪ್ರಮಾಣ ಮುಂದಿನ ವಾರ ಪ್ರಕಟವಾಗಲಿದೆ. ಜಾರ್ಖಂಡ್ ಹೈಕೋರ್ಟ್ ಈ ಹಿಟ್ ಆಂಡ್ ರನ್ ಪ್ರಕರಣದ ಮೇಲ್ವಿಚಾರಣೆ ನಡೆಸಿತ್ತು. ನ್ಯಾಯಾಧೀಶರ ಮೇಲೆ ಆಟೋರಿಕ್ಷಾ ಡಿಕ್ಕಿ ಹೊಡೆಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಆಟೋ ಚಾಲಕ ರಾಹುಲ್ ವರ್ಮಾ ಮತ್ತು ಆತನ ಸಹಚರ ಲಖನ್ ವರ್ಮಾನನ್ನು ಬಂಧಿಸಲಾಗಿತ್ತು. ಇವರಿಬ್ಬರೂ ಧನ್ಬಾಗ್ ದಿಗ್ವಾದಿಹ್ ನವರಾಗಿದ್ದಾರೆ. ಹತ್ಯೆ ಪ್ರಕರಣ ನಡೆದಿ ಒಂದು ತಿಂಗಳಲ್ಲೇ ಅವರನ್ನು ಬಂಧಿಸಿದ್ದು, ಅವರಿಗೆ ಜಾಮೀನು ನೀಡಿರಲಿಲ್ಲ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಿದ್ದು, ಅಕ್ಟೋಬರ್ ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು.

ಏನಿದು ಪ್ರಕರಣ?

ಇದನ್ನೂ ಓದಿ

ಹೆಚ್ಚುವರಿ ಸೆಷನ್ ಜಡ್ಜ್ ಉತ್ತಮ್ ಆನಂದ್ (49) 2021 ಜುಲೈ 28ರಂದು ಬೆಳಗ್ಗೆ 5 ಗಂಟೆಗೆ ವಾಯುವಿಹಾರಕ್ಕೆ ಹೋದಾಗ ಆಟೋರಿಕ್ಷಾವೊಂದು ಬಂದು ಅವರಿಗೆ ಗುದ್ದಿತ್ತು. ಅಗಲವಾದ ರಸ್ತೆಯಲ್ಲಿ ಒಂದು ಭಾಗದಲ್ಲಿ ಜಡ್ಜ್ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಆಟೋ ಬಂದು ಡಿಕ್ಕಿ ಹೊಡೆದು ಹತ್ಯೆ ಮಾಡಿದೆ. ಧನ್ಬಾದ್ ನಲ್ಲಿ ನಡೆದ ಮಾಫಿಯಾ ಹತ್ಯೆ ಸೇರಿದಂತೆ ಹಲವಾರು ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರು, ಇಬ್ಬರು ಗ್ಯಾಂಗ್ ಸ್ಟರ್ ಗಳ ಜಾಮೀನು ಅರ್ಜಿ ತಳ್ಳಿದ್ದರು. ಅವರು ಹತ್ಯೆ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದು, ಆ ಪ್ರಕರಣದಲ್ಲಿ ಶಾಸಕರ ಆಪ್ತರೊಬ್ಬರು ಭಾಗಿಯಾಗಿದ್ದರು.

Follow us on

Related Stories

Most Read Stories

Click on your DTH Provider to Add TV9 Kannada