Breaking ಪಶ್ಚಿಮ ಬಂಗಾಳದ ಸಚಿವ ಸಂಪುಟದಿಂದ ಪಾರ್ಥ ಚಟರ್ಜಿ ವಜಾ
Partha Chatterjee ಎಸ್ಎಸ್ಸಿ ಹಗರಣದ ಆರೋಪಿ ಬಂಗಾಳ ಸಚಿವ ಸಂಪುಟದಲ್ಲಿ ವಿವಿಧ ಖಾತೆಗಳನ್ನು ಹೊಂದಿರುವ ಪಾರ್ಥ ಚಟರ್ಜಿಯನ್ನು ಜುಲೈ 28ರಿಂದ ಎಲ್ಲಾ ಸ್ಥಾನ, ಜವಾಬ್ದಾರಿಗಳಿಂದ ತೆರವು ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿದೆ.
ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆಸಿ ಬಂಧಿತರಾಗಿರುವ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿಯನ್ನು (Partha Chatterjee) ಗುರುವಾರ ಸಚಿವ ಸಂಪುಟದಿಂದ ವಜಾ ಮಾಡಲಾಗಿದೆ. ಎಸ್ಎಸ್ಸಿ ಹಗರಣದ ಆರೋಪಿ ಬಂಗಾಳ ಸಚಿವ ಸಂಪುಟದಲ್ಲಿ ವಿವಿಧ ಖಾತೆಗಳನ್ನು ಹೊಂದಿರುವ ಪಾರ್ಥ ಚಟರ್ಜಿಯನ್ನು ಜುಲೈ 28ರಿಂದ ಎಲ್ಲಾ ಸ್ಥಾನ, ಜವಾಬ್ದಾರಿಗಳಿಂದ ತೆರವು ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿದೆ. ಬಂಗಾಳ ಎಸ್ಎಸ್ಸಿ ನೇಮಕಾತಿ (SSC Scam) ಹಗರಣದಲ್ಲಿ ಆರೋಪಿಯಾಗಿರುವ ಪಾರ್ಥ ಚಟರ್ಜಿಯನ್ನು ರಾಜ್ಯ ಸಚಿವ ಸಂಪುಟದಿಂದ ತೆಗೆದು ಹಾಕಲಾಗಿದೆ ಎಂದು ಮಮತಾ ಬ್ಯಾನರ್ಜಿ ಸರ್ಕಾರದ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ. ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಸೇರಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಚಟರ್ಜಿಯನ್ನು ಪಕ್ಷ ಮತ್ತು ಸಚಿವ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಟಿಎಂಸಿಯಲ್ಲೇ ಒತ್ತಾಯ ಕೇಳಿ ಬಂದ ಹಿನ್ನಲೆಯಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಕಾಮರ್ಸ್ ಮತ್ತು ಇಂಡಸ್ಟ್ರಿ , ಸಂಸದೀಯ ವ್ಯವಹಾರ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್, ಪಬ್ಲಿಕ್ ಎಂಟರ್ ಪ್ರೈಸಸ್ ಆಂಡ್ ಇಂಡಸ್ಟ್ರಿಯಲ್ ರೀಕನ್ ಸ್ಟ್ರಕ್ಷನ್ ಖಾತೆಗಳನ್ನು ಚಟರ್ಜಿ ಹೊಂದಿದ್ದರು.
ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಅವರು ಜಾರಿ ನಿರ್ದೇಶನಾಲಯ ಜುಲೈ 23ರಂದು ಬಂಧಿಸಿತ್ತು. ಇವರ ಮನೆಯಿಂದ 21 ಕೋಟಿ ನಗದು ವಶಪಡಿಸಿಕೊಂಡ ನಂತರ ಇಡಿ ಇವರನ್ನು ಬಂಧಿಸಿತ್ತು ಅರ್ಪಿತಾ ಅವರ ಇನ್ನೊಂದು ಫ್ಲಾಟ್ನಿಂದ 29 ಕೋಟಿ ನಗದು ಮತ್ತು5 ಕೆಜಿ ಚಿನ್ನವನ್ನು ಇಡಿ ವಶ ವಡಿಸಿಕೊಂಡ ಕೆಲವೇ ಗಂಟೆಗಳಲ್ಲಿ ಸಚಿವರನ್ನು ವಜಾ ಮಾಡಲಾಗಿದೆ.
Published On - 4:22 pm, Thu, 28 July 22