
ನವದೆಹಲಿ, ಮೇ 23: ದೆಹಲಿಯಿಂದ ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ(IndiGo) ವಿಮಾನವು ಬುಧವಾರ ಗಾಳಿಯಲ್ಲಿ ತೀವ್ರ ಪ್ರಕ್ಷುಬ್ಧತೆ ಎದುರಿಸಿತ್ತು. ಈ ಸಂದರ್ಭದಲ್ಲಿ ವಾಯು ಪ್ರದೇಶವನ್ನು ಬಳಸಲು ಪಾಕಿಸ್ತಾನವು ಅನುಮತಿ ನೀಡಲಿಲ್ಲ ಎನ್ನುವ ವಿಚಾರ ಬಹಿರಂಗಗೊಂಡಿದೆ. ವಿಮಾನಯಾನ ಸಂಸ್ಥೆಯ ಮಾಹಿತಿ ಪ್ರಕಾರ, ತೀವ್ರ ಪ್ರಕ್ಷುಬ್ಧತೆ ನಡುವೆಯೂ ಎಲ್ಲಾ 227 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.
ಆದರೆ ಈ ಸಮಯದಲ್ಲಿ ಪಾಕಿಸ್ತಾನದ ನಾಚಿಕೆಗೇಡಿನ ಕೃತ್ಯವೂ ಬೆಳಕಿಗೆ ಬಂದಿದೆ. ತುರ್ತು ಪರಿಸ್ಥಿತಿಯಲ್ಲಿ ಸಿಲುಕಿದ್ದ ಪೈಲಟ್ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲು ಅನುಮತಿ ಕೇಳಿದ್ದರು, ಆದರೆ ಪಾಕಿಸ್ತಾನ ಅದನ್ನು ನಿರಾಕರಿಸಿತ್ತು.
6E 2142 ವಿಮಾನವು ಶ್ರೀನಗರದ ಬಳಿ ತೀವ್ರ ಪ್ರತಿಕೂಲ ಹವಾಮಾನ ಪರಿಸ್ಥಿತಿಯನ್ನು ಎದುರಿಸಿತು ಅದಾದ ನಂತರ ಪೈಲಟ್ ಪ್ರಕ್ಷುಬ್ಧತೆಯನ್ನು ತಪ್ಪಿಸಲು ಪಾಕಿಸ್ತಾನದ ವಾಯುಪ್ರದೇಶವನ್ನು ಸ್ವಲ್ಪ ಸಮಯದವರೆಗೆ ಪ್ರವೇಶಿಸಲು ಲಾಹೋರ್ ವಾಯು ಸಂಚಾರ ನಿಯಂತ್ರಣ (ATC) ಯಿಂದ ಅನುಮತಿ ಕೋರಿದ್ದರು. ಆದರೆ, ಈ ವಿನಂತಿಯನ್ನು ತಿರಸ್ಕರಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಮತ್ತಷ್ಟು ಓದಿ: ಆಲಿಕಲ್ಲು ಮಳೆಯಿಂದ ಇಂಡಿಗೋ ವಿಮಾನದ ಮುಂಭಾಗಕ್ಕೆ ಹಾನಿ; ಪ್ರಯಾಣಿಕರ ಕಿರುಚಾಟದ ಮಧ್ಯೆ ತುರ್ತು ಭೂಸ್ಪರ್ಶ
ವಿಮಾನವು ತನ್ನ ಮೂಲ ಹಾರಾಟದ ಹಾದಿಯಲ್ಲಿ ಸಾಗುತ್ತಿರುವಾಗ, ಶ್ರೀನಗರ ಬಳಿ ಪ್ರಕ್ಷುಬ್ಧತೆಗೆ ಸಿಲುಕಿ, ಪ್ರಯಾಣಿಕರು ಭಯಭೀತರಾದರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊಗಳಲ್ಲಿ, ವಿಮಾನವು ತೀವ್ರವಾಗಿ ಅಲುಗಾಡುತ್ತಿದ್ದಂತೆ ಪ್ರಯಾಣಿಕರು ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು.
दिल्ली से श्रीनगर जा रही इंडिगो फ़्लाइट पर बिजली गिरी और वह टर्बुलेंस में फँस गई। इस दौरान प्लेन के भीतर का नज़ारा।#IndiGoFlight #IndiGo #India #TURBULENCE #PlanetFitness #FlightTurbulence #FLIGHT #lightning pic.twitter.com/nxa4YTPOMA
— SANJAY TRIPATHI (@sanjayjourno) May 22, 2025
ಇಂಡಿಗೋ ವಿಮಾನ 6E 2142, ಹಠಾತ್ ಆಲಿಕಲ್ಲು ಮಳೆಯ ಪರಿಣಾಮ ಸಮಸ್ಯೆ ಎದುರಿಸಿತು, ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ