ಇಷ್ಟಪಟ್ಟವನೊಂದಿಗೆ ಮದುವೆಯಾಗಲು ಭಾರತಕ್ಕೆ ಬರಲಿದ್ದಾರೆ ಪಾಕ್​ ಯುವತಿ

|

Updated on: Dec 05, 2023 | 12:34 PM

ಭಾರತದ ಯುವಕ ಹಾಗೂ ಪಾಕಿಸ್ತಾನಿ ಯುವತಿ ನಡುವೆ ಪ್ರೀತಿಯ ಮೊಳಕೆ ಚಿಗುರೊಡೆದಿದೆ. ಹಾಗೆಯೇ ಯುವತಿಯು 45 ದಿನಗಳ ವೀಸಾ ಪಡೆದು ಯುವಕನನ್ನು ಮದುವೆಯಾಗಲು ಭಾರತಕ್ಕೆ ಬರಲಿದ್ದಾರೆ. ಅಟ್ಟಾರಿ-ವಾಘಾ ಗಡಿ ಮೂಲಕ ದೇಶಕ್ಕೆ ಬರುತ್ತಿದ್ದು, ಭಾರತ ಸರ್ಕಾರ ಆಕೆಗೆ 45 ದಿನಗಳ ವೀಸಾ ನೀಡಿದೆ.

ಇಷ್ಟಪಟ್ಟವನೊಂದಿಗೆ ಮದುವೆಯಾಗಲು ಭಾರತಕ್ಕೆ ಬರಲಿದ್ದಾರೆ ಪಾಕ್​ ಯುವತಿ
ಜವ್ರಿಯಾ
Image Credit source: News 9
Follow us on

ಭಾರತದ ಯುವಕ ಹಾಗೂ ಪಾಕಿಸ್ತಾನಿ ಯುವತಿ ನಡುವೆ ಪ್ರೀತಿಯ ಮೊಳಕೆ ಚಿಗುರೊಡೆದಿದೆ. ಹಾಗೆಯೇ ಯುವತಿಯು 45 ದಿನಗಳ ವೀಸಾ ಪಡೆದು ಯುವಕನನ್ನು ಮದುವೆಯಾಗಲು ಭಾರತಕ್ಕೆ ಬರಲಿದ್ದಾರೆ. ಅಟ್ಟಾರಿ-ವಾಘಾ ಗಡಿ ಮೂಲಕ ದೇಶಕ್ಕೆ ಬರುತ್ತಿದ್ದು, ಭಾರತ ಸರ್ಕಾರ ಆಕೆಗೆ 45 ದಿನಗಳ ವೀಸಾ ನೀಡಿದೆ.

ಜವ್ರಿಯಾ ಕೋಲ್ಕತ್ತಾ ಮೂಲದ ಸಮೀರ್ ಖಾನ್ ಅವರನ್ನು ವರಿಸಲಿದ್ದಾರೆ. ವರದಿಗಳ ಪ್ರಕಾರ, ಇಬ್ಬರು ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಹಿಳೆ ತನ್ನ ತಂದೆಯೊಂದಿಗೆ ಭಾರತಕ್ಕೆ ಬರಲಿದ್ದಾರೆ. ಕರಾಚಿ ನಿವಾಸಿ, ಅಜ್ಮತ್ ಇಸ್ಮಾಯಿಲ್ ಖಾನ್ ಮತ್ತು ಅವರ ಮಗಳನ್ನು ಸಮೀರ್ ಖಾನ್ ಮತ್ತು ಅವರ ತಂದೆ ಅಹ್ಮದ್ ಕಮಲ್ ಖಾನ್ ಯೂಸುಫ್ಜೈ ಅವರು ದೇಶಕ್ಕೆ ಸ್ವಾಗತಿಸಲಿದ್ದಾರೆ. ಅಮೃತಸರದ ಅಟ್ಟಾರಿ ಗಡಿಯಲ್ಲಿ ಅವರು ತಮ್ಮ ಅತಿಥಿಗಳನ್ನು ಭೇಟಿಯಾಗಲಿದ್ದಾರೆ.

ಸಮೀರ್ ಖಾನ್ ಮತ್ತು ಅವರ ತಂದೆ ಪ್ರಸ್ತುತ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಖಾಡಿಯನ್ ಗ್ರಾಮದಲ್ಲಿ ಸಂಬಂಧಿಕರೊಂದಿಗೆ ಇದ್ದಾರೆ. ತಮ್ಮ ಇಬ್ಬರು ಅತಿಥಿಗಳು ಪಾಕಿಸ್ತಾನದಿಂದ ಬರುತ್ತಾರೆ ಎಂದು ಅವರು ಕುತೂಹಲದಿಂದ ಕಾಯುತ್ತಿದ್ದಾರೆ.

ಭಾರತ ಸರ್ಕಾರವು ಜವಾರಿಯಾ ಖಾನಮ್ ಮತ್ತು ಆಕೆಯ ತಂದೆಗೆ ವೀಸಾ ನೀಡುತ್ತಿರಲಿಲ್ಲ. ಆಗ ಪಂಜಾಬ್‌ನ ಖಾಡಿಯನ್ ಗ್ರಾಮದ ಸಾಮಾಜಿಕ ಕಾರ್ಯಕರ್ತ ಮಕ್ಬೂಲ್ ಅಹ್ಮದ್ ಖಾದಿಯಾನ್ ಅವರು ದೇಶಕ್ಕೆ ವೀಸಾ ಪಡೆಯಲು ಸಹಾಯ ಮಾಡಿದರು. ಅವರ ವೀಸಾ 45 ದಿನಗಳವರೆಗೆ ಮಾನ್ಯವಾಗಿರುತ್ತದೆ.

ಮತ್ತಷ್ಟು ಓದಿ: ಪಾಕಿಸ್ತಾನಕ್ಕೆ ಹೋಗಿ ಫೇಸ್​ಬುಕ್​ ಸ್ನೇಹಿತನನ್ನು ಮದುವೆಯಾಗಿದ್ದ ಅಂಜು ಭಾರತಕ್ಕೆ ವಾಪಸ್

ಮಹಿಳೆ ಅಮೃತಸರಕ್ಕೆ ಬಂದ ಕೂಡಲೇ ನಗರದ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ. ಇಲ್ಲಿಂದ ಕೋಲ್ಕತ್ತಾಗೆ ಹಾರಲು ನಿರ್ಧರಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ  ಜವ್ರಿಯಾ ಮತ್ತು ಸಮೀರ್ ವಿವಾಹವಾಗಲಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ತನ್ನ ಮದುವೆಯ ನಂತರ, ಮಹಿಳೆ ತನ್ನ ವೀಸಾವನ್ನು ವಿಸ್ತರಿಸಲು ಭಾರತ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ.

ಸೀಮಾ ಎಂಬುವವರು ಭಾರತದ ಸಚಿನ್ ಮೀನಾ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದು, ಮದುವೆ ಮಾಡಿಕೊಳ್ಳುವ ಸಲುವಾಗಿ ತನ್ನ ಮಕ್ಕಳನ್ನೂ ಕಡೆದುಕೊಂಡು ಭಾರತಕ್ಕೆ ಬಂದಿದ್ದರು. ಅಂಜು ಎಂಬುವವರು ಪಾಕಿಸ್ತಾನಿ ಸ್ನೇಹಿತನ್ನು ಮದುವೆಯಾಗಲು ಪತಿ ಹಾಗೂ ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ್ದ ಘಟನೆಯೂ ಇತ್ತೀಚೆಗಷ್ಟೇ ವರದಿಯಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ