ಕೊರೊನಾಗೆ ಹಸುವಿನ ಸಗಣಿ-ಗಂಜಲವೇ ಮದ್ದು.. ಕೇಂದ್ರ ಸರ್ಕಾರದಿಂದ ಮಹತ್ವದ ಸಂಶೋಧನೆ

| Updated By: ಸಾಧು ಶ್ರೀನಾಥ್​

Updated on: Jan 06, 2021 | 2:25 PM

800 ವ್ಯಕ್ತಿಗಳ ಮೇಲೆ ವೈದ್ಯಕೀಯ ಪ್ರಯೋಗ ನಡೆಸಲಾಗಿದೆ. ಈ ವೇಳೆ ಹಾಲು, ಹಸುವಿನ ಗಂಜಲ, ಸಗಣಿ, ಮೊಸರು ಮತ್ತು ತುಪ್ಪ ಬಳಸಿ ಸಿದ್ಧಪಡಿಸುವಲ್ಲಿ ಪಂಚಗವ್ಯ ಶೇ.96 ಪರಿಣಾಮಕಾರಿಯಾಗಿದೆ ಎಂದು ವಲ್ಲಭಭಾಯ್ ತಿಳಿಸಿದ್ದಾರೆ. 

ಕೊರೊನಾಗೆ ಹಸುವಿನ ಸಗಣಿ-ಗಂಜಲವೇ ಮದ್ದು.. ಕೇಂದ್ರ ಸರ್ಕಾರದಿಂದ ಮಹತ್ವದ ಸಂಶೋಧನೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಕೊರೊನಾ ವೈರಸ್​ ಹರಡುವಿಕೆ ನಿಧಾನವಾಗಿ ಕಮ್ಮಿ ಆಗುತ್ತಿರುವ ಬೆನ್ನಲ್ಲೇ ಈ ಮಾರಕ ವೈರಸ್​ಗೆ ಲಸಿಕೆ ಕಂಡು ಹಿಡಿಯಲಾಗಿದೆ. ಈ ಮಧ್ಯೆ, ಪಂಚಗವ್ಯ ಬಳಕೆಯಿಂದ ತೀಕ್ಷ್ಣವಲ್ಲದ ಕೊರೊನಾ ಕಡಿಮೆ ಆಗುತ್ತದೆ ಎಂದು ರಾಷ್ಟ್ರೀಯ ಕಾಮಧೇನು ಆಯೋಗ (ಆರ್​ಕೆಎ) ಹೇಳಿದೆ.

ದೇಸಿ ಹಸುಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆನ್​ಲೈನ್​​ ಪರೀಕ್ಷೆ ನಡೆಸಲು ಮುಂದಾಗಿದೆ. ಇಂದು ಈ ಬಗ್ಗೆ ಘೋಷಣೆ ಮಾಡಿದೆ. ಹಸುವಿನ ಹಾಲು ಮತ್ತು ಅದರ ಉತ್ಪನ್ನಗಳ ಜೊತೆಗೆ ಹಸುವಿನ ಮೂತ್ರ ಮತ್ತು ಸಗಣಿ ತೀಕ್ಷ್ಣವಲ್ಲದ ಕೋವಿಡ್ -19 ಚಿಕಿತ್ಸೆಗೆ ಸಹಕಾರಿಯಾಗಲಿದೆ.  ಇದು ಶೇಕಡಾ 96 ಪರಿಣಾಮಕಾರಿ ಆಗಿದೆ  ಎಂದು ರಾಷ್ಟ್ರೀಯ ಕಾಮಧೇನು ಆಯೋಗ (ಆರ್​ಕೆಎ) ಮುಖ್ಯಸ್ಥ ವಲ್ಲಭಭಾಯ್ ಕಥಿರಿಯಾ ಹೇಳಿದ್ದಾರೆ.

ಹಾಲು, ಹಸುವಿನ ಗಂಜಲ, ಸಗಣಿ, ಮೊಸರು ಮತ್ತು ತುಪ್ಪ ಬಳಸಿ ಸಿದ್ಧಪಡಿಸುವಲ್ಲಿ ಪಂಚಗವ್ಯ ಕೊರೊನಾ ಮೇಲೆ ಶೇ. 96 ಪರಿಣಾಮಕಾರಿಯಾಗಿದೆ. 800 ವ್ಯಕ್ತಿಗಳ ಮೇಲೆ ವೈದ್ಯಕೀಯ ಪ್ರಯೋಗ ನಡೆಸಲಾಗಿತ್ತು ಎಂದು ವಲ್ಲಭಭಾಯ್ ತಿಳಿಸಿದ್ದಾರೆ.

ಜೂನ್​ 2020 ಅಕ್ಟೋಬರ್​ 2020ರವರೆಗೆ ಈ ಬಗ್ಗೆ ಅಧ್ಯಯನ ನಡೆಸಲಾಗಿದೆ. ಜರ್ನಲ್​ನಲ್ಲಿ ಶೀಘ್ರವೇ ಈ ಬಗ್ಗೆ ಪಬ್ಲಿಶ್​ ಮಾಡಲಾಗುವುದು. ಹಸು ವಿಜ್ಞಾನ ಅರಿವು ಪರೀಕ್ಷೆ ಫೆಬ್ರವರಿ 25ರಂದು ನಡೆಯಲಿದೆ. ಇಂಗ್ಲಿಷ್​ ಹಾಗೂ 12 ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ವಲ್ಲಭಭಾಯ್ ಮಾಹಿತಿ ನೀಡಿದ್ದಾರೆ.

ಪಶು ಸಂಗೋಪನಾ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಕಾಮಧೇನು ಆಯೋಗ ಬರುತ್ತದೆ. ಇದು ಪಶುಗಳ ರಕ್ಷಣೆ ಜವಾಬ್ದಾರಿಯನ್ನು ಹೊಂದಿದೆ.

ಹಾಸನ ಜಿಲ್ಲೆಯಲ್ಲಿ 10 ಶಿಕ್ಷಕರಿಗೆ ಕೊರೊನಾ.. 10 ಶಾಲೆ ಲಾಕ್​ಡೌನ್​: ಪೋಷಕರಲ್ಲಿ ಹೆಚ್ಚಿದ ಆತಂಕ