ನವದೆಹಲಿ: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ನಿನ್ನೆ ಬಿಜೆಪಿ ಯುವ ಮೋರ್ಚಾದ ಸದಸ್ಯ ಪ್ರವೀಣ್ ಹತ್ಯೆಯಾಗಿದೆ: ರಾಜ್ಯದಲ್ಲಿ ಬೇಸರ ದುಖಃ, ಅಸಹಾಯಕತೆ, ಆಕ್ರೋಶದ ಭಾವನೆ ಮೂಡಿಸಿದೆ. ಪ್ರವೀಣ ಒಂಭತ್ತು ತಿಂಗಳ ಮಗುವಿನ ತಂದೆಯಾಗಿದ್ದರು. ಯಾವುದೇ ತಪ್ಪಿಲ್ಲದಿದ್ದರೂ ಅವರನ್ನು ಹತ್ಯೆ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತ ಅನ್ನೊ ಕಾರಣಕ್ಕೆ ಹತ್ಯೆ ಮಾಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ದೆಹಲಿಯಲ್ಲಿ ಹೇಳಿದ್ದಾರೆ.
ಈ ಆಘಾತ ಸಹಿತಸಲು ಕುಟುಂಬಕ್ಕೆ ಶಕ್ತಿ ಕೊಡಲಿ. ನಮ್ಮ ಪ್ರತಿಯೊಬ್ಬ ಕಾರ್ಯಕರ್ತ ಅವರ ಜೊತೆಗಿದ್ದಾರೆ. ಇಂದು ವರ್ಚುವಲ್ ಸಭೆ ನಡೆಸಿದ್ದೆವು. ಮಹತ್ವದ ತಿರ್ಮಾನ ತೆಗೆದುಕೊಂಡಿದ್ದೇವೆ. ಯುವ ಮೋರ್ಚಾ ಪ್ರವೀಣ್ ಕುಟುಂಬಕ್ಕೆ ಸಹಾಯ ಮಾಡಲು ತಿರ್ಮಾನಿಸಿದ್ದೇವೆ ಎಂದರು.
ಪ್ರತಿ ಜಿಲ್ಲೆಯಿಂದ ಯುವ ಮೋರ್ಚಾ ಕಾರ್ಯಕರ್ತರು ಪ್ರವೀಣ್ ಕುಟುಂಬಕ್ಕೆ ಸಹಾಯ ಮಾಡಲಿದ್ದೇವೆ. ಮಂಗಳೂರು ತೆರಳಿ ಆರ್ಥಿಕ ಸಹಾಯ ಮಾಡಲಿದ್ದೇವೆ. ಹಿರಿಯ ನಾಯಕರ ಜೊತೆಗೆ ಮಾತನಾಡಿದ್ದೇವೆ. ಈ ಸರಣಿ ಹತ್ಯೆ ಹಿಂದಿರುವ ಗುಂಪು ಪತ್ತೆ ಹಚ್ಚಲು ಸರ್ಕಾರ ಮೇಲೆ ಒತ್ತಡ ಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ರಾ ಜಕೀಯ ಪ್ರಯೋಗ ಮಾಡುತ್ತಿದೆ. ವ್ಯಕ್ತಿಯ ಹತ್ಯೆ ಎನ್ನುವುದು ರಾಜಕೀಯ ಪ್ರಯೋಗ ನಾ? ಬಿಜೆಪಿ ಈ ರೀತಿಯ ಪ್ರಯೋಗ ಮಾಡಲ್ಲ. ಎಫ್‌ಐಆರ್ ರದ್ದು ಮಾಡಿ ಪ್ರಯೋಗ ಮಾಡಿದ್ದು ಯಾರು? ಕಾರ್ಯಕರ್ತರ ಆಕ್ರೋಶ ಪಕ್ಷದ ಮೇಲೆ ಅಲ್ಲ. ಹಿಂದೂ ಸಮಾಜ ಹೋಗುತ್ತಿರುವ ದಿಕ್ಕು ನೋಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ, ಯಾರು ರಾಜೀನಾಮೆ ನೀಡಬಾರದು ಎಂದು ಮನವಿ ಮಾಡಿದ್ದಾರೆ.
Published On - 8:19 pm, Wed, 27 July 22