ಪುತ್ರನ ಸಾವಿನಿಂದ ಮನನೊಂದಿದ್ದ ದಂಪತಿ ಆತ್ಮಹತ್ಯೆ; ತಮಿಳುನಾಡಿನಲ್ಲೊಂದು ಮನಕಲಕುವ ಘಟನೆ

ಸೋಮವಾರ ಮುಂಜಾನೆ ದಂಪತಿ ಎಷ್ಟು ಹೊತ್ತಾದರೂ ಮನೆಯಿಂದ ಹೊರಗೆ ಬರಲಿಲ್ಲ. ಯಾಕೋ ಅನುಮಾನ ಬಂದು ಅಕ್ಕಪಕ್ಕದ ಮನೆಯವರೆಲ್ಲ ಬಾಗಿಲು ಬಡಿಯಲು ಶುರು ಮಾಡಿದರು. ಆದರೆ ಒಳಗಿನಿಂದ ಯಾವುದೇ ಮಾತೂ ಕೇಳುತ್ತಿರಲಿಲ್ಲ.

ಪುತ್ರನ ಸಾವಿನಿಂದ ಮನನೊಂದಿದ್ದ ದಂಪತಿ ಆತ್ಮಹತ್ಯೆ; ತಮಿಳುನಾಡಿನಲ್ಲೊಂದು ಮನಕಲಕುವ ಘಟನೆ
ಸಾಂಕೇತಿಕ ಚಿತ್ರ
Edited By:

Updated on: Feb 22, 2022 | 6:50 PM

ಪುತ್ರನ ಸಾವಿನಿಂದ ತೀವ್ರವಾಗಿ ಮನನೊಂದಿದ್ದ ಪಾಲಕರು ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. ಪುತ್ರ ಶೋಕ ನಿರಂತರವಾದದ್ದು ಎಂಬ ಮಾತಿದೆ. ಹಾಗೇ, 2021ರ ಡಿಸೆಂಬರ್​​ನಲ್ಲಿ ತಮ್ಮ 14ವರ್ಷದ  ಪುತ್ರ ಶ್ಯಾಮ್​​ನನ್ನು ಕಳೆದುಕೊಂಡಿದ್ದ ವಿ.ಸತ್ಯರಾಜ್​ ಮತ್ತು ಎಸ್​.ಶರಣ್ಯಾ ಫೆ.21ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರಿಗೂ 36ವರ್ಷ. ಸತ್ಯರಾಜ್ ಕಂಪ್ಯೂಟರ್​ ಆಪರೇಟರ್​ ಆಗಿ ಕೆಲಸ ಮಾಡುತ್ತಿದ್ದರು.

ಪುತ್ರ ಡೆಂಗ್ಯೂದಿಂದಾಗಿ ಮೃತಪಟ್ಟಿದ್ದ. ಸೋಮವಾರ ಮುಂಜಾನೆ ದಂಪತಿ ಎಷ್ಟು ಹೊತ್ತಾದರೂ ಮನೆಯಿಂದ ಹೊರಗೆ ಬರಲಿಲ್ಲ. ಯಾಕೋ ಅನುಮಾನ ಬಂದು ಅಕ್ಕಪಕ್ಕದ ಮನೆಯವರೆಲ್ಲ ಬಾಗಿಲು ಬಡಿಯಲು ಶುರು ಮಾಡಿದರು. ಆದರೆ ಒಳಗಿನಿಂದ ಯಾವುದೇ ಮಾತೂ ಕೇಳುತ್ತಿರಲಿಲ್ಲ.  ಅನುಮಾನ ಬಲವಾಗಿ ಬಾಗಿಲಿ ಒಡೆದು ಒಳಹೋದಾಗ ಸತ್ಯರಾಜು ಹೆಣ  ಸೀಲಿಂಗ್​ ಫ್ಯಾನ್​​ಗೆ ನೇತಾಡುತ್ತಿತ್ತು. ಹಾಗೇ, ಶರಣ್ಯಾ ಶವ ನೆಲದ ಮೇಲೆ ಬಿದ್ದಿತ್ತು ಎಂದು ಹೇಳಲಾಗಿದೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಸುಲುರ್​ ಠಾಣೆ ಪೊಲೀಸರು ಶವಗಳನ್ನು ಪೋಸ್ಟ್​ಮಾರ್ಟಮ್​​ಗೆ ಕೊಯಂಬತ್ತೂರ್​ ವೈದ್ಯಕೀಯ ಕಾಲೇಜಿಗೆ ಕಳಿಸಿದ್ದಾರೆ.  ಈ ದಂಪತಿ ಮೂಲತಃ ಮೈಸೂರಿನವರು. 15ವರ್ಷಗಳ ಹಿಂದೆ ಸುಲುರ್​​ಗೆ ಬಂದು ನೆಲೆಸಿದ್ದರು ಎಂಬುದು ಪೊಲೀಸ್ ತನಿಖೆಯ ವೇಳೆ ಗೊತ್ತಾಗಿದೆ.

ಇದನ್ನೂ ಓದಿ: 10 ರಾಜ್ಯಗಳು 27 ಪತ್ನಿಯರು; ಒಡಿಶಾ ವ್ಯಕ್ತಿಯ ವಂಚನೆ ಜಾಲ ಬಹುದೊಡ್ಡದು, ಮೋಸಹೋದವರೆಲ್ಲ ವಕೀಲರು, ವೈದ್ಯರು, ಶಿಕ್ಷಕಿಯರು !

Published On - 8:55 am, Tue, 22 February 22