ಸಚಿವ ಕೆ.ಎಸ್​. ಈಶ್ವರಪ್ಪನವರಿಗೆ ಕರೆ ಮಾಡಿ ಛೀಮಾರಿ ಹಾಕಿದ್ದೇನೆ; ಕೇಸರಿ ಧ್ವಜ ಹೇಳಿಕೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರತಿಕ್ರಿಯೆ

ಕರ್ನಾಟಕದಲ್ಲಿ ಹಿಜಾಬ್​ ಮತ್ತು ಕೇಸರಿ ಶಾಲು ವಿವಾದ ಶುರುವಾಗಿ ಹತ್ತಿರ ತಿಂಗಳಾಗುತ್ತ ಬಂತು. ಈ ಮಧ್ಯೆ ಶಿವಮೊಗ್ಗದ ಕಾಲೇಜೊಂದರ ಯುವಕರು ರಾಷ್ಟ್ರಧ್ವಜ ಹಾರಿಸುವ ಧ್ವಜಸ್ತಂಭದಲ್ಲಿ ಭಗವಾ ಧ್ವಜ ಹಾರಿಸಿದ್ದರು.  ಇದನ್ನು ಕಾಂಗ್ರೆಸ್​ ತೀವ್ರವಾಗಿ ಖಂಡಿಸುತ್ತಿದೆ.

ಸಚಿವ ಕೆ.ಎಸ್​. ಈಶ್ವರಪ್ಪನವರಿಗೆ ಕರೆ ಮಾಡಿ ಛೀಮಾರಿ ಹಾಕಿದ್ದೇನೆ; ಕೇಸರಿ ಧ್ವಜ ಹೇಳಿಕೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರತಿಕ್ರಿಯೆ
ಜೆ.ಪಿ. ನಡ್ಡಾ (ಸಂಗ್ರಹ ಚಿತ್ರ)
Follow us
TV9 Web
| Updated By: Lakshmi Hegde

Updated on:Feb 22, 2022 | 10:37 AM

ಸದ್ಯ ಕರ್ನಾಟಕದಲ್ಲಿ ಎರಡು ವಿಚಾರ ಭರ್ಜರಿ ಸುದ್ದಿಯಲ್ಲಿದೆ. ಒಂದು ಹಿಜಾಬ್​ (Hijab) ಮತ್ತೊಂದು ಈಶ್ವರಪ್ಪನವರ ಕೇಸರಿ ಧ್ವಜ ಹೇಳಿಕೆ. ಹಿಜಾಬ್​ ವಿವಾದದ ಮಧ್ಯೆಯೇ ಶುರುವಾದ ಈ ಕೇಸರಿ ಧ್ವಜ ವಿವಾದ ದೆಹಲಿಯಲ್ಲಿರುವ ಬಿಜೆಪಿ ವರಿಷ್ಠರ ಗಮನಕ್ಕೂ ಬಂದಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಕೆಂಪುಕೋಟೆ ಸೇರಿ ಎಲ್ಲಿ ಬೇಕಾದರೂ ಕೇಸರಿ ಧ್ವಜ (ಭಗವಾ ಧ್ವಜ)ಹಾರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಕೆ.ಎಸ್​.ಈಶ್ವರಪ್ಪನವರಿಗೆ ಕಟುವಾಗಿ ಛೀಮಾರಿ ಹಾಕಿದ್ದೇವೆ ಎಂದು ನಡ್ಡಾ ಹೇಳಿದ್ದಾರೆ.

ಇಂಡಿಯಾ ಟುಡೆಗೆ ಸಂದರ್ಶನ ನೀಡಿದ ಜೆ.ಪಿ.ನಡ್ಡಾ, ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ಕರ್ನಾಟಕ ಸಚಿವ ಈಶ್ವರಪ್ಪನವರಿಗೆ ನಾನು ಕರೆ ಮಾಡಿದ್ದೆ. ಸರಿಯಾಗಿ ಛೀಮಾರಿ ಹಾಕಿದ್ದೇನೆ  ಎಂದು ಹೇಳಿದ್ದಾರೆ. ಇದೇ ವೇಳೆ ಹಿಜಾಬ್​ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಹಿಜಾಬ್​ ಗಲಾಟೆಯನ್ನು ಪ್ರತಿಪಕ್ಷಗಳೇ ಹೆಚ್ಚಿಸುತ್ತಿವೆ. ನಾವು ಅಭಿವೃದ್ಧಿ ವಿಚಾರಗಳನ್ನಿಟ್ಟುಕೊಂಡು ಚುನಾವಣೆಯಲ್ಲಿ ಹೋರಾಟ ಮಾಡುತ್ತಿದ್ದರೆ, ಪ್ರತಿಪಕ್ಷಗಳು ಹಿಜಾಬ್​ನಂಥ ವಿಷಯಗಳನ್ನಿಟ್ಟುಕೊಂಡು ವಿವಾದ ದೊಡ್ಡದು ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಹಿಜಾಬ್​ ಮತ್ತು ಕೇಸರಿ ಶಾಲು ವಿವಾದ ಶುರುವಾಗಿ ಹತ್ತಿರ ತಿಂಗಳಾಗುತ್ತ ಬಂತು. ಈ ಮಧ್ಯೆ ಶಿವಮೊಗ್ಗದ ಕಾಲೇಜೊಂದರ ಯುವಕರು ರಾಷ್ಟ್ರಧ್ವಜ ಹಾರಿಸುವ ಧ್ವಜಸ್ತಂಭದಲ್ಲಿ ಭಗವಾ ಧ್ವಜ ಹಾರಿಸಿದ್ದರು.  ಇದನ್ನು ಕಾಂಗ್ರೆಸ್​ ತೀವ್ರವಾಗಿ ಖಂಡಿಸುತ್ತಿದೆ. ಅಲ್ಲಿ ರಾಷ್ಟ್ರಧ್ವಜವನ್ನು ಕೆಳಗೆ ಇಳಿಸಿ, ಭಗವಾ ಧ್ವಜ ಹಾರಿಸಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಕೂಡ ಸ್ಪಷ್ಟಪಡಿಸಿದ್ದರೂ ಇದೇ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿತ್ತು. ನಂತರ ಹೇಳಿಕೆ ನೀಡಿದ್ದ ಕೆ.ಎಸ್.ಈಶ್ವರಪ್ಪ, ನಾವು ಭಗವಾಧ್ವಜವನ್ನು ಜಗತ್ತಿನ ಎಲ್ಲಿ ಬೇಕಾದರೂ ಹಾರಿಸುತ್ತೇವೆ. ಮುಂದೊಂದು ದಿನ ಕೆಂಪುಕೋಟೆಯ ಮೇಲೆ ಕೂಡ ಹಾರಿಸುತ್ತೇವೆ. ಇನ್ನೂ 200-300 ವರ್ಷಗಳ ಬಳಿಕ ಕೇಸರಿ ಧ್ವಜವೇ ರಾಷ್ಟ್ರಧ್ವಜವಾಗಿ ಬದಲಾವಣೆಯಾಗಬಹುದು ಎಂಬಿತ್ಯಾದಿ ಮಾತುಗಳನ್ನು ಆಡಿದ್ದರು.

ಆದರೆ ಕೆ.ಎಸ್​.ಈಶ್ವರಪ್ಪನವರ ಮಾತು ಹಿಜಾಬ್​​ಗೂ ಮಿಗಿಲಾದ ವಿವಾದವನ್ನು ಸೃಷ್ಟಿಸಿಬಿಟ್ಟಿತು. ಕಾಂಗ್ರೆಸ್​​ನವರಂತೂ ತೀವ್ರ ಹೋರಾಟವನ್ನೇ ಶುರುವಿಟ್ಟುಕೊಂಡಿದ್ದಾರೆ. ಈ ಮಧ್ಯೆ ಕೆ.ಎಸ್​.ಈಶ್ವರಪ್ಪನವರಿಗೆ ದೆಹಲಿ ಹೈಕಮಾಂಡ್​​ನಿಂದಲೂ ಎಚ್ಚರಿಕೆ ಬಂದಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಮಧ್ಯೆ ಈಶ್ವರಪ್ಪನವರ ಮಾತುಗಳನ್ನು ಕೆಲವು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸದ್ಯಕ್ಕಂತೂ ಕೆ.ಎಸ್.ಈಶ್ವರಪ್ಪನವರು ವರಿಷ್ಠರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಇದನ್ನೂ ಓದಿ: ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುತ್ತೇವೆ ಅಂತ ಈಶ್ವರಪ್ಪ ಹೇಳಿಲ್ಲ ಎಂದರು ಬಿಜೆಪಿ ನಾಯಕ ಸಿಟಿ ರವಿ

Published On - 9:46 am, Tue, 22 February 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ