ಮಗಳು ತಮ್ಮಿಷ್ಟಕ್ಕೆ ವಿರುದ್ಧವಾಗಿ ಮದುವೆಯಾದಳೆಂದು ಬದುಕಿರುವಾಗಲೇ ಅಂತ್ಯ ಸಂಸ್ಕಾರ ಮಾಡಿದ ಪೋಷಕರು

|

Updated on: Sep 08, 2023 | 11:55 AM

ಮಗಳು ಓಡಿ ಹೋಗಿ ಮದುವೆಯಾದಳೆಂದು ಪೋಷಕರು ಮಗಳು ಬದುಕಿದ್ದಾಗಲೇ ಅಂತ್ಯಸಂಸ್ಕಾರ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ, ತಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದ ಮದುವೆಯನ್ನು ವಿರೋಧಿಸಿದ ಕುಟುಂಬವು 20 ವರ್ಷದ ಯುವತಿಯನ್ನು ಸಾರ್ವಜನಿಕವಾಗಿ ಮೃತಪಟ್ಟಿದ್ದಾಳೆಂದು ಘೋಷಿಸಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

ಮಗಳು ತಮ್ಮಿಷ್ಟಕ್ಕೆ ವಿರುದ್ಧವಾಗಿ ಮದುವೆಯಾದಳೆಂದು ಬದುಕಿರುವಾಗಲೇ ಅಂತ್ಯ ಸಂಸ್ಕಾರ ಮಾಡಿದ ಪೋಷಕರು
ಮದುವೆ
Image Credit source: ABP Live
Follow us on

ಮಗಳು ಓಡಿ ಹೋಗಿ ಮದುವೆಯಾದಳೆಂದು ಪೋಷಕರು ಮಗಳು ಬದುಕಿದ್ದಾಗಲೇ ಅಂತ್ಯಸಂಸ್ಕಾರ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ, ತಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದ ಮದುವೆಯನ್ನು ವಿರೋಧಿಸಿದ ಕುಟುಂಬವು 20 ವರ್ಷದ ಯುವತಿಯನ್ನು ಸಾರ್ವಜನಿಕವಾಗಿ ಮೃತಪಟ್ಟಿದ್ದಾಳೆಂದು ಘೋಷಿಸಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

ಔಲ್ ಪೊಲೀಸ್ ಠಾಣೆ ವ್ಯಾಪ್ತಿಯ ದೇಮಲ್ ಗ್ರಾಮದ ಮುನಾ ಮಲಿಕ್ ಅವರ ಪುತ್ರಿ ದೀಪಾಂಜಲಿ ಮಲಿಕ್ (20) ತನ್ನ ಪ್ರಿಯಕರ ರಾಜೇಂದ್ರ ಮಲಿಕ್ (23) ಅವರನ್ನು ಆಗಸ್ಟ್ 28 ರಂದು ದೇವಸ್ಥಾನದಲ್ಲಿ ವಿವಾಹವಾದರು.

ಇದಾದ ನಂತರ, ಮಗಳ ನಿರ್ಧಾರದಿಂದ ಕೋಪಗೊಂಡ ಪೋಷಕರು ಆಕೆಯೊಂದಿಗಿನ ಸಂಬಂಧವನ್ನು ಮುರಿದು ಆಕೆ ಸತ್ತಿದ್ದಾಳೆ ಎಂದು ಘೋಷಿಸಿದರು.

ದೀಪಾಂಜಲಿಯ ತಂದೆ ಮುನಾ ಮಲಿಕ್ ಮಾತನಾಡಿ, ನಮ್ಮ ಮಗಳು ರಾಜೇಂದ್ರ ಜತೆ ಓಡಿ ಹೋಗಿದ್ದಾಳೆ. ನಾವು ಅವರ ವಿರುದ್ಧ ಔಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ.

ಪೊಲೀಸರು ವಿಷಯ ತಿಳಿದು ನಮ್ಮ ಮಗಳನ್ನು ನಮಗೆ ಒಪ್ಪಿಸಿದರು. ಆದರೆ ದೀಪಾಂಜಲಿ ಗ್ರಾಮದ ದೇವಸ್ಥಾನದಲ್ಲಿ ರಾಜೇಂದ್ರನನ್ನು ಮದುವೆಯಾದಳು.

ಮತ್ತಷ್ಟು ಓದಿ: ಕೈಕಾಲು ಕಟ್ಟಿ ಕಗ್ಗೊಲೆ; ಪೋಸ್ಟ್​ಮಾರ್ಟಂ ವೇಳೆ ಬಯಲಾಯ್ತು ಅಚ್ಚರಿಯ ಸತ್ಯ

ಇದರಿಂದ ನಮಗೆ ತೀವ್ರ ನೋವಾಗಿದೆ. ನಾವು ಅವಳ ಅಂತಿಮ ಸಂಸ್ಕಾರವನ್ನು ಮಾಡಿದ್ದೇವೆ ಮತ್ತು ಈಗ ಅವಳು ನಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ ಎಂದರು.

ನಾವು ಪಿಂಡದಾನ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ, ಆಕೆಗೆ ಸೂಕ್ತನಾದ ವರನನ್ನು ಹುಡುಕಿ ಮದುವೆ ಮಾಡಬೇಕೆಂಬ ಕನಸು ಕಂಡಿದ್ದೆವು, ನಮಗೆ ಒಪ್ಪಿಗೆ ಇಲ್ಲದೆ ಮದುವೆಯಾಗಿದ್ದಾಳೆ ಎಂದು ಪೋಷಕರು ಹೇಳಿದ್ದಾರೆ.

ನನಗೆ ಮದುವೆಯ ವಯಸ್ಸಾಗಿತ್ತು, ನಾನು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದಿದ್ದಾರೆ. ಇನ್ನು ಸೊಸೆಯ ಆಗಮನದಿಂದ ಯುವಕನ ಮನೆಯಲ್ಲಿ ಸಂತಸ ತುಂಬಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ