Pariksha Pe Charcha 2024: ನಿಮಗಿಂತ ಹೆಚ್ಚು ಪ್ರತಿಭಾವಂತರ ಬಳಿ ಸ್ನೇಹ ಬೆಳೆಸಿ, ಅಸೂಯೆ ಬಿಟ್ಟುಬಿಡಿ: ಮೋದಿ ಸಲಹೆ

|

Updated on: Jan 29, 2024 | 1:42 PM

ನಿಮಗಿಂತ ಹೆಚ್ಚು ಪ್ರತಿಭಾವಂತರ ಬಳಿ ಸ್ನೇಹ ಬೆಳೆಸಿ, ಅವರಿಂದ ಕಲಿಯಲು ಪ್ರಯತ್ನಿಸಿ ಆದರೆ ಅಸೂಯೆ ಬೆಳೆಸಿಕೊಳ್ಳಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮಕ್ಕಳಿಗೆ ಸಲಹೆ ನೀಡಿದ್ದಾರೆ. ಪರೀಕ್ಷಾ ಪೇ ಚರ್ಚಾ(Pariksha Pe Charcha) 7ನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿರುವ ಮೋದಿ, ನೀವು ನಿಮ್ಮ ಮೇಲೆ ನಂಬಿಕೆ ಇಡಬೇಕು, ಎಂದೂ ಸ್ನೇಹಿತರ ಬಗ್ಗೆ ಅಸೂಯೆ ಪಡುತ್ತಿದ್ದರೆ ನಿಮ್ಮ ಜೀವನದಲ್ಲಿ ಸಫಲತೆ ಸಿಗಲು ಸಾಧ್ಯವಿಲ್ಲ ಎಂದರು.

Pariksha Pe Charcha 2024: ನಿಮಗಿಂತ ಹೆಚ್ಚು ಪ್ರತಿಭಾವಂತರ ಬಳಿ ಸ್ನೇಹ ಬೆಳೆಸಿ, ಅಸೂಯೆ ಬಿಟ್ಟುಬಿಡಿ: ಮೋದಿ ಸಲಹೆ
ನರೇಂದ್ರ ಮೋದಿ
Follow us on

ನಿಮಗಿಂತ ಹೆಚ್ಚು ಪ್ರತಿಭಾವಂತರ ಬಳಿ ಸ್ನೇಹ ಬೆಳೆಸಿ, ಅವರಿಂದ ಕಲಿಯಲು ಪ್ರಯತ್ನಿಸಿ ಆದರೆ ಅಸೂಯೆ ಬೆಳೆಸಿಕೊಳ್ಳಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮಕ್ಕಳಿಗೆ ಸಲಹೆ ನೀಡಿದ್ದಾರೆ. ಪರೀಕ್ಷಾ ಪೇ ಚರ್ಚಾ(Pariksha Pe Charcha) 7ನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿರುವ ಮೋದಿ, ನೀವು ನಿಮ್ಮ ಮೇಲೆ ನಂಬಿಕೆ ಇಡಬೇಕು, ಎಂದೂ ಸ್ನೇಹಿತರ ಬಗ್ಗೆ ಅಸೂಯೆ ಪಡುತ್ತಿದ್ದರೆ ನಿಮ್ಮ ಜೀವನದಲ್ಲಿ ಸಫಲತೆ ಸಿಗಲು ಸಾಧ್ಯವಿಲ್ಲ ಎಂದರು.

ಸ್ಪರ್ಧೆ ಮತ್ತು ಸವಾಲುಗಳು ಜೀವನದಲ್ಲಿ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತವೆ, ಆದರೆ ಸ್ಪರ್ಧೆಯು ಆರೋಗ್ಯಕರವಾಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೆಲವು ಪೋಷಕರು ತಮ್ಮ ಮಗುವಿನ ‘ರಿಪೋರ್ಟ್ ಕಾರ್ಡ್’ ಅನ್ನು ತಮ್ಮ ‘ವಿಸಿಟಿಂಗ್ ಕಾರ್ಡ್’ ಎಂದು ಪರಿಗಣಿಸುತ್ತಾರೆ, ಇದು ಸರಿಯಲ್ಲ ಎಂದು ಪ್ರಧಾನಿ ಹೇಳಿದರು.

ಯಾವುದೇ ಮಗುವನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಬೇಡಿ, ಅದು ಅವನ/ಆಕೆಯ ಭವಿಷ್ಯಕ್ಕೆ ಹಾನಿಕಾರಕವಾಗಿದೆ ಎಂದು ಪೋಷಕರಿಗೆ ಹೇಳಿದರು.

ಶಿಕ್ಷಕರು ಮಕ್ಕಳೊಂದಿಗೆ ಬೆರೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ತರಗತಿಯಲ್ಲಿ ನೀವು ಆರಾಮದಾಯಕ ವಾತಾವರಣವನ್ನು ಸೃಷ್ಟಿಸಬೇಕು ಇದರಿಂದ ಮಕ್ಕಳು ನಿಮ್ಮ ಬಗ್ಗೆ ಆಸಕ್ತಿ ವಹಿಸುತ್ತಾರೆ ಎಂದು ಕಿವಿಮಾತು ಹೇಳಿದರು.

 

ಮೋದಿ ಸಲಹೆಗಳು
1. ಇತರರ ಬಗ್ಗೆ ಅಸೂಯೆ ಪಡಬೇಡಿ: ನಿಮಗೆ ನೀವು ಸ್ಪರ್ಧಿಯಾಗಿ, ಇತರರ ಬಗ್ಗೆ ಅಸೂಯೆ ಇರಬಾರದು. ಸ್ನೇಹಿತರು ಪರಸ್ಪರ ಜ್ಞಾನವನ್ನು ಹಂಚಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಸ್ಪರ್ಧೆಯಲ್ಲಿ ತೊಡಗಬಾರದು. ಪಾಲಕರು ಕೂಡ ಮಕ್ಕಳಲ್ಲಿ ಸ್ಪರ್ಧೆಯ ಭಾವನೆ ಮೂಡಿಸಬಾರದು.

2. ಬರವಣಿಗೆಯನ್ನು ಅಭ್ಯಾಸ ಮಾಡಿ: ಪರೀಕ್ಷೆಯಲ್ಲಿ ದೊಡ್ಡ ಸವಾಲು ಬರಹ ಎಆದ್ದರಿಂದ, ಪರೀಕ್ಷೆಯ ಮೊದಲು ನೀವು ಓದಿದ್ದನ್ನು ಬರೆಯುವುದು ಮುಖ್ಯ. ಇದರ ನಂತರ, ಯಾವುದೇ ತಪ್ಪು ಸಂಭವಿಸಿದಲ್ಲಿ, ಅದನ್ನು ನೀವೇ ಸರಿಪಡಿಸಿ. ನೀವು ಹೆಚ್ಚು ಬರೆಯುತ್ತೀರಿ, ತೀಕ್ಷ್ಣತೆ ಹೆಚ್ಚಾಗುತ್ತದೆ. ಪರೀಕ್ಷಾ ಹಾಲ್‌ನಲ್ಲಿ ಅಕ್ಕಪಕ್ಕದವರು ಎಷ್ಟು ವೇಗವಾಗಿ ಬರೆಯುತ್ತಿದ್ದಾರೆ ಎಂದು ನೋಡಬೇಡಿ. ನಿಮ್ಮನ್ನು ನಂಬಿ ಎಂದರು.

3. ಪರೀಕ್ಷೆಗೂ ಮುನ್ನ ನಕ್ಕು ತಮಾಷೆ ಮಾಡಿ: ಪರೀಕ್ಷೆಗೂ ಮುನ್ನ 5-10 ನಿಮಿಷಗಳ ಕಾಲ ತಮಾಷೆ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದರು. ಇದರಿಂದ ಒತ್ತಡ ಉಂಟಾಗುವುದಿಲ್ಲ. ಪರೀಕ್ಷೆಗೂ ಮುನ್ನ ಆರಾಮವಾಗಿ ಕುಳಿತು 5-10 ನಿಮಿಷ ನಗುತ್ತಾ ತಮಾಷೆ ಮಾಡಿ ಎಂದು ಪ್ರಧಾನಿ ಹೇಳಿದರು. ಇದರೊಂದಿಗೆ ನೀವು ನಿಮ್ಮಲ್ಲಿ ಕಳೆದುಹೋಗುತ್ತೀರಿ. ಇದು ನಿಮ್ಮನ್ನು ಪರೀಕ್ಷೆಯ ಒತ್ತಡದಿಂದ ಹೊರತರುತ್ತದೆ. ಪ್ರಶ್ನೆ ಪತ್ರಿಕೆ ಬಂದಾಗ, ನೀವು ಅದನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ಮೊದಲು ಸಂಪೂರ್ಣ ಪ್ರಶ್ನೆ ಪತ್ರಿಕೆಯನ್ನು ಓದಿ. ಇದರ ನಂತರ ನೀವು ಅದನ್ನು ಹೇಗೆ ಮಾಡಬೇಕೆಂದು ನಿರ್ಧರಿಸಿ.

4. ಮಕ್ಕಳಿಗೆ ಹೊಸ ಪೆನ್ನು ಕೊಡಬೇಡಿ: ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಪರೀಕ್ಷೆಯ ದಿನದಂದು ಹೊಸ ಪೆನ್ನುಗಳನ್ನು ತರುತ್ತಾರೆ ಎಂದು ಪ್ರಧಾನಿ ಹೇಳಿದರು. ಆದರೆ ಇದನ್ನು ಮಾಡಬೇಡಿ, ಮಕ್ಕಳು ಪ್ರತಿದಿನ ಬಳಸುವ ಪೆನ್ನನ್ನೇ ಕೊಡಿ. ಬಟ್ಟೆಗಾಗಿಯೂ ಮಗುವಿಗೆ ತೊಂದರೆ ಕೊಡಬೇಡಿ. ಅವನು ಏನು ಧರಿಸಿದ್ದಾನೋ ಅದೇ ಧರಿಸಲಿ. ಇದರಿಂದ ಅವರು ಪರೀಕ್ಷೆಯಲ್ಲಿ ಆರಾಮದಾಯಕವಾಗುತ್ತಾರೆ.

5. ಮನೆಯಲ್ಲಿ ಒತ್ತಡ ಸೃಷ್ಟಿಸಬೇಡಿ: ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳ ಮೇಲೆ ಮನೆಯವರಿಂದ ಆಗುವ  ಒತ್ತಡದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಪರೀಕ್ಷೆಗೆ ಸಂಬಂಧಿಸಿದಂತೆ ಪೋಷಕರು, ಒಡಹುಟ್ಟಿದವರು ಮತ್ತು ಶಿಕ್ಷಕರಿಂದ ಒತ್ತಡವಿದೆ ಎಂದು ಹೇಳಿದರು. ನಿಮ್ಮ ಪೋಷಕರು ನಿಲ್ಲಿಸಿದರೆ, ನಿಮ್ಮ ಹಿರಿಯ ಸಹೋದರರು ಅಥವಾ ಶಿಕ್ಷಕರು ನಿಮ್ಮನ್ನು ನಿಂದಿಸಲು ಪ್ರಾರಂಭಿಸುತ್ತಾರೆ. ಇದರಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ವಿದ್ಯಾರ್ಥಿಗಳಿಂದ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಇದಕ್ಕೆ ಕುಟುಂಬಗಳು ಮತ್ತು ಶಿಕ್ಷಕರ ನಡುವೆ ಚರ್ಚೆಯ ಅಗತ್ಯವಿದೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 1:07 pm, Mon, 29 January 24