ಎನ್​ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಆಶೀರ್ವಾದ ಸಿಗುವ ವಿಶ್ವಾಸವಿದೆ: ಲೋಕಸಭೆಯಲ್ಲಿ ಮೋದಿ ಭಾಷಣ

ಎನ್​ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಆಶೀರ್ವಾದ ಸಿಗುವ ವಿಶ್ವಾಸವಿದೆ .ಲೋಕಸಭೆಗೆ ಇದೊಂದು ಮಹತ್ವದ ದಿನ ಎಂದು 17ನೇ ಲೋಕಸಭೆಯ ಕಲಾಪಗಳ ಮುಕ್ತಾಯದ ಅಧಿವೇಶನದಲ್ಲಿ ಮಾತನಾಡಿದ ಮೋದಿ ಹೇಳಿದ್ದಾರೆ.ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, ಸಂಕಷ್ಟದ ಸಮಯದಲ್ಲಿ ಸ್ಪೀಕರ್​ ಸದನವನ್ನು ಮುನ್ನಡೆಸಿದ್ದಾರೆ. ಕಳೆದ 5 ವರ್ಷದಲ್ಲಿ ದೇಶದ ಸುಧಾರಣೆ, ಕಾರ್ಯಕ್ಷಮತೆ ಹಾಗೂ ಪರಿವರ್ತನೆಗಾಗಿ ನಾವು ಶ್ರಮಿಸಿದ್ದೇವೆ. ಕೊವಿಡ್​ ಅನ್ನು ನಾವು ಯಶಸ್ವಿಯಾಗಿ ನಿಭಾಯಿಸಿದ್ದೇವೆ ಎಂದು ಪಿಎಂ ಮೋದಿ ಹೇಳಿದ್ದಾರೆ.

ಎನ್​ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಆಶೀರ್ವಾದ ಸಿಗುವ ವಿಶ್ವಾಸವಿದೆ: ಲೋಕಸಭೆಯಲ್ಲಿ ಮೋದಿ ಭಾಷಣ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Feb 10, 2024 | 6:02 PM

ದೆಹಲಿ  ಫೆಬ್ರುವರಿ 10: ‘ಜೈ ಶ್ರೀ ರಾಮ್’ ಘೋಷಣೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ (Narendra Modi) ಲೋಕಸಭೆಗೆ(Lok sabha) ಆಗಮಿಸಿದ್ದು,17 ನೇ ಲೋಕಸಭೆಯ ಕಲಾಪಗಳ ಮುಕ್ತಾಯದ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಈ 5 ವರ್ಷಗಳು ದೇಶಕ್ಕೆ ನಮ್ಮ ಸೇವೆಯಾಗಿದೆ. ಕಳೆದ 5 ವರ್ಷದಲ್ಲಿ ದೇಶದ ಸುಧಾರಣೆ, ಕಾರ್ಯಕ್ಷಮತೆ ಹಾಗೂ ಪರಿವರ್ತನೆಗಾಗಿ ನಾವು ಶ್ರಮಿಸಿದ್ದೇವೆ.17 ನೇ ಲೋಕಸಭೆಯ ಐದು ವರ್ಷಗಳಲ್ಲಿ ದೇಶಕ್ಕಾಗಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಧನ್ಯವಾದ ಅರ್ಪಿಸಿದ  ಮೋದಿ, “ಸಭಾ ನಾಯಕನಾಗಿ ಮತ್ತು ಸಹೋದ್ಯೋಗಿಯಾಗಿ ನಾನು ನಿಮಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಸ್ಪೀಕರ್,  ನಿಮಗೆ ಧನ್ಯವಾದಗಳು. ನೀವು ಯಾವಾಗಲೂ ನಗುಮುಖದಿಂದಿರುತ್ತೀರಿ. ನೀವು ತಾಳ್ಮೆ ಮತ್ತು ಸ್ವಾತಂತ್ರ್ಯದಿಂದ ಪ್ರತಿಯೊಂದು ಪರಿಸ್ಥಿತಿಯನ್ನು ನಿಭಾಯಿಸಿದ್ದೀರಿ ಎಂದಿದ್ದಾರೆ.

ಕಳೆದ ಐದು ವರ್ಷಗಳಲ್ಲಿ, ಮಾನವೀಯತೆಯು ಶತಮಾನದ ದೊಡ್ಡ ಸವಾಲನ್ನು ಎದುರಿಸಿದೆ. ಸದನಕ್ಕೆ ಬರುವುದೂ ಸವಾಲಿನ ಪರಿಸ್ಥಿತಿಯಾಗಿದೆ. ಸ್ಪೀಕರ್ ಸರ್, ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನೀವು ಖಚಿತಪಡಿಸಿದ್ದೀರಿ.ದೇಶದ ಕೆಲಸ ಎಂದಿಗೂ ನಿಲ್ಲುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಬಳ ಕಡಿತಕ್ಕೆ ಧನ್ಯವಾದ

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ  ಬೇರೇನೂ ಯೋಚಿಸದೆ ಸಂಸದರು ತಮ್ಮ ಭತ್ಯೆಯನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. “ಸಂಸದರು ಶೇಕಡಾ 30 ರಷ್ಟು ಸಂಬಳ ಕಡಿತವನ್ನು ಮಾಡಿಕೊಳ್ಳಲು  ನಿರ್ಧರಿಸಿದರು. ಈ ಮೂಲಕ ಅವರು ಜನರಿಗೆ ಸಂದೇಶವನ್ನು ಕಳುಹಿಸುತ್ತಾರೆ”. ಸಂಸತ್ತಿನ ಕ್ಯಾಂಟೀನ್‌ನಲ್ಲಿ ಎಲ್ಲರೂ ಹೊರಗಿನಂತೆಯೇ ಪಾವತಿಸಲು ಸಂಸದರು ನಿರ್ಧರಿಸಿದ್ದಾರೆ. “ನಮ್ಮನ್ನು ಅಪಹಾಸ್ಯ ಮಾಡುವವರ ಬಾಯ್ಮುಚ್ಚಿಸಿದ್ದೀರಿ ಎಂದು ಮೋದಿ ಹೇಳಿದ್ದಾರೆ.

ಮೊದಲ ಅಧಿವೇಶನದಲ್ಲಿ 30 ಮಸೂದೆಗಳು ಅಂಗೀಕಾರ

17ನೇ ಲೋಕಸಭೆಯ ಕೆಲಸವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಅದರ ಮೊದಲ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ 30 ಮಸೂದೆಗಳನ್ನು ಅಂಗೀಕರಿಸಲಾಯಿತು. “ಇದು ಸ್ವತಃ ಒಂದು ದಾಖಲೆಯಾಗಿದೆ” ಎಂದು ಅವರು ಹೇಳಿದರು. 17ನೇ ಲೋಕಸಭೆಯು ಶೇಕಡಾ 97 ರಷ್ಟು ಉತ್ಪಾದಕತೆಯನ್ನು ಹೊಂದಿತ್ತು. ಏಳು ಅಧಿವೇಶನಗಳಲ್ಲಿ ಇದು ಶೇಕಡಾ 100 ಕ್ಕಿಂತ ಹೆಚ್ಚಿತ್ತು ಎಂದು ಪ್ರಧಾನಮಂತ್ರಿ ಹೇಳಿದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಮೋದಿ ಮೇನಿಯಾ: ಚಿಕ್ಕಪೇಟೆಗೆ ಬಂತು ಮೋದಿ ಬಟ್ಟೆ, ಫ್ಯಾನ್ಸ್ ಫಿದಾ

ಭಯೋತ್ಪಾದನೆ ವಿರುದ್ಧ ಕಠಿಣ ಕಾನೂನು

“ನಾವು ಭಯೋತ್ಪಾದನೆಯ ವಿರುದ್ಧ ಕಠಿಣ ಕಾನೂನುಗಳನ್ನು ಮಾಡಿದ್ದೇವೆ. ಇದು ಸಂತ್ರಸ್ತರಿಗೆ ಸಾಂತ್ವನ ನೀಡುತ್ತದೆ ಮತ್ತು ಅವರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಇದು ಭಾರತವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಆರ್ಟಿಕಲ್ 370 ರದ್ದತಿಯನ್ನು ಉಲ್ಲೇಖಿಸಿದ ಅವರು, ಜಮ್ಮು ಮತ್ತು ಕಾಶ್ಮೀರದ ಜನರಿಗೆ ಈಗ ನ್ಯಾಯ ಸಿಗುತ್ತದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:18 pm, Sat, 10 February 24