ಬೆಂಗಳೂರಿನಲ್ಲಿ ಮೋದಿ ಮೇನಿಯಾ: ಚಿಕ್ಕಪೇಟೆಗೆ ಬಂತು ಮೋದಿ ಬಟ್ಟೆ, ಫ್ಯಾನ್ಸ್ ಫಿದಾ
ಬೆಂಗಳೂರಿನಲ್ಲಿ ಮೋದಿ ಮೇನಿಯಾ ಜೋರಾಗಿದ್ದು, ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಟಾಪನೆಯ ನಂತರ, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮೋದಿ ಕ್ರೇಜ್ ಜಾಸ್ತಿಯಾಗಿದೆ. ನಗರದ ಚಿಕ್ಕಪೇಟೆಗೆ ಮೋದಿ ಫೋಟೋ ಇರುವ ಪಾಲಿಸ್ಟರ್ ಫ್ಯಾಬ್ರಿಕ್ ಬಟ್ಟೆಗಳು ಎಂಟ್ರಿಕೊಟ್ಟಿವೆ. ಮೋದಿ ಕೈ ಬೀಸುವ, ಕಮಲದ ಮೇಲಿರುವ ಮೋದಿ ಡಿಸೈನ್ ಬಟ್ಟೆಯನ್ನ ವೇಸ್ ಕೋಟ್ ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಬೆಂಗಳೂರು, ಫೆ.10: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನೆಯಾಗುತ್ತಿದ್ದಂತೆ, ಶ್ರೀ ರಾಮನ ಭಕ್ತಿ ಹೆಚ್ಚಾಗುವ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಜನಪ್ರಿಯತೆ ಕೂಡ ಜಾಸ್ತಿಯಾಗಿದೆ. ಹೀಗಾಗಿ ಮೋದಿ ಪೋಟೋ ಇರುವ ಬಟ್ಟೆಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ (Modi Dress).
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ನಂತರ ಮೋದಿಯವರ ಮೇಲೆ ಜನರಿಗೆ ಭರವಸೆಯ ಜೊತೆಗೆ ವಿಶೇಷ ಪ್ರೀತಿ ಶುರುವಾಗಿದೆ. ಇಷ್ಟು ದಿನ ಮೋದಿಯವರ ಕಟೌಟ್ ಗಳನ್ನ ಹಾಕಿ ಮೋದಿ ಮೇಲಿನ ಪ್ರೀತಿಯನ್ನ ವ್ಯಕ್ತಪಡಿಸುತ್ತಿದ್ದ ಜನರು ಇದೀಗಾ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮೋದಿಯವರ ಫೋಟೋ ಇರುವ ಬಟ್ಟೆ ಹಾಕಲು ಮುಂದಾಗಿದ್ದಾರೆ. ಮೋದಿ ಬಟ್ಟೆಗೆ ಫುಲ್ ಡಿಮ್ಯಾಂಡ್ ಬಂದಿದೆ. ಹೀಗಾಗಿ ನಗರದ ಚಿಕ್ಕಪೇಟೆಗೆ ಮೋದಿ ಫೋಟೋ ಇರುವ ಪಾಲಿಸ್ಟರ್ ಫ್ಯಾಬ್ರಿಕ್ ಬಟ್ಟೆಗಳು ಎಂಟ್ರಿಕೊಟ್ಟಿವೆ.
ರಾಜಧಾನಿ ಬೆಂಗಳೂರಿನಲ್ಲಿ ಮೋದಿ ಮೇನಿಯಾ ಜೋರಾಗಿದ್ದು, ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಟಾಪನೆಯ ನಂತರ, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮೋದಿ ಕ್ರೇಜ್ ಜಾಸ್ತಿಯಾಗಿದೆ. ಹೀಗಾಗಿ ನಗರದ ಚಿಕ್ಕಪೇಟೆಗೆ ಮೋದಿ ಫೋಟೋ ಇರುವ ಪಾಲಿಸ್ಟರ್ ಫ್ಯಾಬ್ರಿಕ್ ಬಟ್ಟೆ ಎಂಟ್ರಿಕೊಟ್ಟಿದ್ದು, ಬಟ್ಟೆಯಲ್ಲಿ 3 ಡಿಸೈನ್ ಗಳು ಜನರನ್ನ ಸೆಳೆಯುತ್ತಿವೆ. ಅದ್ರಲ್ಲಿ ಮೋದಿ ಕೈ ಬೀಸುವ, ಕಮಲದ ಮೇಲಿರುವ ಮೋದಿ ಡಿಸೈನ್ ಬಟ್ಟೆಯನ್ನ ವೇಸ್ ಕೋಟ್ ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಸಂಸತ್ನ ಕ್ಯಾಂಟೀನ್‌ನಲ್ಲಿ ಸಂಸದರೊಂದಿಗೆ ಊಟ ಮಾಡಿದ ಪ್ರಧಾನಿ ಮೋದಿ
ಅಲ್ಲದೇ ಡಿಜಿಟಲ್ ಪ್ರಿಂಟ್ ಇರುವ ಮೋದಿ ಬಟ್ಟೆಗೂ ಡಿಮ್ಯಾಂಡ್ ಇದ್ದು, ಜುಬ್ಬಾ, ವಾಸ್ ಕೋಟ್ಗಳಿಗೆ ಜನರು ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ವ್ಯಾಪಾರಸ್ಥರು ಜನರು ಡಿಮ್ಯಾಂಡ್ ಮಾಡುತ್ತಿರುವ ಮೋದಿ ಫೋಟೋ ಇರುವ ಬಟ್ಟೆಯನ್ನ ಅಹಮದಬಾದ್, ಬಾಂಬೆ ಸೇರಿದಂತೆ ವಿವಿಧ ಭಾಗಗಳಿಂದ ತರಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಎಂಪಿ ಎಲೆಕ್ಷನ್ ಹತ್ರ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಮೋದಿ ಹವಾ ಇನ್ನು ಜೋರಾಗುವ ಸಾಧ್ಯತೆಗಳು ಕಾಣ್ತಾ ಇವೆ ಎಂದು ವ್ಯಾಪಾರಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು, ನಾವು ಮೋದಿ ಫ್ಯಾನ್. ಹೀಗಾಗಿ ಅವರ ಫೋಟೋ ಇರುವ ಬಟ್ಟೆಗಳನ್ನ ತೆಗೆದುಕೊಳ್ಳುವುದಕ್ಕೆ ಚಿತ್ರದುರ್ಗ, ಬೆಳಗಾವಿ ಭಾಗದಿಂದ ಬೆಂಗಳೂರಿಗೆ ಬಂದಿದ್ದೀವಿ. ಅವರ ಫೋಟೋ ಇರುವ ವೇಸ್ ಕೋಟ್ ಹಾಕಿ ಕಾರ್ಯಕ್ರಮಗಳಿಗೆ ಹೋಗ್ತಿವಿ. ನಮಗೆ ತುಂಬ ಖುಷಿಯಾಗುತ್ತೆ ಅಂತ ಮೋದಿ ಅಭಿಮಾನಿಗಳು ಪ್ರೀತಿ ವ್ಯಕ್ತಪಡಿಸಿದ್ರು.
ಒಟ್ನಲ್ಲಿ, ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಟಾಪನೆಯ ನಂತರ ಶ್ರೀರಾಮನ ಮೇಲಿನ ಭಕ್ತಿ ಎಷ್ಟು ಜಾಸ್ತಿಯಾಗಿದ್ಯೋ, ಅದರಂತೆ ಮೋದಿ ಮೇಲೆ ಪ್ರೀತಿಯು ಜನರಲ್ಲಿ ಜಾಸ್ತಿಯಾಗಿದ್ದು, ಎಂಪಿ ಎಲೆಕ್ಷನ್ ಗೂ ಮೊದಲೇ ಮೋದಿ ಕ್ರೇಜ್ ಜಾಸ್ತಿಯಾಗಿರುವುದು ಮಾತ್ರ ಸುಳ್ಳಲ್ಲ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ