ಸಂಸತ್ನ ಕ್ಯಾಂಟೀನ್‌ನಲ್ಲಿ ಸಂಸದರೊಂದಿಗೆ ಊಟ ಮಾಡಿದ ಪ್ರಧಾನಿ ಮೋದಿ
ಶುಕ್ರವಾರ ಮಧ್ಯಾಹ್ನ ನೀವು ಮೋದಿಯವರನ್ನು ಭೇಟಿ ಮಾಡಬೇಕಂತೆ ಎಂಬ ಕರೆ ಬಂದಿತ್ತು. ಅವರಿಗೂ ಅಚ್ಚರಿ. ಆದರೆ ಮೋದಿ ನಾನು ಇಂದು ನಿಮ್ಮನ್ನು ಶಿಕ್ಷಿಸಲಿದ್ದೇನೆ, ನನ್ನೊಂದಿಗೆ ಬನ್ನಿ" ಎಂದು ಮೋದಿ ಸಂಸದರಲ್ಲಿ ಹುಸಿ ಕೋಪ ತೋರಿಸಿ ಕ್ಯಾಂಟೀನ್‌ನಲ್ಲಿ ಅವರ ಜತೆ ಊಟ ಮಾಡಿದ್ದಾರೆ. ಸಂಸದರೊಂದಿಗೆ ಮಾತನಾಡುತ್ತಾ ಭೋಜನ ಸವಿದ ಪ್ರಧಾನಿ, ನನಗೆ ಖಿಚಡಿ ಇಷ್ಟ ಎಂದು ಹೇಳಿದ್ದಾರೆ.
ದೆಹಲಿ ಫೆಬ್ರುವರಿ 09: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಸಂಸತ್ನ ಕ್ಯಾಂಟೀನ್‌ನಲ್ಲಿ (Parliament canteen) ಸಂಸದರೊಂದಿಗೆ (MP) ಊಟ ಮಾಡಿದ್ದಾರೆ. ಸಂಸತ್ ಕ್ಯಾಂಟೀನ್‌ಗೆ ಅನಿರೀಕ್ಷಿತವಾಗಿ ಬಂದ ಪ್ರಧಾನಿಯವರನ್ನು ನೋಡಿ ಸಂಸದರು ಆಶ್ಚರ್ಯಚಕಿತರಾಗಿದ್ದಾರೆ. “ನಾನು ಇಂದು ನಿಮ್ಮನ್ನು ಶಿಕ್ಷಿಸಲಿದ್ದೇನೆ, ನನ್ನೊಂದಿಗೆ ಬನ್ನಿ” ಎಂದು ಮೋದಿ ಸಂಸದರಲ್ಲಿ ಹುಸಿ ಕೋಪ ತೋರಿಸಿ ತಮಾಷೆಯ ಮಾತುಗಳಾಡಿದ್ದಾರೆ. ಮಧ್ಯಾಹ್ನ 2:30ರ ಸುಮಾರಿಗೆ ಸಂಸದರಿಗೆ ಪ್ರಧಾನಿಯನ್ನು ಭೇಟಿಯಾಗಬೇಕೆಂಬ ಕರೆ ಬಂದಿತ್ತು. ಆಮೇಲೆ ಪ್ರಧಾನಿ ಸಂಸದರನ್ನುದ್ದೇಶಿಸಿ, “ಚಲಿಯೇ, ಆಪ್ಕೋ ಏಕ್ ಪನಿಶ್ಮೆಂಟ್ ದೇನಾ ಹೈ (ಬನ್ನಿ ಹೋಗೋಣ. ನಾನು ನಿಮಗೆ ಶಿಕ್ಷೆ ನೀಡಬೇಕು)” ಎಂದು ಹೇಳಿದರು. ಲಿಫ್ಟ್ ಬಾಗಿಲು ತೆರೆದಾಗ ಸಂಸದರು ಆಶ್ಚರ್ಯಚಕಿತರಾದರು. ಅವರನ್ನು ಕ್ಯಾಂಟೀನ್‌ಗೆ ಕರೆದೊಯ್ಯಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಇಂಡಿಯಾ ಟುಡೇ ಜೊತೆ ಮಾತನಾಡಿದ ಸಂಸದರೊಬ್ಬರು, “ನಮ್ಮನ್ನು ಕರೆಯಲಾಯಿತು, ನಾವು ಮೇಲಕ್ಕೆ ಹೋದೆವು. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಗೊತ್ತಾಯಿತು. ಕ್ಯಾಂಟೀನ್ ಬಾಗಿಲು ತೆರೆಯಿತು.” “ನಾವು ಕ್ಯಾಂಟೀನ್ ತಲುಪಿದಾಗ, ನಾವು ಸಂದರ್ಶಕರ ಲಾಂಜ್‌ನಲ್ಲಿದ್ದೆವು. ನಾವೆಲ್ಲರೂ ಒಬ್ಬರನ್ನೊಬ್ಬರು ನೋಡುತ್ತಿದ್ದೆವು ಮತ್ತು ನಮ್ಮೆಲ್ಲರನ್ನು ಯಾಕೆ ಕರೆಯಲಾಗಿದೆ ಎಂದು ಆಶ್ಚರ್ಯಪಟ್ಟೆವು ಎಂದಿದ್ದಾರೆ.
#WATCH | Delhi | Prime Minister Narendra Modi had lunch with MPs at Parliament Canteen today. pic.twitter.com/GhcfaynYJt
— ANI (@ANI) February 9, 2024
ಮೋದಿ ಸವಿದ ಸಸ್ಯಾಹಾರಿ ಊಟದಲ್ಲಿ ಅಕ್ಕಿ, ದಾಲ್, ಖಿಚಡಿ, ತಿಲ್ ಕಾ ಲಡ್ಡೂ ನೀಡಲಾಯಿತು.
ಟಿಡಿಪಿಯ ರಾಮ್ ಮೋಹನ್ ನಾಯ್ಡು, ಬಿಎಸ್‌ಪಿಯ ರಿತೇಶ್ ಪಾಂಡೆ, ಬಿಜೆಪಿಯ ಲಡಾಖ್ ಸಂಸದ ಜಮ್ಯಾಂಗ್ ನಮ್ಗ್ಯಾಲ್, ಕೇಂದ್ರ ಸಚಿವ ಎಲ್ ಮುರುಗುನ್, ಬಿಜೆಡಿಯ ಸಸ್ಮಿತ್ ಪಾತ್ರ ಮತ್ತು ಬಿಜೆಪಿಯ ಮಹಾರಾಷ್ಟ್ರ ಸಂಸದೆ ಹೀನಾ ಗವಿತ್ ಜತೆ ಮೋದಿ ಕ್ಯಾಂಟೀನ್ ನಲ್ಲಿ ಊಟ ಮಾಡಿದ್ದಾರೆ.
45 ನಿಮಿಷಗಳ ಭೋಜನದ ಸಮಯದಲ್ಲಿ, ಸಂಸದರು ಪ್ರಧಾನಿಯವರ ಜೀವನಶೈಲಿ, ಅವರು ಬೆಳಗ್ಗೆ ಎಷ್ಟು ಗಂಟೆಗೆ ಎದ್ದೇಳುತ್ತಾರೆ, ಇಷ್ಟೊಂದು ಬ್ಯುಸಿ ವೇಳಾಪಟ್ಟಿಯನ್ನು ಹೇಗೆ ನಿರ್ವಹಿಸುತ್ತಾರೆ ಎಂದು ಕೇಳಿದ್ದಾರೆ.
“ಇದು ಕ್ಯಾಂಟೀನ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ಮೋದಿಯವರ ಸೌಹಾರ್ದಯುತ ಭೇಟಿಯಾಗಿದೆ ಎಂದು ಒಬ್ಬರು ಸಂಸದರು ಹೇಳಿದರೆ, ನಾವು ಪ್ರಧಾನಿಯವರೊಂದಿಗೆ ಕುಳಿತಿದ್ದೇವೆ ಎಂದು ಅನಿಸಲಿಲ್ಲ’ ಎಂದು ಮತ್ತೊಬ್ಬರು ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರ ನನ್ನ ಹೃದಯ ಗೆದ್ದಿದೆ: ಮೋದಿಯನ್ನು ಹೊಗಳಿದ ಜಯಂತ್ ಚೌಧರಿ
ಈ ಸಂಭಾಷಣೆಯ ಸಮಯದಲ್ಲಿ, ಪ್ರಧಾನಿ ಮೋದಿ ತಮ್ಮ ನೆಚ್ಚಿನ ಆಹಾರ ಖಿಚಡಿ ಎಂದು ಹೇಳಿದ್ದಾರೆ. “ನಾನು ಯಾವಾಗಲೂ PM ಮೋಡ್‌ನಲ್ಲಿರುವುದಿಲ್ಲ. ನಾನು ಒಳ್ಳೆಯ ಆಹಾರವನ್ನು ಸೇವಿಸಲು ಬಯಸುತ್ತೇನೆ ಎಂದಿದ್ದಾರೆ ಮೋದಿ.
ವಿವಾದಾತ್ಮಕ ಚುನಾವಣೆಗಳ ನಂತರ ಮುಂದಿನ ಪಾಕಿಸ್ತಾನ ಸರ್ಕಾರವನ್ನು ರಚಿಸಲು ಆಶಿಸುತ್ತಿರುವ ನವಾಜ್ ಷರೀಫ್, ಮೋದಿಯವರ ವಿದೇಶಿ ಪ್ರವಾಸಗಳು ಮತ್ತು ಸ್ಟ್ಯಾಚ್ಯೂ ಆಫ್ ಯೂನಿಟಿ ಮೊದಲಾದ ವಿಷಯಗಳ ಬಗ್ಗೆ ಮೋದಿ ಮಾತನಾಡಿದ್ದಾರೆ. ಪ್ರಧಾನಮಂತ್ರಿಯವರು ಅಬುಧಾಬಿ ದೇವಸ್ಥಾನದ ಬಗ್ಗೆಯೂಮಾತನಾಡಿದರು, ಇದಕ್ಕಾಗಿ ಅವರು 2018 ರಲ್ಲಿ ಶಂಕುಸ್ಥಾಪನೆ ಮಾಡಿದ್ದರು. ಮುಂದಿನ ವಾರ ಮೋದಿ ಅಲ್ಲಿಗೆ ಭೇಟಿ ನೀಡಲಿದ್ದಾರೆ. ಅಬುಧಾಬಿಯಲ್ಲಿ ಇದು ಮೊದಲ ಹಿಂದೂ ದೇವಾಲಯ ಯೋಜನೆಯಾಗಿದೆ ಎಂದು ಪ್ರಧಾನಿ ಹೇಳಿರುವುದಾಗಿ ಸಂಸದರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:54 pm, Fri, 9 February 24