ದೆಹಲಿ: ಸಂಸತ್ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳನ್ನು ಸೋಮವಾರ ಮುಂದೂಡಲಾಯಿತು. ಪ್ರಧಾನಿ ಮೋದಿ ಹೊಸ ಮಂತ್ರಿಗಳನ್ನು ಪರಿಚಯಿಸುತ್ತಿದ್ದಾಗ ವಿಪಕ್ಷಗಳು ಗದ್ದಲವುಂಟು ಮಾಡಿವೆ. ವಿರೋಧ ಪಕ್ಷದ ಸಂಸದರ ಕೋಲಾಹಲದ ನಡುವೆ ಲೋಕಸಭೆಯನ್ನು ಮಧ್ಯಾಹ್ನ 2 ರವರೆಗೆ ಮುಂದೂಡಿದೆ. ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 12.25 ರವರೆಗೆ ಮುಂದೂಡಲಾಗಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ವಿಪಕ್ಷಗಳ ಗದ್ದಲದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. “ಲೋಕಸಭೆಯಲ್ಲಿ ಕಾಂಗ್ರೆಸ್ ನಡವಳಿಕೆ ದುಃಖಕರ, ದುರದೃಷ್ಟಕರ, ಅನಾರೋಗ್ಯಕರ” ಎಂದು ಸಿಂಗ್ ಹೇಳಿದ್ದಾರೆ.
. ಅಧಿವೇಶನ ಆರಂಭಕ್ಕೆ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಂಸತ್ತಿನಲ್ಲಿ ಎಲ್ಲಾ ವಿಷಯಗಳ ಬಗ್ಗೆ ಆರೋಗ್ಯಕರ ರೀತಿಯಲ್ಲಿ ಚರ್ಚಿಸಲಾಗುವುದು ಎಂದು ಆಶಿಸಿದರು. “ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯ ಮತ್ತು ಅದರ ವಿರುದ್ಧ ನಮ್ಮ ಹೋರಾಟವನ್ನು ಚರ್ಚಿಸಲಾಗುವುದು ಎಂದು ನಾನು ಭಾವಿಸುತ್ತೇನೆ. ಸಾಂಕ್ರಾಮಿಕ ಪರಿಸ್ಥಿತಿಯ ಕುರಿತು ವಿಷಯ ಮಂಡನೆಗೆ ಎಲ್ಲ ನಾಯಕರು ನಾಳೆ ಸಂಜೆ 4 ಗಂಟೆಗೆ ಅಧಿವೇಶನಕ್ಕೆ ಹಾಜರಾಗಬೇಕೆಂದು ನಾನು ಬಯಸುತ್ತೇನೆ. ಇದನ್ನು ಸದನದಲ್ಲಿಯೂ ಚರ್ಚಿಸಬಹುದು ”ಎಂದು ಅವರು ಹೇಳಿದರು.
Lok Sabha adjourned till 2 pm amid uproar by Opposition MPs.
Defence Minister Rajnath Singh raised an objection against the uproar while Prime Minister Narendra Modi was introducing his Council of Ministers in the House. pic.twitter.com/FQIEf4QQE4
— ANI (@ANI) July 19, 2021
ಮುಂಗಾರು ಅಧಿವೇಶನದ ಅಪ್ಡೇಟ್ಸ್
ರಾಜ್ಯಸಭೆಯಲ್ಲಿ ಸಂಸತ್ ಸದಸ್ಯರು ಈ ವರ್ಷ ನಿಧನರಾದ ಸಂಸದರು ಮತ್ತು ವ್ಯಕ್ತಿಗಳಿಗೆ ಗೌರವ ಸಲ್ಲಿಸಿದ್ದಾರೆ..
Members of Parliament in Rajya Sabha paid tribute to MPs & personalities who lost their lives this year, including veteran actor Dilip Kumar & veteran athlete Milkha Singh.
House has been adjourned till 12.24 pm pic.twitter.com/ej9aYsWfYh
— ANI (@ANI) July 19, 2021
ಲೋಕಸಭೆಯಲ್ಲಿ ನೂತನ ಸಚಿವರನ್ನು ಪರಿಚಯಿಸಿದ ಮೋದಿ
ಎಷ್ಟೋ ಮಹಿಳೆಯರು, ದಲಿತರು, ಬುಡಕಟ್ಟು ಜನಾಂಗದವರು ಮಂತ್ರಿಗಳಾಗಿದ್ದರಿಂದ ಸಂಸತ್ತಿನಲ್ಲಿ ಉತ್ಸಾಹ ಇರುತ್ತದೆ ಎಂದು ನಾನು ಭಾವಿಸಿದ್ದೇನೆ. ಈ ಬಾರಿ ಕೃಷಿ ಮತ್ತು ಗ್ರಾಮೀಣ ಹಿನ್ನೆಲೆಯ ಒಬಿಸಿ ಸಮುದಾಯದ ನಮ್ಮ ಸಹೋದ್ಯೋಗಿಗಳಿಗೆ ಕೌನ್ಸಿಲ್ ಆಫ್ ಮಂತ್ರಿಗಳಲ್ಲಿ ಸ್ಥಾನ ನೀಡಲಾಗಿದೆ ಎಂದು ನೂತನ ಸಚಿವರನ್ನು ಪರಿಚಯಿಸಿದ ಮೋದಿ ಹೇಳಿದ್ದಾರೆ.
I thought that there would be enthusiasm in the Parliament as so many women, Dalits, tribals have become Ministers. This time our colleagues from agricultural & rural background, OBC community, have been given berth in Council of Ministers: PM introduces his new Ministers, in LS pic.twitter.com/Hf7JIbhFFB
— ANI (@ANI) July 19, 2021
ಲೋಕಸಭೆಯಲ್ಲಿ ಸಚಿವರು ಸಂಸದರಾಗಿ ಪ್ರಮಾಣ ವಚನ ಸ್ವೀಕಾರ
ವೈಎಸ್‌ಆರ್‌ಸಿಪಿಯ ಮದ್ದಿಲಾ ಗುರುಮೂರ್ತಿ, ಬಿಜೆಪಿಯ ಮಂಗಲ್ ಸುರೇಶ್ ಅಂಗಡಿ, ಐಯುಎಂಎಲ್‌ನ ಅಬ್ದುಸಮದ್ ಸಮಅದನಿ ಮತ್ತು ಕಾಂಗ್ರೆಸ್ ಪಕ್ಷದ ವಿಜಯಕುಮಾರ್ (ಅಲಿಯಾಸ್) ವಿಜಯ ವಸಂತ್ ಅವರು ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿ (ಸಂಸದರು) ಪ್ರಮಾಣ ವಚನ ಸ್ವೀಕರಿಸಿದರು.
YSRCP’s Maddila Gurumoorthy, BJP’s Mangal Suresh Angadi, IUML’s Abdussamad Samadan and Congress’ Vijayakumar (Alias) Vijay Vasanth take oath as the Members of Parliament (MPs) in Lok Sabha. pic.twitter.com/i6sUABX70Z
— ANI (@ANI) July 19, 2021
ಸೈಕಲ್ನಲ್ಲಿ ಬಂದ ಟಿಎಂಸಿ ಸಂಸದರು
#WATCH | Delhi: Trinamool Congress (TMC) MPs cycled to the Parliament today in protest against the rise in prices of petrol, diesel and LPG.#MonsoonSession pic.twitter.com/4NE72QhNjp
— ANI (@ANI) July 19, 2021
ಇಂಧನ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಟಿಎಂಸಿ ಸಂಸದರು ಸೈಕಲ್ ತುಳಿಯುತ್ತಾ ಸಂಸತ್ಗೆ ಆಗಮಿಸಿದ್ದಾರೆ.
(Parliament Monsoon Session 2021 Rajya Sabha and Lok Sabha adjourned amid uproar by Opposition MPs)
Published On - 12:24 pm, Mon, 19 July 21