‘ಪೆಗಾಸಸ್ ಪ್ರಾಜೆಕ್ಟ್’ ಮಾಧ್ಯಮ ವರದಿಗಳ ಬಗ್ಗೆ ನಾವು ಲೋಕಸಭೆಯಲ್ಲಿ ಚರ್ಚಿಸುತ್ತೇವೆ: ರಾಹುಲ್ ಗಾಂಧಿ

Pegasus Project: ಪ್ರಮುಖ ಪತ್ರಕರ್ತರು, ರಾಜಕಾರಣಿಗಳು, ಪ್ರತಿಪಕ್ಷದ ನಾಯಕರು ಮತ್ತು ಕೆಲವು ಕೇಂದ್ರ ಸಚಿವರು ಸೇರಿದಂತೆ ಸುಮಾರು 300 ಭಾರತೀಯರ ಫೋನ್‌ಗಳನ್ನು ಹ್ಯಾಕ್ ಮಾಡಲು ಭಾರತದಲ್ಲಿ ಪೆಗಾಸಸ್ ಅನ್ನು ಸಹ ಬಳಸಲಾಗಿದೆ ಎಂದು ಭಾನುವಾರ ಪ್ರಕಟವಾದ ವರದಿಯಲ್ಲಿ ಆರೋಪಿಸಲಾಗಿದೆ.

'ಪೆಗಾಸಸ್ ಪ್ರಾಜೆಕ್ಟ್' ಮಾಧ್ಯಮ ವರದಿಗಳ ಬಗ್ಗೆ ನಾವು ಲೋಕಸಭೆಯಲ್ಲಿ ಚರ್ಚಿಸುತ್ತೇವೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 19, 2021 | 1:23 PM

ದೆಹಲಿ: ‘ಅವರು ಏನು ಓದುತ್ತಿದ್ದಾರೆಂದು ನಮಗೆ ತಿಳಿದಿದೆ- ನಿಮ್ಮ ಫೋನ್‌ನಲ್ಲಿರುವ ಎಲ್ಲವೂ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೆಗಾಸಸ್ ಸ್ಪೈವೇರ್ ವಿಷಯದ ಬಗ್ಗೆ ಟ್ಟೀಟ್ ಮಾಡಿದ್ದಾರೆ. ಸೋಮವಾರದಿಂದ ಪ್ರಾರಂಭವಾಗುವ ಸಂಸತ್​ನ ಮಾನ್ಸೂನ್ ಅಧಿವೇಶನಕ್ಕೆ ಮುನ್ನ ವಿರೋಧ ಪಕ್ಷದ ಹಲವಾರು ನಾಯಕರು ಪೆಗಾಸಸ್ ಸ್ಪೈವೇರ್ ಬಗ್ಗೆ ಚರ್ಚಿಸಲು ನೋಟಿಸ್ ನೀಡಿದ್ದಾರೆ. ಪೆಗಾಸಸ್ ಸ್ಪೈವೇರ್ ನ್ನು ಭಾರತದ ಹಲವಾರು ಪತ್ರಕರ್ತರು ಮತ್ತು ರಾಜಕಾರಣಿಗಳ ಫೋನ್ ಗಳನ್ನು ಹ್ಯಾಕ್ ಮಾಡಲು ಬಳಸಲಾಗಿದೆ ಎಂದು ವರದಿಯಾಗಿದೆ.

ವಿಶ್ವದಾದ್ಯಂತದ ಸುದ್ದಿ ಸಂಸ್ಥೆಗಳ ಒಂದು ಸಂಘಟನೆಯು ಪೆಗಾಸಸ್ ಎಂಬ ಇಸ್ರೇಲಿ ಸ್ಪೈವೇರ್ ಅನ್ನು ವಿಶ್ವದಾದ್ಯಂತ ಸರ್ಕಾರಗಳು ಪತ್ರಕರ್ತರು, ರಾಜಕಾರಣಿಗಳು ಮತ್ತು ಇತರ ಪ್ರಮುಖರ ಮೇಲೆ ಕಣ್ಣಿಡಲು ಬಳಸಿದೆ ಎಂದು ವರದಿಗಳನ್ನು ಪ್ರಕಟಿಸಿದೆ.

ನನ್ನನ್ನು  ಸಂಸತ್ ಒಳಗೆ ಹೋಗಲು ಬಿಡಿ, ನಾವು ಪೆಗಾಸಸ್ ಪ್ರಾಜೆಕ್ಟ್  ಮಾಧ್ಯಮ ವರದಿ ಬಗ್ಗೆ ಚರ್ಚಿಸಲಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಮುಖ ಪತ್ರಕರ್ತರು, ರಾಜಕಾರಣಿಗಳು, ಪ್ರತಿಪಕ್ಷದ ನಾಯಕರು ಮತ್ತು ಕೆಲವು ಕೇಂದ್ರ ಸಚಿವರು ಸೇರಿದಂತೆ ಸುಮಾರು 300 ಭಾರತೀಯರ ಫೋನ್‌ಗಳನ್ನು ಹ್ಯಾಕ್ ಮಾಡಲು ಭಾರತದಲ್ಲಿ ಪೆಗಾಸಸ್ ಅನ್ನು ಸಹ ಬಳಸಲಾಗಿದೆ ಎಂದು ಭಾನುವಾರ ಪ್ರಕಟವಾದ ವರದಿಯಲ್ಲಿ ಆರೋಪಿಸಲಾಗಿದೆ.

ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಈ ಪ್ರಮುಖ ವ್ಯಕ್ತಿಗಳಲ್ಲಿ ಹೆಚ್ಚಿನವರು 2018 ಮತ್ತು 2019 ರ ಅವಧಿಯಲ್ಲಿ ಫೋನ್ ಹ್ಯಾಂಕಿಂಗ್​ಗೆ ಗುರಿಯಾಗಿದ್ದರು ಎಂದು ವರದಿ ಹೇಳಿದೆ.

ವರದಿಯನ್ನು ಪ್ರಕಟಿಸಿದ ದಿ ವೈರ್ ಪ್ರಕಾರ, ಗುರಿ ಸಂಖ್ಯೆಗಳಿಗೆ ಸಂಬಂಧಿಸಿದ ಕೆಲವು ಫೋನ್‌ಗಳಲ್ಲಿ ವಿಧಿವಿಜ್ಞಾನ ಪರೀಕ್ಷೆಗಳು ಪೆಗಾಸಸ್ ಸ್ಪೈವೇರ್ ಮೂಲಕ ಗುರಿಯ ಸ್ಪಷ್ಟ ಚಿಹ್ನೆಗಳನ್ನು ಬಹಿರಂಗಪಡಿಸಿದವು.

“ನಿರ್ದಿಷ್ಟ ಜನರ ಮೇಲೆ ಸರ್ಕಾರದ ಕಣ್ಗಾವಲು ಕುರಿತ ಆರೋಪಗಳಿಗೆ ಯಾವುದೇ ದೃಢವಾದ ಆಧಾರ ಅಥವಾ ಸತ್ಯವಿಲ್ಲ” ಎಂದು ಹೇಳುವ ಮೂಲಕ ಸರ್ಕಾರವು ಹ್ಯಾಕಿಂಗ್‌ನಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿದೆ.

ಬೇಹುಗಾರಿಕೆ ಹಗರಣದ ವರದಿಯು ಪ್ಯಾರಿಸ್ ಮೂಲದ ಲಾಭೋದ್ದೇಶ ರಹಿತ ಮಾಧ್ಯಮ ಫೋರ್ಬಿಡನ್ ಸ್ಟೋರೀಸ್ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಹಂಚಿರುವ ಸೋರಿಕೆಯಾದ ಡೇಟಾಬೇಸ್ ಅನ್ನು ಆಧರಿಸಿದೆ, ಇದನ್ನು ಸಹಕಾರಿ ತನಿಖೆಗಾಗಿ ವಿಶ್ವದಾದ್ಯಂತ ಹಲವಾರು ಪ್ರಕಟಣೆಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಭಾರತೀಯ ರಾಜಕಾರಣಿಗಳ, ಪತ್ರಕರ್ತರ ಫೋನ್‌ಗಳು ‘ಪೆಗಾಸಸ್’ ಬಳಸಿ ಹ್ಯಾಕ್: ವರದಿಯಲ್ಲಿನ 10 ಪ್ರಮುಖ ಸಂಗತಿಗಳು

ಇದನ್ನೂ ಓದಿ:  Parliament Monsoon Session 2021: ಸಂಸತ್ ಮುಂಗಾರು ಅಧಿವೇಶನದಲ್ಲಿ ವಿಪಕ್ಷಗಳ ಗದ್ದಲ; ಉಭಯ ಸದನಗಳ ಕಲಾಪ ಮುಂದೂಡಿಕೆ

(Let me go inside the Parliament right now we will discuss it says Rahul Gandhi on Pegasus spyware issue)

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್