ಮುಂಗಾರು ಅಧಿವೇಶನದ (Monsoon Session) 9ನೇ ದಿನವಾದ ಇಂದು (ಗುರುವಾರ) ಮೂವರು ಸಂಸದರನ್ನು ರಾಜ್ಯಸಭಾ ಕಲಾಪದಿಂದ (Rajya sabha) ಅಮಾನತು ಮಾಡಲಾಗಿದೆ. ಆಮ್ ಆದ್ಮಿ ಪಕ್ಷದ ಸುಶೀಲ್ ಕುಮಾರ್ ಗುಪ್ತಾ ಮತ್ತು ಸಂದೀಪ್ ಕುಮಾರ್ ಪಾಠಕ್, ಪಕ್ಷೇತರ ಸಂಸದ ಅಜಿತ್ ಕುಮಾರ್ ಭುಯಾನ್ ಅವರನ್ನು ಇಂದು ಅಮಾನತು ಮಾಡಲಾಗಿದೆ. ರಾಜ್ಯಸಭೆಯಲ್ಲಿ ವಿಪಕ್ಷಗಳ ಗದ್ದಲದಿಂದಾಗಿ ಕಲಾಪವನ್ನು ಮಧ್ಯಾಹ್ನ 2 ಗಂಟೆವರೆಗೆ ಮುಂದೂಡಲಾಗಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷಗಳು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಪ್ರತಿಭಟನೆ ಮುಂದುವರಿಸಿವೆ. ಜಿಎಸ್ ಟಿ, ಹಣದುಬ್ಬರ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆಗೊಳಪಡಿಸಿರುವುದನ್ನು ಪ್ರಶ್ನಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿವೆ. ರಾಜ್ಯಸಭಾ ಕಲಾಪ ವೇಳೆ ಅಶಿಸ್ತಿನ ವರ್ತನೆಗಾಗಿ ಆಮ್ ಆದ್ಮಿ ಪಕ್ಷದ ಸದಸ್ಯ ಸಂಜಯ್ ಸಿಂಗ್ (Sanjay Singh) ಅವರನ್ನು ಬುಧವಾರ, ಒಂದು ವಾರಗಳ ಕಾಲ ರಾಜ್ಯಸಭೆಯ ಕಲಾಪದಿಂದ ಅಮಾನತು ಮಾಡಲಾಗಿದೆ. ವಿರೋಧ ಪಕ್ಷದ 19 ಸಂಸದರನ್ನು ಮಂಗಳವಾರ ಕಲಾಪದಿಂದ ಅಮಾನತು ಮಾಡಲಾಗಿತ್ತು. ಇಲ್ಲಿಯವರೆಗೆ ರಾಜ್ಯಸಭೆಯಿಂದ 23 ಮತ್ತು ಲೋಕಸಭೆಯ ನಾಲ್ವರು ಸಂಸದರು ಸೇರಿದಂತೆ ಒಟ್ಟು 27 ಸಂಸದರನ್ನು ಸಂಸತ್ ಮುಂಗಾರು ಅಧಿವೇಶನದಿಂದ ಅಮಾನತು ಮಾಡಲಾಗಿದೆ
ರಾಷ್ಟ್ರಪತ್ನಿ ಹೇಳಿಕೆ ಬಗ್ಗೆ ಲೋಕಸಭೆಯಲ್ಲಿ ಗದ್ದಲ
ಕಾಂಗ್ರೆಸ್ ಸಂಸಗದ ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಹೇಳಿದ್ದನ್ನು ಖಂಡಿಸಿದ ಬಿಜೆಪಿ ಸಂಸದರು ಲೋಕಸಭೆಯಲ್ಲಿ ಸೋನಿಯಾ ಗಾಂಧಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಗದ್ದಲದಿಂದಾಗಿ ಲೋಕಸಭಾ ಕಲಾಪವನ್ನು ಇಂದು ಸಂಜೆ 4ಗಂಟೆವರಗೆ ಮುಂದೂಡಲಾಗಿದೆ.
ಅಧೀರ್ ರಂಜನ್ ಚೌಧರಿ ಅವರು ಕ್ಷಮೆ ಕೇಳಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ದೇಶದ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇದಕ್ಕೆ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಚೌಧರಿ ಹೇಳುತ್ತಿದ್ದಾರೆ ಎಂದು ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದಾರೆ.
Congress interim president Sonia Gandhi said that he has already apologised, she is misleading the country. AR Chowdhury has been claiming that there is no need to apologise: Union Finance Minister Nirmala Sitharaman on Cong MP Adhir Chowdhury’s ‘Rashtrapatni’ remarks pic.twitter.com/FeksWQT4rf
— ANI (@ANI) July 28, 2022
ಎಆರ್ ಚೌಧರಿ ಅವರು ರಾಷ್ಟ್ರಪತಿಯವರನ್ನು ಅವಮಾನ ಮಾಡಿದ್ದಾರೆ. ಅದು ಅವರ ಮನಸ್ಥಿಯನ್ನು ತೋರಿಸುತ್ತದೆ. ಬುಡಕಟ್ಟು ಜನಾಂಗದವರನ್ನು ಈ ರೀತಿ ಅವಮಾನಿಸುವುದನ್ನು ಸಹಿಸುವುದಿಲ್ಲ. ಇದಕ್ಕೆ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಚೌಧರಿ ಹೇಳುತ್ತಿದ್ದಾರೆ. ಅವರು ಇದನ್ನು ಪುನಃ ಪುನಃ ಹೇಳಿದ್ದಾರೆ. ಇದೇನು ಚಿಕ್ಕ ವಿಷಯವೇ? ಈ ಹೇಳಿಕೆಗಾಗಿ ಸೋನಿಯಾಗಾಂಧಿ ಅವರು ಲೋಕಸಭೆಯಲ್ಲಿ ದೇಶದ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಪೀಯುಷ್ ಗೋಯಲ್ ಒತ್ತಾಯಿಸಿದ್ದಾರೆ.
Published On - 12:34 pm, Thu, 28 July 22