Sengol: ನೂತನ ಸಂಸತ್ತಿನಲ್ಲಿ ಇರಿಸಲಾಗುವ ಅಧಿಕಾರ ಹಸ್ತಾಂತರ ಸೂಚಿಸುವ ‘ಸೆಂಗೋಲ್’ನ ಇತಿಹಾಸವೇನು?

ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರ ಹಸ್ತಾಂತರ ಸೂಚಿಸುವ ಸ್ವಾತಂತ್ರ್ಯದ ಐತಿಹಾಸಿಕ ಸಂಕೇತವಾದ ಸೆಂಗೋಲ್ (ರಾಜದಂಡ) ಅನ್ನು ನೂತನ ಸಂಸತ್ತಿನೊಳಗೆ ಇರಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.  ದೆಹಲಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನೂತನ ಸಂಸತ್​ ಭವನ(Parliament)ದ ಉದ್ಘಾಟನಾ ಕಾರ್ಯಕ್ರಮ ಮೇ 28 ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಅದರ ಉದ್ಘಾಟನೆ ಮಾಡಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

Sengol: ನೂತನ ಸಂಸತ್ತಿನಲ್ಲಿ ಇರಿಸಲಾಗುವ ಅಧಿಕಾರ ಹಸ್ತಾಂತರ ಸೂಚಿಸುವ ‘ಸೆಂಗೋಲ್’ನ ಇತಿಹಾಸವೇನು?
ಸೆಂಗೋಲ್
Edited By:

Updated on: Oct 09, 2026 | 4:28 PM

ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರ ಹಸ್ತಾಂತರ ಸೂಚಿಸುವ ಸ್ವಾತಂತ್ರ್ಯದ ಐತಿಹಾಸಿಕ ಸಂಕೇತವಾದ ಸೆಂಗೋಲ್ (ರಾಜದಂಡ) ಅನ್ನು ನೂತನ ಸಂಸತ್ತಿನೊಳಗೆ ಇರಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.  ದೆಹಲಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನೂತನ ಸಂಸತ್​ ಭವನ(Parliament)ದ ಉದ್ಘಾಟನಾ ಕಾರ್ಯಕ್ರಮ ಮೇ 28 ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಅದರ ಉದ್ಘಾಟನೆ ಮಾಡಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಈ ಸೆಂಗೋಲ್​ಗೆ ಅಗಾಧ ಮಹತ್ವವಿದೆ ಆಗಸ್ಟ್ 14, 1947 ರಂದು ರಾತ್ರಿ 10.45 ರ ಸುಮಾರಿಗೆ, ಪಂಡಿತ್ ನೆಹರು ಅವರು ತಮಿಳುನಾಡಿನಿಂದ ಈ ಸೆಂಗೋಲ್ ಅನ್ನು ಪಡೆದರು ಮತ್ತು ಹಲವಾರು ಹಿರಿಯ ನಾಯಕರ ಸಮ್ಮುಖದಲ್ಲಿ ಅವರು ಇದನ್ನು ಸ್ವಾತಂತ್ರ್ಯವನ್ನು ಸಾಧಿಸಿದ ಸಂಕೇತವಾಗಿ ಸ್ವೀಕರಿಸಿದರು ಎಂದರು.

ಚಿನ್ನದ ಈ ರಾಜದಂಡವು ಆಭರಣಗಳಿಂದ ಕೂಡಿತ್ತು, ಆ ಅವಧಿಯಲ್ಲಿ ಈ ಸೆಂಗೋಲ್​​ನ ಬೆಲೆ 15 ಸಾವಿರ ರೂ. ಎನ್ನಲಾಗಿತ್ತು. ಬ್ರಿಟಿಷರಿಂದ ಈ ದೇಶದ ಜನರಿಗೆ ಅಧಿಕಾರವನ್ನು ವರ್ಗಾಯಿಸಲಾಯಿತು ಎಂದು ಅವರು ಹೇಳಿದರು. ಇದನ್ನು ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದು, ಅದನ್ನು ಹೊಸ ಸಂಸತ್ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.

ಭಾರತೀಯ ಅದರಲ್ಲೂ ತಮಿಳು ಸಂಸ್ಕೃತಿಯಲ್ಲಿ ಸೆಂಗೋಲ್​ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಅಮಿತ್ ಶಾ ಹೇಳಿದ್ದಾರೆ. ಚೋಳ ಸಾಮ್ರಾಜ್ಯದ ಕಾಲದಿಂದಲೂ ಸೆಂಗೋಲ್​ಗೆ ಪ್ರಾಮುಖ್ಯತೆ ಇತ್ತು. ಈ ಸೆಂಗೋಲ್​ನ್ನು ಹೊಸ ಸಂಸತ್ತಿನಲ್ಲಿ ಇಡಲಾಗುವುದು.

ಹೊಸ ಸಂಸತ್ ಭವನದ ಉದ್ಘಾಟನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಸೆಂಗೋಲ್​​ ತೆಗೆದುಕೊಂಡು ಹೋಗುತ್ತಾರೆ ಮತ್ತು ಅದನ್ನು ಹೊಸ ಸಂಸತ್ ಭವನದಲ್ಲಿ ಇರಿಸುತ್ತಾರೆ. ಸೆಂಗೋಲ್​ ಸ್ಥಾಪನೆಗೆ ಸಂಸತ್ ಭವನಕ್ಕಿಂತ ಸೂಕ್ತ ಮತ್ತು ಪವಿತ್ರ ಸ್ಥಳ ಮತ್ತೊಂದಿಲ್ಲ ಎಂದಿದ್ದಾರೆ.

Published On - 1:12 pm, Wed, 24 May 23

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us