ದೆಹಲಿ: ಬಿಲಿಯನೇರ್ ಗೌತಮ್ ಅದಾನಿ (Gautam Adani) ಜತೆಗಿನ ನಂಟು ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ತಮ್ಮ ಭಾಷಣದ ಭಾಗಗಳನ್ನು ಸಂಸತ್ತಿನ ದಾಖಲೆಗಳಿಂದ ಅಳಿಸಿ ಹಾಕಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. “ನನ್ನ ಪದಗಳನ್ನು ಏಕೆ ತೆಗೆದು ಹಾಕಲಾಗಿದೆ?” ಎಂದು ರಾಹುಲ್ ಕೇಳಿದ್ದು ತಾನು ಮಂಗಳವಾರ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಧಾನಿ ವಿಫಲರಾಗಿದ್ದಾರೆ ಎಂದಿದ್ದಾರೆ. “ನಾನು ಅವರಿಗೆ (ಗೌತಮ್ ಅದಾನಿ ಅವರೊಂದಿಗಿನ ಸಂಬಂಧದ ಬಗ್ಗೆ) ಸರಳವಾದ ಪ್ರಶ್ನೆಗಳನ್ನು ಕೇಳಿದೆ, ಅವರು ಉತ್ತರಿಸಲಿಲ್ಲ ಇದು ಸತ್ಯವನ್ನು ಬಹಿರಂಗಪಡಿಸುತ್ತದೆ. ಅವರು ಸ್ನೇಹಿತರಲ್ಲದಿದ್ದರೆ, ಅವರು ವಿಚಾರಣೆಗೆ ಒಪ್ಪುತ್ತಿದ್ದರು. ಅವರು ರಕ್ಷಣಾ ವಲಯದಲ್ಲಿ ಶೆಲ್ ಕಂಪನಿಗಳ ಆರೋಪಗಳ ಬಗ್ಗೆ ಏನನ್ನೂ ಹೇಳಲಿಲ್ಲ. “ಪ್ರಧಾನಿ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದು ರಾಷ್ಟ್ರೀಯ ಭದ್ರತೆ ಮತ್ತು ಮೂಲಸೌಕರ್ಯದ ವಿಷಯವಾಗಿದೆ.’ನಾವು ಅದನ್ನು ಪರಿಶೀಲಿಸುತ್ತೇವೆ’ ಎಂದು ಪ್ರಧಾನಿ ಹೇಳಬೇಕಿತ್ತು. ಆದರೆ ಅವರು ಮಾಡಲಿಲ್ಲ ಎಂದಿದ್ದಾರೆ ರಾಹುಲ್.
ಮಂಗಳವಾರ, ಕಾಂಗ್ರೆಸ್ ನಾಯಕ ರಾಹುಲ್, ಮೋದಿ ಮತ್ತು ಗೌತಮ್ ಅದಾನಿ ವಿರುದ್ಧ ಸಂಸತ್ತಿನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದರು,
“ಅದಾನಿ ಜೀ ಅವರು ಸೌರಶಕ್ತಿ, ಪವನ ಶಕ್ತಿಯಲ್ಲಿ ವ್ಯವಹಾರ ಮಾಡಿದ್ದು ಅವರು ಎಂದಿಗೂ ವಿಫಲರಾಗುವುದಿಲ್ಲ. ಅದಾನಿ ಅನೇಕ ಕ್ಷೇತ್ರಗಳಲ್ಲಿ ಅಂತಹ ಯಶಸ್ಸನ್ನು ಹೇಗೆ ಪಡೆದರು, ಪ್ರಧಾನಿಯೊಂದಿಗೆ ಅವರ ಸಂಬಂಧವೇನು ಎಂದು ಭಾರತ್ ಜೋಡೋ ಯಾತ್ರೆಯಲ್ಲಿ ಜನರು ನನ್ನಲ್ಲಿ ಕೇಳಿದ್ದರು ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದ್ದಾರೆ. ಪ್ರಧಾನಿ ಮೋದಿ ಭೇಟಿ ನೀಡಿದ ದೇಶಗಳಲ್ಲಿ ಅದಾನಿ ಗುತ್ತಿಗೆ ಪಡೆದಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
“2014 ಮತ್ತು 2022 ರ ನಡುವೆ ಅದಾನಿ ನಿವ್ವಳ ಮೌಲ್ಯವು $ 8 ಶತಕೋಟಿಯಿಂದ 140 ಶತಕೋಟಿಗೆ ಹೇಗೆ ಹೆಚ್ಚಾಯಿತು ಎಂದು ಜನರು ನನ್ನನ್ನು ಕೇಳಿದರು. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಉದ್ಯಮಿ ಅದಾನಿ 600 ನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಹೋದರು ಎಂದು ರಾಹುಲ್ ಹೇಳಿದ್ದಾರೆ.
#WATCH | “Why my words were expunged?,” says Congress MP Rahul Gandhi as he arrives in Parliament in the middle of PM’s speech during motion of thanks to President’s address, in Lok Sabha pic.twitter.com/rIcLV1REHk
— ANI (@ANI) February 8, 2023
ಅದಾನಿ ಗ್ರೂಪ್ ಹಿಂಡೆನ್‌ಬರ್ಗ್ ವರದಿಯನ್ನು “ಆಯ್ದ ತಪ್ಪು ಮಾಹಿತಿಯ ದುರುದ್ದೇಶಪೂರಿತ ಸಂಯೋಜನೆ ಮತ್ತು ಭಾರತದ ಅತ್ಯುನ್ನತ ನ್ಯಾಯಾಲಯಗಳಿಂದ ಪರೀಕ್ಷಿಸಲ್ಪಟ್ಟ ಮತ್ತು ತಿರಸ್ಕರಿಸಲ್ಪಟ್ಟ ಹಳೆಯ, ಆಧಾರರಹಿತ ಮತ್ತು ಅಪಖ್ಯಾತಿಗೊಳಗಾದ ಆರೋಪಗಳು” ಎಂದು ಕರೆದಿದೆ.
ಸಾರ್ವಜನಿಕ ವಲಯದ ಕಂಪನಿಗಳಾದ ಎಲ್‌ಐಸಿ (ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಮತ್ತು ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಹೂಡಿಕೆ ಮಾಡಿರುವುದರಿಂದ ಅದಾನಿ ಗ್ರೂಪ್ ಷೇರುಗಳ ಇತ್ತೀಚಿನ ಕರಗುವಿಕೆ ಸಾರ್ವಜನಿಕ ಹಣವನ್ನು ಒಳಗೊಂಡಿರುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತವೆ. ಆದರೆ ಅದಾನಿ ಸಮೂಹವು ನಾವು ಎಲ್ಲ ಕಾನೂನುಗಳನ್ನು ಅನುಸರಿಸಿದ್ದೇವೆ ಎಂದಿದೆ.
ಹಿಂಡೆನ್‌ಬರ್ಗ್-ಅದಾನಿ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆಗಳಿಂದಾಗಿ ಸಂಸತ್ತಿನ ಎರಡೂ ಸದನಗಳಲ್ಲಿ ಪದೇ ಪದೇ ಕಲಾಪಕ್ಕೆ ಅಡ್ಡಿಯಾಗಿದೆ.
“ಪುನರುತ್ಥಾನ ಗುಜರಾತ್” (resurgent Gujarat) ಎಂಬ ಕಲ್ಪನೆಯನ್ನು ನಿರ್ಮಿಸಲು ಅದಾನಿ ಪ್ರಧಾನಿ ಮೋದಿಯವರಿಗೆ ಸಹಾಯ ಮಾಡಿದರು ನಂತರ ಅವರು ದೇಶದ ಪ್ರಧಾನ ಮಂತ್ರಿಯಾಗಿ ಉನ್ನತೀಕರಣದಿಂದ ಲಾಭ ಪಡೆದರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇದನ್ನೂ ಓದಿ: Parliament: 2014ರ ಹಿಂದಿನ ದಶಕವನ್ನು ಕಳೆದುಹೋದ ದಶಕ ಎಂದು ನೆನಪಿಸಿಕೊಳ್ಳಲಾಗುತ್ತದೆ: ಪ್ರಧಾನಿ ಮೋದಿ
ಹಲವು ವರ್ಷಗಳ ಹಿಂದೆ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಸಂಬಂಧಗಳು ಪ್ರಾರಂಭವಾದವು .ಒಬ್ಬ ವ್ಯಕ್ತಿ ಪ್ರಧಾನಿ ಮೋದಿಯ ಭುಜಕ್ಕೆ ಭುಜದಿಂದ ನಿಂತರು, ಅವರು ಪ್ರಧಾನಿಗೆ ನಿಷ್ಠರಾಗಿದ್ದರು ಮತ್ತು ‘ಪುನರುತ್ಥಾನ ಗುಜರಾತ್’ ಕಲ್ಪನೆಯನ್ನು ನಿರ್ಮಿಸಲು ಮೋದಿಗೆ ಸಹಾಯ ಮಾಡಿದರು. 2014 ರಲ್ಲಿ ಪ್ರಧಾನಿ ಮೋದಿ ರಾಷ್ಟ್ರ ರಾಜಧಾನಿ ತಲುಪಿದಾಗ ನಿಜವಾದ ಮ್ಯಾಜಿಕ್ ಪ್ರಾರಂಭವಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ತಮ್ಮ ಭಾಷಣದ ಸಮಯದಲ್ಲಿ, ಅದಾನಿ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್, ನೀವು ಮತ್ತು ಅದಾನಿ ಎಷ್ಟು ಬಾರಿ ಒಟ್ಟಿಗೆ ವಿದೇಶ ಪ್ರವಾಸ ಮಾಡಿದ್ದೀರಿ?ನಿಮ್ಮ ವಿದೇಶಿ ಪ್ರವಾಸಗಳಲ್ಲಿ ಅದಾನಿ ನಿಮ್ಮೊಂದಿಗೆ ಎಷ್ಟು ಬಾರಿ ಜತೆಯಾಗಿದ್ದಾರೆ?ನಿಮ್ಮ ಫಾರಿನ್ ಟ್ರಿಪ್ ಆದ ತಕ್ಷಣ ಅದಾನಿ ಆ ದೇಶಕ್ಕೆ ಎಷ್ಟು ಬಾರಿ ಹೋಗಿ ಒಪ್ಪಂದ ಮಾಡಿಕೊಂಡಿದ್ದಾರೆ? ಚುನಾವಣಾ ಬಾಂಡ್‌ಗಳಲ್ಲಿ ಬಿಜೆಪಿಗೆ ಅದಾನಿ ನೀಡಿದ ಹಣವೆಷ್ಟು? -ಈ ನಾಲ್ಕು ಪ್ರಶ್ನೆಗಳನ್ನು ಮೋದಿಗೆ ಕೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ