ಕೊರೊನಾ ಲಸಿಕೆ ಪೂರೈಕೆಗೆ ಪೇಟೆಂಟ್ ಸಡಿಲಿಕೆ ಜೊತೆಗೆ ಸಹಭಾಗಿತ್ವ ಕೂಡ ಮುಖ್ಯ; ಭಾರತ್ ಬಯೋಟೆಕ್ ಜಂಟಿ ನಿರ್ದೇಶಕಿ

ಭಾರತ್ ಬಯೋಟೆಕ್ ಸಂಸ್ಥೆ ಈ ಬಗ್ಗೆ ಇತರ ಕಂಪೆನಿಗಳೊಂದಿಗೆ ಕೈಜೋಡಿಸಲು ತಯಾರಿದೆ. ಕಂಪೆನಿಯ ಈ ಮೊದಲ ಇತಿಹಾಸವೇ ಭಾರತ್ ಬಯೋಟೆಕ್ ಸಹಭಾಗಿತ್ವವನ್ನು ಬೆಂಬಲಿಸುತ್ತದೆ ಎಂಬುದಕ್ಕೆ ಸಾಕ್ಷಿ ಎಂದು ಎಲ್ಲಾ ನುಡಿದಿದ್ದಾರೆ.

ಕೊರೊನಾ ಲಸಿಕೆ ಪೂರೈಕೆಗೆ ಪೇಟೆಂಟ್ ಸಡಿಲಿಕೆ ಜೊತೆಗೆ ಸಹಭಾಗಿತ್ವ ಕೂಡ ಮುಖ್ಯ; ಭಾರತ್ ಬಯೋಟೆಕ್ ಜಂಟಿ ನಿರ್ದೇಶಕಿ
ಪ್ರಾತಿನಿಧಿಕ ಚಿತ್ರ

ದೆಹಲಿ: ಸಹಭಾಗಿತ್ವ, ತಂತ್ರಜ್ಞಾನ ಹಂಚಿಕೆ ಹಾಗೂ ಉಪಕರಣಗಳ ಸಾಗಾಣಿಕೆ, ಕೊರೊನಾ ಲಸಿಕೆ ಹಂಚಿಕೆ ಸರಿಯಾಗಿ ಆಗಲು ಮುಖ್ಯ ಅಂಶಗಳು ಎಂದು ಭಾರತ್ ಬಯೋಟೆಕ್​ನ ಜಂಟಿ ಎಮ್​ಡಿ ಸುಚಿತ್ರಾ ಎಲ್ಲಾ ಶನಿವಾರ ತಿಳಿಸಿದ್ದಾರೆ. ಬಹುದೊಡ್ಡ ಮಟ್ಟದಲ್ಲಿ ಲಸಿಕೆ ಪೂರೈಕೆಗೆ ಈ ಅಂಶಗಳನ್ನು ಪರಿಗಣಿಸುವುದು ಅವಶ್ಯಕ ಎಂದು ಅವರು ಹೇಳಿದ್ದಾರೆ. ಇಯು- ಇಂಡಿಯಾ ಬ್ಯುಸಿನೆಸ್ ದುಂಡುಮೇಜಿನಲ್ಲಿ ಮಾತನಾಡಿದ ಎಲ್ಲಾ, ಪೇಟೆಂಟ್ ಸಡಿಲಿಕೆಗಿಂತಲೂ ಈ ಮೇಲೆ ಸೂಚಿಸಿದ ವಿಚಾರಗಳು ಮುಖ್ಯ. ಇದು ದೇಶದ ಲಸಿಕೆ ಬೇಡಿಕೆ ಮಾತ್ರವಲ್ಲ, ಜಾಗತಿಕ ಲಸಿಕೆ ಪೂರೈಕೆಗೆ ಅಗತ್ಯ ವಿಚಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಲಸಿಕೆಯನ್ನು ಭಾರತದಂಥ ಬೃಹತ್ ರಾಷ್ಟ್ರಕ್ಕೆ ಪೂರೈಸುವುದಕ್ಕೆ ಸಹಭಾಗಿತ್ವದಲ್ಲಿ ಕೆಲಸ ಮಾಡುವುದು ಅಗತ್ಯವಾಗಿದೆ. ನಾವು ಕೊವ್ಯಾಕ್ಸಿನ್ ಲಸಿಕೆಯನ್ನು ಯುಎಸ್​ನಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳುತ್ತಿದ್ದೇವೆ. ಯುರೋಪ್​ನಲ್ಲಿ ಕೂಡ ಈ ಕಾರ್ಯ ಆಗುವುದು ಬೇಕಿದೆ. ಯುರೋಪಿಯನ್ ಕಂಪೆನಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಬೇಕಿದೆ ಎಂದು ಸುಚಿತ್ರಾ ಎಲ್ಲಾ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಭಾರತ ದೇಶದ 1.3 ಬಿಲಿಯನ್ ಜನರಿಗೆ ಬೇಕಿರುವ ಲಸಿಕೆಯನ್ನು ಪೂರೈಸುವುದು ಕಷ್ಟಸಾಧ್ಯ. ನಮಗೆಲ್ಲರಿಗೂ ಈ ವಿಚಾರ ತಿಳಿದೇ ಇದೆ. ಇದಕ್ಕೆ ಪರಿಹಾರವಾಗಿ ನಾವು ಹೆಚ್ಚಿನ ತಂತ್ರಜ್ಞಾನವನ್ನು, ಪೇಟೆಂಟ್ ಸಡಿಲಿಕೆಯನ್ನು ನಮ್ಮ ಸೌಲಭ್ಯ ಬಳಸಿ ಲಸಿಕೆ ಹಂಚಿಕೆಯನ್ನು ವೇಗವಾಗಿ ನಡೆಸುವುದು ಸಾಧ್ಯವಿದೆ ಎಂದು ತಿಳಿಸಿದ್ದಾರೆ.

ಭಾರತ್ ಬಯೋಟೆಕ್ ಸಂಸ್ಥೆ ಈ ಬಗ್ಗೆ ಇತರ ಕಂಪೆನಿಗಳೊಂದಿಗೆ ಕೈಜೋಡಿಸಲು ತಯಾರಿದೆ. ಕಂಪೆನಿಯ ಈ ಮೊದಲ ಇತಿಹಾಸವೇ ಭಾರತ್ ಬಯೋಟೆಕ್ ಸಹಭಾಗಿತ್ವವನ್ನು ಬೆಂಬಲಿಸುತ್ತದೆ ಎಂಬುದಕ್ಕೆ ಸಾಕ್ಷಿ ಎಂದು ಎಲ್ಲಾ ನುಡಿದಿದ್ದಾರೆ.

ಇದನ್ನೂ ಓದಿ: ನಗರಗಳ ಬಳಿಕ ಹಳ್ಳಿಗಳು ಈಗ ಕೊರೊನಾ ಸೋಂಕಿನ ಅಪಾಯದಲ್ಲಿ; ಪರಮಾತ್ಮ ನಿರ್ಭರ್ ಭಾರತ್ ಎಂದ ರಾಹುಲ್ ಗಾಂಧಿ

ನಿಮ್ಮ ಹತ್ತಿರದ ಕೇಂದ್ರದಲ್ಲಿ ಕೊವ್ಯಾಕ್ಸಿನ್​ ಅಥವಾ ಕೊವಿಶೀಲ್ಡ್​ ಇವೆರಡರಲ್ಲಿ ಯಾವುದು ಲಭ್ಯವಿದೆ ಎಂದು ತಿಳಿಯಲು ಹೀಗೆ ಮಾಡಿ

(Partnerships Tech transfers supply of materials must to scale up Vaccine Production says Bharat Biotech Joint MD)