ತಿರುವನಂತಪುರಂ: ನಾವು ಧರಿಸುವ ಫೇಸ್ ಮಾಸ್ಕ್ ಕೊರೊನಾ ಮಹಾಮಾರಿಯ ಆಕ್ರಮಣ ತಡೆಯುವ ಅತ್ಯಮೂಲ್ಯವಾದ ಅಸ್ತ್ರವಾಗಿ ಪರಿಣಮಿಸಿದೆ. ಆದರೆ, ಇದೇ ಮಾಸ್ಕ್ನ ಬಳಸಿಕೊಂಡು ವ್ಯಕ್ತಿಯೊಬ್ಬ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಯತ್ನಿಸಿರುವ ಘಟನೆ ದೇವರ ನಾಡು ಕೇರಳದ ಕೊಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. UAE ನಿಂದ ಕೇರಳಕ್ಕೆ ಆಗಮಿಸಿದ್ದ ಪ್ರಯಾಣಿಕನೊಬ್ಬ ತನ್ನ N95 ಮಾಸ್ಕ್ನಲ್ಲಿ ಬರೋಬ್ಬರಿ 40 ಗ್ರಾಂ ಚಿನ್ನವನ್ನು ಅಡಗಿಸಿದ್ದ. ಖಚಿತ ಮಾಹಿತಿಯ ಮೇರೆಗೆ ಪ್ರಯಾಣಿಕನನ್ನು ಏರ್ಪೋರ್ಟ್ನ ಏರ್ ಇಂಟೆಲಿಜೆನ್ಸ್ ವಿಭಾಗದ ಸಿಬ್ಬಂದಿ ಬಂಧಿಸಿದ್ದಾರೆ. […]
Follow us on
ತಿರುವನಂತಪುರಂ: ನಾವು ಧರಿಸುವ ಫೇಸ್ ಮಾಸ್ಕ್ ಕೊರೊನಾ ಮಹಾಮಾರಿಯ ಆಕ್ರಮಣ ತಡೆಯುವ ಅತ್ಯಮೂಲ್ಯವಾದ ಅಸ್ತ್ರವಾಗಿ ಪರಿಣಮಿಸಿದೆ. ಆದರೆ, ಇದೇ ಮಾಸ್ಕ್ನ ಬಳಸಿಕೊಂಡು ವ್ಯಕ್ತಿಯೊಬ್ಬ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಯತ್ನಿಸಿರುವ ಘಟನೆ ದೇವರ ನಾಡು ಕೇರಳದ ಕೊಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ.
UAE ನಿಂದ ಕೇರಳಕ್ಕೆ ಆಗಮಿಸಿದ್ದ ಪ್ರಯಾಣಿಕನೊಬ್ಬ ತನ್ನ N95 ಮಾಸ್ಕ್ನಲ್ಲಿ ಬರೋಬ್ಬರಿ 40 ಗ್ರಾಂ ಚಿನ್ನವನ್ನು ಅಡಗಿಸಿದ್ದ. ಖಚಿತ ಮಾಹಿತಿಯ ಮೇರೆಗೆ ಪ್ರಯಾಣಿಕನನ್ನು ಏರ್ಪೋರ್ಟ್ನ ಏರ್ ಇಂಟೆಲಿಜೆನ್ಸ್ ವಿಭಾಗದ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತ ಆರೋಪಿ ಮಾಸ್ಕ್ನಲ್ಲಿದ್ದ ಚಿನ್ನದ ಒಟ್ಟು ಮೌಲ್ಯ 2 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.