IndiGo: ವಿಮಾನ ತಡವಾಗಿದ್ದಕ್ಕೆ ಪೈಲಟ್​ ಮೇಲೆ ಪ್ರಯಾಣಿಕನಿಂದ ಹಲ್ಲೆ

|

Updated on: Jan 15, 2024 | 8:10 AM

ದಟ್ಟ ಮಂಜಿನಿಂದಾಗಿ ಕಡಿಮೆ ಗೋಚರತೆ ಇರುವ ಕಾರಣ ಉತ್ತರ ಭಾರತದಾದ್ಯಂತ ಎಲ್ಲಾ ವಿಮಾನಗಳು ಕೆಲವ ಗಂಟೆಗಳ ಕಾಲ ತಡವಾಗಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ವಿಮಾನ 7ಕ್ಕೂ ಹೆಚ್ಚು ಗಂಟೆಗಳ ಕಾಲ ತಡವಾಗಿ ಹೊರಟಿದ್ದಕ್ಕೆ ಕೋಪಗೊಂಡ ಪ್ರಯಾಣಿಕ ಪೈಲಟ್​ನನ್ನು ಥಳಿಸಿರುವ ಘಟನೆ ದೆಹಲಿ ಏರ್​ಪೋರ್ಟ್​ ಅಲ್ಲಿ ವರದಿಯಾಗಿದೆ.

IndiGo: ವಿಮಾನ ತಡವಾಗಿದ್ದಕ್ಕೆ ಪೈಲಟ್​ ಮೇಲೆ ಪ್ರಯಾಣಿಕನಿಂದ ಹಲ್ಲೆ
ವಿಮಾನ
Follow us on

ದಟ್ಟ ಮಂಜಿನಿಂದಾಗಿ ಕಡಿಮೆ ಗೋಚರತೆ ಇರುವ ಕಾರಣ ಉತ್ತರ ಭಾರತದಾದ್ಯಂತ ಎಲ್ಲಾ ವಿಮಾನಗಳು ಕೆಲವ ಗಂಟೆಗಳ ಕಾಲ ತಡವಾಗಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ವಿಮಾನ 7ಕ್ಕೂ ಹೆಚ್ಚು ಗಂಟೆಗಳ ಕಾಲ ತಡವಾಗಿ ಹೊರಟಿದ್ದಕ್ಕೆ ಕೋಪಗೊಂಡ ಪ್ರಯಾಣಿಕ ಪೈಲಟ್​ನನ್ನು ಥಳಿಸಿರುವ ಘಟನೆ ದೆಹಲಿ ಏರ್​ಪೋರ್ಟ್​ ಅಲ್ಲಿ ವರದಿಯಾಗಿದೆ.

ಮತ್ತೊಂದು ಘಟನೆ
ವಿಮಾನವು ಕೋಲ್ಕತ್ತಾದಿಂದ ಬೆಂಗಳೂರಿಗೆ ಹೊರಡಬೇಕಿತ್ತು, 7 ಗಂಟೆಗಳ ಕಾಲ ಕಾಯಬೇಕಾಯಿತು. ಎಂದೂ ಈ ರೀತಿಯಾಗಿರಲಿಲ್ಲ, ಇಂಡಿಗೋದಲ್ಲಿ ತುಂಬಾ ಕೆಟ್ಟ ಅನುಭವ ಅನುಭವಿಸಿದ್ದೇನೆ, ಇಂಡಿಗೋ ವಿಮಾನ 7 ಗಂಟೆಗಳ ತಡವಾಗಿ ಹೊರಟಿದ್ದಕ್ಕೆ ನಾನು ಅಂತಾರಾಷ್ಟ್ರೀಯ ವಿಮಾನವನ್ನು ಮಿಸ್​ ಮಾಡಿಕೊಂಡಿದ್ದೇನೆ ಎಂದು ದೇಬರ್ಘ್ಯದಾಸ್ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ರಾತ್ರಿ 10 ಗಂಟೆಗೆ ಹೊರಡಬೇಕಿದ್ದ ವಿಮಾನ, 6 ಗಂಟೆಯ ವಿಳಂಬದ ನಂತರ 4.41ಕ್ಕೆ ಹೊರಟಿತು. ಇದರಿಂದಾಗಿ ಅಂತಾರಾಷ್ಟ್ರೀಯ ವಿಮಾನ ಮಿಸ್​ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇಂಡಿಗೋ ಸಂಸ್ಥೆಯ ತಪ್ಪಿನಿಂದ ಇದು ನಡೆದರೂ ಕೂಡ ಮತ್ತೊಂದು ಟಿಕೆಟ್​ ಕಾಯ್ದಿರಿಸಲು ಯಾವುದೇ ಸಹಾಯ ಮಾಡಿಲ್ಲ ಎಂದು ದಾಸ್ ಹೇಳಿದ್ದಾರೆ.
ದೆಹಲಿಯ ಕನಿಷ್ಠ ತಾಪಮಾನವು ಭಾನುವಾರ 3.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

ಮತ್ತಷ್ಟು ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ ಶೇ. 35ರಷ್ಟು ಏರಿಕೆ

ಸಾಮಾನುಗಳನ್ನು ಹಿಂದಿರುಗಿಸಲು ಸುಮಾರು 2 ಗಂಟೆಗಳ ಸಮಯವನ್ನು ತೆಗೆದುಕೊಂಡಿದ್ದಾರೆ. ಬಳಿಕ ಇಂಡಿಗೋ ಪೋಸ್ಟ್​ ಮಾಡಿದ್ದು, ನಿಮ್ಮ ಹಣವನ್ನು ಹಿಂದಿರುಗಿಸಿದ್ದೇವೆ ಒಂದು ವಾರದಲ್ಲಿ ನಿಮ್ಮ ಖಾತೆಗೆ ಬರಲಿದೆ ನಮ್ಮ ತಪ್ಪಿಗಾಗಿ ಕ್ಷಮೆಯಾಚಿಸುತ್ತೇವೆ ಎಂದು ಬರೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ