ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಕೊಲೆ ಪ್ರಕರಣ: ಮರಣೋತ್ತರ ಪರೀಕ್ಷೆ ವರದಿಯಿಂದ ಹಲವು ಸಂಗತಿಗಳು ಬಹಿರಂಗ
ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹಲವು ಸಂಗತಿಗಳು ಬಹಿರಂಗಗೊಂಡಿವೆ. ದಿವ್ಯಾ ತಲೆಯಲ್ಲಿ ಗುಂಡು ಪತ್ತೆಯಾಗಿದೆ, ಹೋಟೆಲ್ ಮಾಲೀಕ ಅಭಿಜೀತ್ ಸಿಂಗ್ ಅವರು ಆಕೆಯ ತಲೆಗೆ ಅತ್ಯಂತ ಸಮೀಪದಿಂದ ಗುಂಡು ಹಾರಿಸಿದ್ದ
ಮಾಜಿ ರೂಪದರ್ಶಿ ದಿವ್ಯಾ ಪಹುಜಾ(Divya Pahuja) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹಲವು ಸಂಗತಿಗಳು ಬಹಿರಂಗಗೊಂಡಿವೆ. ದಿವ್ಯಾ ತಲೆಯಲ್ಲಿ ಗುಂಡು ಪತ್ತೆಯಾಗಿದೆ, ಹೋಟೆಲ್ ಮಾಲೀಕ ಅಭಿಜೀತ್ ಸಿಂಗ್ ಅವರು ಆಕೆಯ ತಲೆಗೆ ಅತ್ಯಂತ ಸಮೀಪದಿಂದ ಗುಂಡು ಹಾರಿಸಿದ್ದರು.
ದಿವ್ಯಾಳ ಮರಣೋತ್ತರ ಪರೀಕ್ಷೆ ಹಿಸಾರ್ನ ಅಗ್ರೋಹಾ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಈ ವೇಳೆ ಆಕೆಯ ತಾಯಿ ಮತ್ತು ಸಹೋದರ ಆಸ್ಪತ್ರೆಯಲ್ಲಿ ಹಾಜರಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ದಿವ್ಯಾ ಕುಟುಂಬಸ್ಥರು ಮೃತದೇಹವನ್ನು ಗುರುಗ್ರಾಮಕ್ಕೆ ಕೊಂಡೊಯ್ದಿದ್ದಾರೆ.
ದಿವ್ಯಾರನ್ನು ಹತ್ಯೆ ಮಾಡಿದ 11 ದಿನಗಳ ಬಳಿಕ ಹರ್ಯಾಣದ ತೊಹಾನಾ ಕಾಲುವೆಯಲ್ಲಿ ಪತ್ತೆಯಾಗಿತ್ತು. ಜನವರಿ 2 ರಂದು ಹತ್ಯೆ ಮಡಲಾಗಿತ್ತು, ಜನವರಿ 3 ರಂದು ಬಾಲರಾಜ್ ಗಿಲ್ ಮೃತದೇಹವನ್ನು ಕಾಲುವೆಗೆ ಎಸೆದಿದ್ದರು.
ದಿವ್ಯಾಳ ಮೃತದೇಹ ಸುಮಾರು 10 ದಿನಗಳ ಕಾಲ ನೀರಿನಲ್ಲಿಯೇ ಇತ್ತು, ಕಾಲುವೆಯಿಂದ ದೇಹವನ್ನು ಹೊರತೆಗೆದಾಗ ತಲೆಯ ಮೇಲಿನ ಕೂದಲು ಕಾಣೆಯಾಗಿತ್ತು. ಹೀಗಾಗಿ ದೇಹವನ್ನು ಗುರುತಿಸುವುದು ಪೊಲೀಸರಿಗೆ ಕಷ್ಟವಾಗಿತ್ತು., ಬೆನ್ನು, ತೋಳುಗಳ ಮೇಲಿರುವ ಹಚ್ಚೆಗಳಿಂದ ತಾಯಿ ಆಕೆಯನ್ನು ಗುರುತಿಸಿದ್ದರು.
ಮತ್ತಷ್ಟು ಓದಿ: Divya Pahuja: ಕಾಲುವೆಯಲ್ಲಿ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಪತ್ತೆ
ದಿವ್ಯಾಳ ಫೋನ್ನಲ್ಲಿ ಕೆಲವು ಅಶ್ಲೀಲ ಚಿತ್ರಗಳು ಇದ್ದುದರಿಂದ ಆಕೆ ಪದೇ ಪದೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು, ಇದೇ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಅಭಿಜೀತ್ ಒಪ್ಪಿಕೊಂಡಿದ್ದಾರೆ.
ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಕೊಲೆ ಆರೋಪಿಯನ್ನು ಪಶ್ಚಿಮ ಬಂಗಾಳದಲ್ಲಿ ಪೊಲೀಸರು ಬಂಧಿಸಿದ್ದರು. ಮಾಜಿ ಮಾಡೆಲ್ನ ಶವವನ್ನು ಮತ್ತೊಬ್ಬ ಆರೋಪಿ ರವಿ ಬಾಂದ್ರಾ ಜತೆ ವಿಲೇವಾರಿ ಮಾಡಿದ್ದ ಬಾಲ್ರಾಜ್ ಗಿಲ್ ಗುರುವಾರ ಸಂಜೆ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಗಿತ್ತು.
ಗುರುಗ್ರಾಮದ ಭೂಗತ ಪಾತಕಿ ಸಂದೀಪ್ ಗಡೋಲಿ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ದಿವ್ಯಾ ಪಹುಜಾಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಸ್ವಲ್ಪ ದಿನಗಳ ಹಿಂದಷ್ಟೇ ಜಾಮೀನಿನ ಮೂಲಕ ಹೊರಬಂದಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಹೋಟೆಲ್ ಮಾಲೀಕ ಅಭಿಜಿತ್, ಕೆಲಸಗಾರರಾದ ಹೇಮರಾಜ್, ಓಂ ಪ್ರಕಾಶ್ನನ್ನು ಬಂಧಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ