ಪಾಟ್ನಾ: ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದ ನಾಲ್ವರು ಅಪ್ರಾಪ್ತರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಇನ್​​ಸ್ಟಾಗ್ರಾಂನಲ್ಲಿ ಪರಿಚಯವಾದ ನಾಲ್ವರು ಅಪ್ರಾಪ್ತರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪೊಲೀಸರ ಪ್ರಕಾರ, ನಾಲ್ವರೂ 8 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ಎಂಬುದು ವಿಚಾರಣೆ ಸಮಯದಲ್ಲಿ ತಿಳಿದುಬಂದಿದೆ.ಯುವತಿ ಮೊದಲು ಇನ್ಸ್ಟಾಗ್ರಾಮ್ನಲ್ಲಿ ಓರ್ವ ಹುಡುಗನೊಂದಿಗೆ ಸ್ನೇಹ ಬೆಳೆಸಿದ್ದಳು, ನಂತರ ಆಕೆ ಇತರ ಮೂವರೊಂದಿಗೂ ಸಂಪರ್ಕಕ್ಕೆ ಬಂದಿದ್ದಳು ಮತ್ತು ಅವರೆಲ್ಲರೊಂದಿಗೆ ನಿತ್ಯ ಮಾತುಕತೆ ಮುಂದುವರೆದಿತ್ತು. ಒಂದು ತಿಂಗಳ ಹಿಂದೆ ಅವಳು ಆರೋಪಿಗಳಲ್ಲಿ ಒಬ್ಬನ ಮನೆಗೆ ಭೇಟಿ ನೀಡಿದ್ದಳು

ಪಾಟ್ನಾ: ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದ ನಾಲ್ವರು ಅಪ್ರಾಪ್ತರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಕ್ರೈಂ
Image Credit source: NDTV

Updated on: Jun 26, 2025 | 10:47 AM

ಪಾಟ್ನಾ, ಜೂನ್ 26: ಇನ್​​ಸ್ಟಾಗ್ರಾಂನಲ್ಲಿ ಪರಿಚಯವಾದ ನಾಲ್ವರು ಅಪ್ರಾಪ್ತರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪೊಲೀಸರ ಪ್ರಕಾರ, ನಾಲ್ವರೂ 8 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ಎಂಬುದು ವಿಚಾರಣೆ ಸಮಯದಲ್ಲಿ ತಿಳಿದುಬಂದಿದೆ.

ಯುವತಿ ಮೊದಲು ಇನ್ಸ್ಟಾಗ್ರಾಮ್ನಲ್ಲಿ ಓರ್ವ ಹುಡುಗನೊಂದಿಗೆ ಸ್ನೇಹ ಬೆಳೆಸಿದ್ದಳು, ನಂತರ ಆಕೆ ಇತರ ಮೂವರೊಂದಿಗೂ ಸಂಪರ್ಕಕ್ಕೆ ಬಂದಿದ್ದಳು ಮತ್ತು ಅವರೆಲ್ಲರೊಂದಿಗೆ ನಿತ್ಯ ಮಾತುಕತೆ ಮುಂದುವರೆದಿತ್ತು.
ಒಂದು ತಿಂಗಳ ಹಿಂದೆ ಅವಳು ಆರೋಪಿಗಳಲ್ಲಿ ಒಬ್ಬನ ಮನೆಗೆ ಭೇಟಿ ನೀಡಿದ್ದಳು, ಅಲ್ಲಿ ತುಂಬಾ ಹೊತ್ತುಇಬ್ಬರೂ ಸಮಯ ಕಳೆದಿದ್ದರು. ಇದಾದ ನಂತರ, ಆಕೆ ಇತರ ಮೂವರು ಹುಡುಗರೊಂದಿಗೆ ಹೋಟೆಲ್‌ಗೆ ಭೇಟಿ ನೀಡಿದ್ದಳು, ಅಲ್ಲಿ ಅವರು ಅವಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

ಘಟನೆಯ ನಂತರ, ಹುಡುಗಿ ತನ್ನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆಯ ಸಮಯದಲ್ಲಿ, ಮೂವರು ಹುಡುಗರು ತನ್ನನ್ನು ಕೊತ್ವಾಲಿ ಪ್ರದೇಶದ ಹೋಟೆಲ್‌ಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ಮಾಡಿದ್ದಾರೆ ಆಕೆ ಹೇಳಿಕೊಂಡಿದ್ದಾಳೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಪೊಲೀಸರು ಪ್ರಸ್ತುತ ನಾಲ್ವರು ಹುಡುಗರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ವಾಕಿಂಗ್ ಹೋಗಿದ್ದ 80 ವರ್ಷದ ಅಜ್ಜಿ ಮೇಲೆ ಅತ್ಯಾಚಾರ; ಆರೋಪಿಗೆ ಗುಂಡು ಹಾರಿಸಿದ ಪೊಲೀಸರು

ತನ್ನ ಪ್ರೇಯಸಿಯ ಮಗಳ ಮೇಲೆ ಅತ್ಯಾಚಾರ
ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿ, ಖಾಸಗಿ ಭಾಗಕ್ಕೆ ಸ್ಕ್ರೂಡ್ರೈವರ್ ಹಾಕಿ ವಿಕೃತಿ ಮೆರೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಜೋಗೇಶ್ವರಿ ಉಪನಗರದಲ್ಲಿ ಈ ಘಟನೆ ನಡೆದಿದೆ. ಮೇಘವಾಡಿ ಪೊಲೀಸರು 24 ವರ್ಷದ ಯುವಕ ಮತ್ತು ಆತನ ಗೆಳತಿಯನ್ನು ಬಂಧಿಸಿದ್ದಾರೆ. ಮತ್ತು ಅವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಗಂಭೀರ ಅಪರಾಧ ಪ್ರಕರಣ ದಾಖಲಿಸಿದ್ದಾರೆ.

ಆ ವ್ಯಕ್ತಿ ತನ್ನ ಗೆಳತಿಯ ಕೇವಲ 10 ವರ್ಷದ ಅಪ್ರಾಪ್ತ ಮಗಳ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಕ್ರೌರ್ಯದ ಮಿತಿಯನ್ನು ಮೀರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಕ್ತಿ ಅಪ್ರಾಪ್ತ ಬಾಲಕಿಯ ಖಾಸಗಿ ಭಾಗಗಳಿಗೆ ಸ್ಕ್ರೂಡ್ರೈವರ್ ಹಾಕಿದ್ದಲ್ಲದೇ ಇಡೀ ಕೃತ್ಯದ ವೀಡಿಯೊವನ್ನು ಚಿತ್ರೀಕರಿಸಿದ್ದ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:46 am, Thu, 26 June 25