ಪತ್ರಾ ಚಾವ್ಲ್ ಭೂಹಗರಣಕ್ಕೆ (Patra ‘Chawl’ redevelopment case)ಸಂಬಂಧಿಸಿದಂತೆ ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್ (Sanjay Raut) ಅವರ ಪತ್ನಿ ವರ್ಷಾ ರಾವತ್ (Varsha Raut) ಅವರಿಗೆ ಇಂದು (ಗುರುವಾರ) ಜಾರಿ ನಿರ್ದೇಶನಾಲಯ ಸಮನ್ಸ್ ಕಳುಹಿಸಿದೆ. ವಿಶೇಷ ನ್ಯಾಯಾಲಯ ಸಂಜಯ್ ರಾವತ್ ಅವರ ಇಡಿ ಕಸ್ಟಡಿಯನ್ನು ಇಂದು ಆಗಸ್ಟ್ 8ರವರೆಗೆ ವಿಸ್ತರಿಸಿದ ಬೆನ್ನಲ್ಲೇ ವರ್ಷಾ ಅವರಿಗೆ ಈ ಸಮನ್ಸ್ ಕಳುಹಿಸಲಾಗಿದೆ. ವರ್ಷಾ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಇಡಿ ಸಮನ್ಸ್ ಕಳುಹಿಸಿದೆ. ಸಂಜಯ್ ರಾವತ್ ಅವರ ಇಡಿ ಕಸ್ಟಡಿ ಬಗ್ಗೆ ಇಂದು ಮುಂಬೈ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ, ಯಾವುದೋ ವ್ಯಕ್ತಿಯಿಂದ ವರ್ಷಾ ರಾವತ್ ಬ್ಯಾಂಕ್ ಖಾತೆಗೆ ₹1.08 ಕೋಟಿ ಹಣ ಬಂದಿದೆ ಎಂದು ಇಡಿ ಹೇಳಿದ. ರಾಜ್ಯಸಭಾ ಸಂಸದ ಸಂಜಯ್ ರಾವತ್ ಮನೆ ಮೇಲೆ ಇಡಿ ದಾಳಿ ನಡೆಸಿದ ನಂತರ ಕಳೆದ ಭಾನುವಾರ ರಾತ್ರಿ ಅವರನ್ನು ಬಂಧಿಸಲಾಗಿತ್ತು.
ಪಾತ್ರ ಚಾವ್ಲ್ ಪುನರಭಿವೃದ್ಧಿಯಲ್ಲಿ ಆರ್ಥಿಕ ಅವ್ಯವಹಾರ ಮಚತ್ತು ಅದಕ್ಕೆ ಸಂಬಂಧಿಸಿದ ಆರ್ಥಿಕ ಆಸ್ತಿ ವಹಿವಾಟುಗಳಲ್ಲಿ ಅಕ್ರಮ ನಡೆದಿದ್ದು ಅದರಲ್ಲಿ ಶಿವಸೇನಾ ಸಂಸದರ ಪತ್ನಿ ಭಾಗಿಯಾಗಿದ್ದಾರೆ ಎಂದು ಇಡಿ ಆರೋಪಿಸಿದೆ.
ಏಪ್ರಿಲ್ ತಿಂಗಳಲ್ಲಿ ವರ್ಷಾ ರಾವತ್ ಮತ್ತು ಸಂಜಯ್ ರಾವತ್ ಅವರ ಇಬ್ಬರು ಸಹಾಯಕರಿಗೆ ಸೇರಿದ 11.15 ಕೋಟಿಗಿಂತಲೂ ಮೊತ್ತದ ಹಣವನ್ನು ಇಡಿ ಮುಟ್ಟುಗೋಲು ಹಾಕಿತ್ತು.
ಮುಟ್ಟುಗೋಲು ಹಾಕಿದ ಆಸ್ತಿಯಲ್ಲಿ ಸಂಜಯ್ ರಾವತ್ ಅವರ ಸಹಾಯಕ, ಪಾಲ್ಘಾರ್ ಮತ್ತು ಪಾದ್ಘಾದಲ್ಲಿರುವ ಗುರು ಆಶಿಶ್ ಕನ್ ಸ್ಟ್ರಕ್ಷನ್ ಪ್ರೈ ಲಿಮಿಟೆಡ್ ನ ಮಾಜಿ ನಿರ್ದೇಶಕ ಪ್ರವೀಣ್ ಎಂ ರಾವತ್ ಅವರಿಗೆ ಸೇರಿದ್ದಾಗಿದೆ.
ಈ ಆಸ್ತಿಯಲ್ಲಿ ವರ್ಷಾ ರಾವತ್ ಅವರಿಗೆ ಸೇರಿದ ಮುಂಬೈನ ಸಬರ್ಬ್ ದಾದರ್ ನಲ್ಲಿರುವ ಫ್ಲಾಟ್ ಮತ್ತು ವರ್ಷಾ ರಾವತ್ ಮತ್ತು ಸಂಜಯ್ ರಾವತ್ ಆಪ್ತ ಸುಜಿತ್ ಪಾಟ್ಕರ್ ಪತ್ನಿ ಸ್ವಪ್ನಾ ಪಾಟ್ಕರ್ ಅವರಿಗೆ ಸೇರಿದ ಅಲಿ ಭಾಗ್ ಖಿಲಿಂ ಬೀಚ್ ನಲ್ಲಿರುವ 8 ಜಮೀನು ಸೇರಿದೆ ಎಂದು ಇಡಿ ಹೇಳಿದೆ.
Published On - 4:31 pm, Thu, 4 August 22