‘ಖಾನ್​ ಎಂಬ ಒಂದೇ ಕಾರಣಕ್ಕೆ ಅವರು ಟಾರ್ಗೆಟ್​ ಆಗಿದ್ದಾರೆ..‘-ಡ್ರಗ್ಸ್​ ಕೇಸ್​ ಬಗ್ಗೆ ಮೆಹಬೂಬ್​ ಮುಫ್ತಿ ವಿಚಿತ್ರ ಹೇಳಿಕೆ

| Updated By: Lakshmi Hegde

Updated on: Oct 11, 2021 | 3:45 PM

ಬಾಲಿವುಡ್​ ಸ್ಟಾರ್ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್ ಸದ್ಯ ಎನ್​ಸಿಬಿ ಕಸ್ಟಡಿಯಲ್ಲಿ ಇದ್ದಿದ್ದು ದೇಶಾದ್ಯಂತ ಸುದ್ದಿಯಾಗಿದೆ. ಮುಂಬೈ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್​ ಪಾರ್ಟಿಯಲ್ಲಿ ಆರ್ಯನ್​ ಖಾನ್​ ಕೂಡ ಇದ್ದರು.

‘ಖಾನ್​ ಎಂಬ ಒಂದೇ ಕಾರಣಕ್ಕೆ ಅವರು ಟಾರ್ಗೆಟ್​ ಆಗಿದ್ದಾರೆ..‘-ಡ್ರಗ್ಸ್​ ಕೇಸ್​ ಬಗ್ಗೆ ಮೆಹಬೂಬ್​ ಮುಫ್ತಿ ವಿಚಿತ್ರ ಹೇಳಿಕೆ
ಮೆಹಬೂಬಾ ಮುಫ್ತಿ
Follow us on

ಇದೀಗ ಮಾದಕದ್ರವ್ಯ ಸೇವನೆ ಕೇಸ್(Mumbai Cruise Drugs) ​​ನಲ್ಲಿ ಆರ್ಯನ್​ ಖಾನ್​ ಸಿಕ್ಕಿಬಿದ್ದಿರುವ ಕುರಿತಾಗಿ ಜಮ್ಮು-ಕಾಶ್ಮೀರ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ (Mehbooba Mufti )ವಿಚಿತ್ರ ಹೇಳಿಕೆಯನ್ನು ನೀಡಿದ್ದಾರೆ. ಆರ್ಯನ್​ ಖಾನ್​​ ತಮ್ಮ ಉಪನಾಮದಿಂದಾಗಿ ಹೀಗೆ ಕೇಂದ್ರೀಯ ಕಾನೂನು ಜಾರಿ ಸಂಸ್ಥೆಗಳಿಂದ ಟಾರ್ಗೆಟ್​ ಆಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಬಿಜೆಪಿ ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಆಶೀಶ್​ ಆರೋಪಿಯಾಗಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಕೇಂದ್ರ ಸರ್ಕಾರ ಆರ್ಯನ್​ ಖಾನ್​ ಬೆನ್ನು ಬಿದ್ದಿದೆ ಎಂದು ಟೀಕಿಸಿದ್ದಾರೆ.  

ಟ್ವೀಟ್​ ಮಾಡಿರುವ ಮೆಹಬೂಬ ಮುಫ್ತಿ,  ನಾಲ್ಕು ರೈತರನ್ನು ಕೊಂದ ಆರೋಪ ಹೊತ್ತಿರುವ ಕೇಂದ್ರ ಸಚಿವರ ಪುತ್ರನ ವಿರುದ್ಧ ತನಿಖೆ ಶುರು ಮಾಡುವ ಬದಲು, 23 ವರ್ಷದ ಯುವಕನ ಹಿಂದೆ ಬಿದ್ದಿವೆ. ಆತನ ಉಪನಾಮ ಖಾನ್​ ಎಂದು ಇರುವುದೇ ಇದಕ್ಕೆ ಮುಖ್ಯ ಕಾರಣ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

ಬಾಲಿವುಡ್​ ಸ್ಟಾರ್ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್ ಸದ್ಯ ಎನ್​ಸಿಬಿ ಕಸ್ಟಡಿಯಲ್ಲಿ ಇದ್ದಿದ್ದು ದೇಶಾದ್ಯಂತ ಸುದ್ದಿಯಾಗಿದೆ. ಮುಂಬೈ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್​ ಪಾರ್ಟಿಯಲ್ಲಿ ಆರ್ಯನ್​ ಖಾನ್​ ಕೂಡ ಇದ್ದರು. ಆರ್ಯನ್​ ಖಾನ್​ಗೆ ಕೋರ್ಟ್​ ಜಾಮೀನು ನಿರಾಕರಿಸಿದ್ದು, ವಿಚಾರಣೆ ಮುಂದುವರಿದಿದೆ. ಇದೇ ಹೊತ್ತಲ್ಲಿ ಉತ್ತರಪ್ರದೇಶದಲ್ಲಿ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕೇಂದ್ರ ಗೃಹ ಇಲಾಖೆ ಸಚಿವ ಅಜಯ್​ ಮಿಶ್ರಾ ಪುತ್ರ ಆಶೀಶ್​ ಮಿಶ್ರಾ ಹೆಸರು ಕೇಳಿಬಂದಿದ್ದು, ಮೊನ್ನೆ ಅವರನ್ನು ಬಂಧಿಸಲಾಗಿದೆ. ಆದರೆ ಆಶೀಶ್​ ಮಿಶ್ರಾರ ಬಂಧನಕ್ಕೆ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ತುಂಬ ವಿಳಂಬ ಮಾಡಿತು ಎಂಬ ಆರೋಪವೂ ಕೇಳಿಬರುತ್ತಿದೆ. ಈಗ ಈ ವಿಚಾರವನ್ನೇ ಇಟ್ಟುಕೊಂಡು ಮೆಹಬೂಬಾ ಮುಫ್ತಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ದಸರಾ ವಿಶೇಷ ಕೊಡುಗೆ; ನಾರಾಯಣ ಹೃದಯಾಲಯದಿಂದ ಮೈಸೂರಿನಲ್ಲಿ ಒಂದು ಸಾವಿರ ಜನರಿಗೆ ಉಚಿತ ಲಸಿಕೆ