ಕರ್ನಾಟಕದ ಒಬ್ಬರು ಜಡ್ಜ್ ಸೇರಿ 7 ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆ ಮಾಡಿದ ಕೇಂದ್ರ ಸರ್ಕಾರ
ವರ್ಗಾವಣೆಯಾದ ಹೈಕೋರ್ಟ್ ನ್ಯಾಯಾಧೀಶರ ಹೆಸರು ಮತ್ತು ಅವರು ಎಲ್ಲಿಂದ-ಎಲ್ಲಿಗೆ ವರ್ಗಗೊಂಡಿದ್ದಾರೆ ಎಂಬುದರ ಸಮಗ್ರ ವಿವರ ಇಲ್ಲಿದೆ.
ಏಳು ಹೈಕೋರ್ಟ್ ನ್ಯಾಯಾಧೀಶರುಗಳ ವರ್ಗಾವಣೆ ಮಾಡಿ, ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅವರಲ್ಲಿ ಒಬ್ಬರು ಕರ್ನಾಟಕದ ಜಡ್ಜ್ ಕೂಡ ಇದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದು, ಭಾರತದ ಸಂವಿಧಾನದಲ್ಲಿ ನೀಡಲಾದ ಅಧಿಕಾರದ ಅನ್ವಯ, ರಾಷ್ಟ್ರಪತಿಗಳು ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೊಂದಿಗೆ ಸಮಾಲೋಚನೆ ನಡೆಸಿ ಒಟ್ಟು ಏಳು ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೇ, ವರ್ಗಾವಣೆಯಾದ ನ್ಯಾಯಾಧೀಶರ ಹೆಸರು ಮತ್ತು ಎಲ್ಲಿಂದ-ಎಲ್ಲಿಗೆ ವರ್ಗಗೊಂಡಿದ್ದಾರೆ ಎಂಬುದರ ವಿವರವನ್ನೂ ತಿಳಿಸಿದ್ದಾರೆ.
1. ನ್ಯಾಯಾಧೀಶ ರಂಜನ್ ಗುಪ್ತಾ: ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ನಿಂದ ಪಾಟ್ನಾ ಹೈಕೋರ್ಟ್ಗೆ ವರ್ಗಾವಣೆ. 2. ನ್ಯಾ.ಟಿ.ಎಸ್. ಶಿವಜ್ಞಾನಂ: ಮದ್ರಾಸ್ ಹೈಕೋರ್ಟ್ನಿಂದ ಕೋಲ್ಕತ್ತ ಹೈಕೋರ್ಟ್ಗೆ ವರ್ಗ. 3. ನ್ಯಾ.ಸುರೇಶ್ವರ್ ಠಾಕೂರ್: ಹಿಮಾಚಲ ಪ್ರದೇಶದಿಂದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ಗೆ ವರ್ಗಾವಣೆ 4. ಪಿ.ಬಿ.ಭಜಂತ್ರಿ-ಕರ್ನಾಟಕ ಹೈಕೋರ್ಟ್ನಿಂದ ಪಾಟ್ನಾ ಹೈಕೋರ್ಟ್ಗೆ ವರ್ಗಾವಣೆ 5. ಸಂಜೀವ್ ಪ್ರಕಾಶ ಶರ್ಮ- ರಾಜಸ್ಥಾನ ಹೈಕೋರ್ಟ್ನಿಂದ ಪಟ್ನಾ ಹೈಕೋರ್ಟ್ಗೆ ವರ್ಗ. 6. ಟಿ.ಅಮರನಾಥ್ ಗೌಡ: ತೆಲಂಗಾಣ ಹೈಕೋರ್ಟ್ನಿಂದ ತ್ರಿಪುರಕ್ಕೆ ವರ್ಗಾವಣೆ 7. ಸುಭಾಷ್ ಚಂದ್: ಅಲಹಬಾದ್ ಹೈಕೋರ್ಟ್ನಿಂದ ಜಾರ್ಖಂಡ ಹೈಕೋರ್ಟ್ಗೆ ಟ್ರಾನ್ಸ್ಫರ್
In exercise of the power conferred under the Constitution of India, Hon’ble President of India, in consultation with Hon’ble Chief Justice of India, is pleased to transfer the following High Court Judges. pic.twitter.com/a6UpKOZakC
— Kiren Rijiju (@KirenRijiju) October 11, 2021
ಇದನ್ನೂ ಓದಿ: ಆಫ್ರಿಕಾದ ಜೀವನಶೈಲಿಗೆ ವೇದಿಕೆಯಾದ ದಸರಾ ಬೊಂಬೆಗಳು; ದಂಪತಿ ವಿಶೇಷ ಆಸಕ್ತಿಗೆ ಸಾಕ್ಷಿಯಾದ ದಸರಾ
Published On - 1:39 pm, Mon, 11 October 21